ಉಡುಪಿ : ಮಣಿಪಾಲ್ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಬೆಡ್ ಕೊರತೆ: ಬರುವ ಮುನ್ನ ಕರೆ ಮಾಡಿ  -Vishwanews24

Featured, ಉಡುಪಿ

ಉಡುಪಿ : ಮಣಿಪಾಲ್ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಬೆಡ್ ಕೊರತೆ; ಬರುವ ಮುನ್ನ ಕರೆ ಮಾಡಿ : ಡಾ. ಅವಿನಾಶ್‌ ಶೆಟ್ಟಿ ವಿನಂತಿ -Vishwanews24

ಬೆಡ್ ಕೊರತೆ ಉಂಟಾಗಿದ್ದು ಕೊರೊನಾ ಕಾರಣದಿಂದ ಅಲ್ಲ..

ಬರುವ ಮುನ್ನ 9686692603 ಮೊಬೈಲ್ ಗೆ ಕರೆ ಮಾಡಿ

ಉಡುಪಿ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ ಬೆಡ್‌ ಮತ್ತು ಐಸಿಯು ಬೆಡ್ ಕೊರತೆ ಉಂಟಾಗಿದೆ. ಹೀಗಾಗಿ ರೋಗಿಗಳನ್ನು ಕರೆತರುವ ಮುನ್ನ ಮೊಬೈಲ್‌ (9686692603)ಗೆ ಕರೆ ಮಾಡುವಂತೆ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್‌ ಶೆಟ್ಟಿ ವಿನಂತಿಸಿದ್ದಾರೆ.

ಬೆಡ್ ಕೊರತೆ ಉಂಟಾಗಿದ್ದು ಕೊರೊನಾ ಕಾರಣದಿಂದ ಅಲ್ಲ. ಬದಲಾಗಿ ವರ್ಷದಲ್ಲಿ ಒಂದೆರಡು ಬಾರಿ ಈ ರೀತಿ ಆಗಿರುತ್ತದೆ. ಕಳೆದ ವರ್ಷವೂ ಈ ರೀತಿ ಆಗಿತ್ತು. ಆದರೆ ಜನರಿಗೆ ತೊಂದರೆ ಆಗದಂತೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕರ ಮಾಹಿತಿಗಾಗಿ ಈ ಪ್ರಕಟಣೆ ಹೊರಡಿಸಲಾಗಿದೆ ಎಂದು ಡಾ. ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.

ನನ್ನಲ್ಲಿ ಮುಖ್ಯಮಂತ್ರಿ ಆಗುವ ಎಲ್ಲಾ ಅರ್ಹತೆಗಳು ಇದೆ : ಯತ್ನಾಳ್ -Vishwanews24