ಉಡುಪಿ : ಮಲಬಾರ್ ಗೋಲ್ಡ್ನಲ್ಲಿ ‘ನಾಯ್ರಾ’ ನೂತನ ಸಂಗ್ರಹ ಅನಾವರಣ -vishwanews24
ಉಡುಪಿ : ಮಲಬಾರ್ ಗೋಲ್ಡ್ನಲ್ಲಿ ‘ನಾಯ್ರಾ’ ನೂತನ ಸಂಗ್ರಹ ಅನಾವರಣ
ಉಡುಪಿ : ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ‘ನಾಯ್ರಾ’ ನೂತನ ನ್ಯಾಚುರಲ್ ಜೆಮ್ಸ್ಟೋನ್ ಕಲೆಕ್ಷನ್ ಬುಧವಾರ ಅನಾವರಣಗೊಳಿಸಲಾಯಿತು.
ಮುಖ್ಯ ಅತಿಥಿಗಳಾದ ಬ್ರಿಂದಾ ನಿಹಾಲ್ ಪೂಜಾರಿ ಹಾಗೂ ತರನಾ ಶೆಟ್ಟಿ ನೂತನ ಸಂಗ್ರಹವನ್ನು ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಬ್ರಿಂದಾ, ಮಲಬಾರ್ ಗೋಲ್ಡ್ನಲ್ಲಿ ಅತ್ಯಂತ ಸುಂದರವಾದ ಆಭರಣಗಳ ಸಂಗ್ರಹಗಳಿವೆ. ಇಲ್ಲಿನ ಎಲ್ಲ ರೀತಿಯ ಸಂಗ್ರಹಗಳಿಗೂ ಉತ್ತಮ ಬೇಡಿಕೆ ಇದೆ. ಇದೀಗ ನೂತನವಾಗಿ ಅನಾವರಣಗೊಂಡ ಸಂಗ್ರಹ ಕೂಡ ಅತ್ಯಂತ ಆಕರ್ಷಣೀಯವಾಗಿದೆ ಎಂದರು.
ತರನಾ ಶೆಟ್ಟಿ ಮಾತನಾಡಿ, ಮಲಬಾರ್ ಗೋಲ್ಡ್ನಲ್ಲಿ ಇಡೀ ಕುಟುಂಬಕ್ಕೆ ಬೇಕಾದ ಆಭರಣಗಳ ಸಂಗ್ರಹ ಇದೆ. ನಾನು ಇಲ್ಲಿನ ಧೀಘಾವರ್ಧಿಯ ಗ್ರಾಹಕಿ. ಎಲ್ಲ ರೀತಿಯ ಆಭರಣ, ಹೊಸ ವಿನ್ಯಾಸ ತುಂಬಾ ಇಷ್ಟ ಆಗುತ್ತದೆ. ಸಿಬ್ಬಂದಿಗಳು ಕೂಡ ಗ್ರಾಹಕರಿಗೆ ಉತ್ತಮವಾಗಿ ಸ್ಪಂದಿಸುತ್ತಾರೆ ಮತ್ತು ಮಾರ್ಗದರ್ಶನ ಮಾಡುತ್ತಾರೆ. ಇಲ್ಲಿ ಶಾಂಪಿಂಗ್ ಮಾಡುವುದೇ ಒಂದು ರೀತಿಯ ಖುಷಿ ಎಂದು ಹೇಳಿದರು.
ಸಿಬ್ಬಂದಿ ಸಮೀರ್ ನಾಯ್ರಾ ಬಗ್ಗೆ ಮಾಹಿತಿ ನೀಡಿ, ನಾಯ್ರಾ ಇದರಲ್ಲಿ ಎರಡು ಬಗೆಯ ಅಂದರೆ ಅನ್ಕಟ್ ಸ್ಟೋನ್ ಮತ್ತು ಜಮ್ಸ್ಟೋನ್ಗಳ ಸಂಗ್ರಹವನ್ನು ಬಿಡುಗಡೆ ಮಾಡಲಾಗಿದೆ. ಇದರ ವಿಶೇಷ ಅಂದರೆ ಮೋಗಲ್ ಹಾಗೂ ವಿಕ್ಟೋರಿಯಾ ಎರಡೂ ಪರಿಕಲ್ಪನೆ ಪ್ರಸ್ತುತ ಕಾಲಘಟ್ಟಕ್ಕೆ ಅನುಗುಣವಾಗಿ ಹೊಸ ತಲೆಮಾರಿಗೆ ಇಷ್ಟ ಆಗುವ ರೀತಿಯ ವಿನ್ಯಾಸ ಮಾಡಲಾಗಿದೆ. ಆ ರೀತಿಯ ಹಲವು ಸಂಗ್ರಹಗಳನ್ನು ಹೊರತರಲಾಗಿದೆ ಎಂದರು.
ಇದರಲ್ಲಿ ಕೇವಲ ನೆಕ್ಲೇಸ್ ಮಾತ್ರವಲ್ಲದೆ ಕಿವಿಯೋಲೆ, ಉಂಗುರ, ಬಳೆಗಳನ್ನು ಕೂಡ ಅನುವಾರಣಗೊಳಿಸಲಾಗಿದೆ. ಜೆಮ್ಸ್ಟೋನ್ನಲ್ಲಿ ಎಲಿಫಾಂಟ್ ಹಾಗೂ ಮ್ಯಾಂಗೋ, ನೈಸರ್ಗಿಕ ಡೈಮಂಡ್ ಆಕಾರಗಳನ್ನು ಹೊರತರಲಾಗಿದೆ. ಪ್ರತಿಯೊಂದು ಸಂಗ್ರಹದಲ್ಲೂ ವಿಭಿನ್ನವಾದ ಶೈಲಿ ವಿನ್ಯಾಸ, ಕಟಿಂಗ್, ಮಾದರಿ ಎಲ್ಲವೂ ಇದೆ. ಕಲರ್ ಸ್ಟೋನ್ ಮತ್ತು ಜೆಮ್ಸ್ಟೋನ್ಗಳಿದ್ದು, ೨೨ ಕ್ಯಾರೆಟ್ನಲ್ಲಿ ಈ ಆಭರಣಗಳನ್ನು ಲಾಂಚ್ ಮಾಡಲಾಗಿದೆ,ವಿಶೇಷ ಕೊಡುಗೆಯಾಗಿ
ಜೆಮ್ಸ್ಟೋನ್ ಹಾಗೂ ಅನ್ಕಟ್ ಜ್ಯುವೆಲ್ಲರಿಯ ಮೇಕಿಂಗ್ ಚಾರ್ಜ್ ಮೇಲೆ ಶೇ.೨೫ರವರೆಗೆ ರಿಯಾಯಿತಿ ನೀಡಲಾಗುವುದು. ಈ ಆಫರ್ ಸೆ.೧೪ರವರೆಗೆ ಲಭ್ಯ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಉಡುಪಿ ಶಾಖಾ ವ್ಯವಸ್ಥಾಪಕರಾದ ಪುರಂದರ ತಿಂಗಳಾಯ, ಸಂದೀಪ್ ಸಫಲ್ಯ, ಮಾರುಕಟ್ಟೆ ವ್ಯವಸ್ಥಾಪಕ ತಂಝೀಮ್ ಶಿರ್ವ ಮೊದಲಾದವರು ಉಪಸ್ಥಿತರಿದ್ದರು. ಸಿಬ್ಬಂದಿ ವಿಘ್ನೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
