ಉಡುಪಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಸಂಸ್ಥೆಯ ವತಿಯಿಂದ ಲಾಕ್ಡೌನ್ ಸಂದರ್ಭದಲ್ಲಿ ರೇಷನ್ ಕಿಟ್ ವಿತರಣೆ – Vishwanews24
ಉಡುಪಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಸಂಸ್ಥೆಯ ವತಿಯಿಂದ ಲಾಕ್ಡೌನ್ ಸಂದರ್ಭದಲ್ಲಿ ರೇಷನ್ ಕಿಟ್ ವಿತರಣೆ – Vishwanews24
ಉಡುಪಿ ಜಿಲ್ಲೆಯ ಕಾಪು, ಕಾರ್ಕಳ, ಕಟಪಾಡಿ, ಉದ್ಯಾವರ ಅರ್ಹ ಫಲಾನುಭವಿ 66 ಕುಟುಂಬಕ್ಕೆ ಉಡುಪಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಸಂಸ್ಥೆಯ ವತಿಯಿಂದ ಪರಿಸರದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಲಾಕ್ಡೌನ್ ಸಂದರ್ಭದಲ್ಲಿ ರೇಷನ್ ಕಿಟ್ ವಿತರಿಸಲಾಯಿತು, ಜಿಲ್ಲಾದ್ಯಂತ 3966 ವರೆಗೆ ಕಿಟ್ ಗಳನ್ನು ನೀಡಲಾಗಿದೆ.
ಕಾಪು ಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರುಷೋತ್ತಮ ಮೂಳೂರು ಇವರ ಮನವಿ ಮೇರೆಗೆ ರಕ್ಷಣಾ ಪುರ ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರಾದ ಉದಯ್ ಕಾಪು ಇವರಿಗೆ ಕಿಟ್ ಹಸ್ತಾಂತರಿಸಲಾಯಿತು.
ಕಟಪಾಡಿಯಲ್ಲಿ ರಾಷ್ಟ್ರೀಯ ಮೀನುಗಾರರ ಸಂಘಟನೆ ಇದರ ಪ್ರಧಾನ ಕಾರ್ಯದರ್ಶಿ ಜಯಶ್ರೀ ಕೋಟ್ಯಾನ್ ರವರ ಮನವಿ ಮೇರೆಗೆ,ಉದ್ಯವಾರದಲ್ಲಿ ಸತೀಶ್ ಉದ್ಯವಾರ ರವರ ಮನವಿ ಮೇರೆಗೆ, ಕಾರ್ಕಳದಲ್ಲಿ ಸ್ತ್ರೀ ಪಾತ್ರಧಾರಿ ಕಲಾವಿದರ ಪರವಾಗಿ ಮರ್ವಿನ್ ಶಿರ್ವ ರವರ ಮನವಿ ಮೇರೆಗೆ, ದಿನೇಶ್ ರಾವ್ ರವರ ಮನವಿ ಮೇರೆಗೆ ರೇಷನ್ ಕಿಟ್ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ಮಲಬಾರ್ ಚಾರಿಟಿ ಉಸ್ತುವಾರಿ ತಂಝೀಮ್ ಶಿರ್ವ,ದಿನೇಶ್ ರಾವ್,
ತಸ್ಲಿಮ್,ಫಯಾಝ್ಉಪಸ್ಥಿತರಿದ್ದರು.


