ಉಡುಪಿ : ಮೀಡಿಯಾ ಮುಂದೆ ಐದು ನಿಮಿಷಕ್ಕೆ ಸೀಮಿತವಾದ ಕಾಂಗ್ರೆಸ್ ವಿರುದ್ಧ ಉಡುಪಿ ಬಿಜೆಪಿ ಯುವಮೋರ್ಚ ಪ್ರತಿಭಟನೆ : vishwanews24

Featured, ಉಡುಪಿ

ಮೀಡಿಯಾ ಮುಂದೆ ಐದು ನಿಮಿಷಕ್ಕೆ ಸೀಮಿತವಾದ ಕಾಂಗ್ರೆಸ್ ವಿರುದ್ಧ ಉಡುಪಿ ಬಿಜೆಪಿ ಯುವಮೋರ್ಚ ಪ್ರತಿಭಟನೆ ..

ಪ್ರತಿಭಟನಾ ಹೈಡ್ರಾಮವನ್ನು ಒಂದೇ ನಿಮಿಷದಲ್ಲಿ ಹತ್ತಿಕ್ಕಿದ ಪೊಲೀಸರು..

ರಾಜ್ಯದಾದ್ಯಂತ ಕಾಂಗ್ರೆಸ್ ಕಚೇರಿ ಮುತ್ತಿಗೆ ಹಾಕುವ ಪ್ರತಿಭಟನೆ ಉಡುಪಿಯಲ್ಲಿ ವಿಫಲ..

ಉಡುಪಿ: ಕಾಂಗ್ರೆಸ್ ರಾಜ್ಯಸಭಾ ಸದಸ್ಯ ನಸೀರ್ ಹುಸೇನ್ ಬೆಂಬಲಿಗರು ದೇಶದ್ರೋಹದ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯದಾದ್ಯಂತ ಕಾಂಗ್ರೆಸ್ ಕಚೇರಿ ಮುತ್ತಿಗೆ ಹಾಕುವ ಪ್ರತಿಭಟನೆ ಉಡುಪಿಯಲ್ಲಿ ವಿಫಲವಾಗಿದೆ.

ಸುಮಾರು ನೂರೈವತ್ತು ಮಂದಿಗೆ ಸೀಮಿತವಾಗಿ ಸೇರಿದ್ದ ಬಿಜೆಪಿ ಕಾರ್ಯಕರ್ತರು ಉಡುಪಿಯ ಬ್ರಹ್ಮಗಿರಿ ಸರ್ಕಲ್ ಬಳಿ ಸೇರಿ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿ-ಲಯನ್ಸ್ ಭವನದ ಬಳಿ ಹಾಕಿದ್ದ ಬ್ಯಾರಿಕೇಡ್ ಬಳಿ ನುಗ್ಗಲು ಪ್ರಯತ್ನಿಸಿದ ಯುವಮೋರ್ಚ ಕಾರ್ಯಕರ್ತರನ್ನು ಪೊಲೀಸರು ತಡೆದ ಸಂಧರ್ಭದಲ್ಲಿ ಕಾರ್ಯಕರ್ತರು ಸ್ವಯಂಪ್ರೇರಿತವಾಗಿ ಪೋಲಿಸ್ ವ್ಯಾನ್ ಹತ್ತುವ ಮುಖೇನ ಪ್ರತಿಭಟನೆಗೆ ಮಂಗಳ ಹಾಡಲಾಯಿತು.ಈ ಹೈಡ್ರಾಮವನ್ನು ಕಂಡ ಸಾರ್ವಜನಿಕರು ಇದೊಂದು ಚುನಾವಣಾ ತಂತ್ರ ಎಂದು ವಿಶ್ಲೇಷಿಸದರೇ ಕಾಂಗ್ರೆಸ್ ಈ‌ ಪ್ರತಿಭಟನೆಯನ್ನು ವ್ಯಂಗ್ಯವಾಡಿದೆ.

ಉಡುಪಿ :  ಕಾಂಗ್ರೆಸ್ ಕಚೇರಿಯತ್ತ ನುಗ್ಗಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರು  , ಹಲವು ನಾಯಕರು ಪೊಲೀಸರ ವಶಕ್ಕೆ – Vishwanews24

Leave a Reply