ಉಡುಪಿ : ಮೂರು ತಿಂಗಳ ವೇತನ ಬಾಕಿ ಆರೋಪಿಸಿ ಬಿ.ಆರ್ ಶೆಟ್ಟಿ ಆಸ್ಪತ್ರೆ ಸಿಬ್ಬಂದಿಗಳ ಪ್ರತಿಭಟನೆ – Vishwanews24
ಉಡುಪಿ : ಮೂರು ತಿಂಗಳ ವೇತನ ಬಾಕಿ ಆರೋಪಿಸಿ ಬಿ.ಆರ್ ಶೆಟ್ಟಿ ಆಸ್ಪತ್ರೆ ಸಿಬ್ಬಂದಿಗಳ ಪ್ರತಿಭಟನೆ – Vishwanews24
ಉಡುಪಿ : ಮೂರು ತಿಂಗಳಿಂದ ಸಂಬಳ ನೀಡಲಿಲ್ಲ ಎಂದು ಆರೋಪಿಸಿ ಉಡುಪಿಯ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು, ನಸ್೯ಗಳು ಸೇರಿದಂತೆ ಸಿಬ್ಬಂದಿ ಮುಷ್ಕರ ನಡೆಸಿದ್ದಾರೆ.
ಬಿ.ಆರ್ ಶೆಟ್ಟಿ ಸಂಸ್ಥೆ ನಡೆಸುತ್ತಿರುವ ಆಸ್ಪತ್ರೆಯಲ್ಲಿ ಮೂರು ತಿಂಗಳಿಂದ ವೈದ್ಯರು, ನಸ್೯ ಸೇರಿದಂತೆ ಸಿಬ್ಬಂದಿಗಳಿಗೆ ಸಂಬಳ ಸಿಗದ ಕಾರಣ ಅವರು ಮುಷ್ಕರ ನಡೆಸುತ್ತಿದ್ದು, ಇದರಿಂದ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಗರ್ಭಿಣಿಯರು, ರೋಗಿಗಳು ತೊಂದರೆಗೊಳಗಾಗಿದ್ದಾರೆ.
ಆಸ್ಪತ್ರೆಯ 200ಕ್ಕೂ ಹೆಚ್ಚು ಸಿಬ್ಬಂದಿ ಮುಷ್ಕರ ನಡೆಸುತ್ತಿರುವುದರಿಂದ ಇಂದು ಬೆಳಗ್ಗಿನಿಂದ ಯಾವುದೇ ಚಿಕಿತ್ಸೆಯೂ ಇಲ್ಲಿ ಸಿಗುತ್ತಿಲ್ಲ ಎಂದು ರೋಗಿಗಳು ದೂರಿದ್ದಾರೆ.
