ಉಡುಪಿ : ಯಕ್ಷಗಾನ ಕಲಾರಂಗ – ವಿದ್ಯಾಪೋಷಕ್ ವಿನಮ್ರ ಸಹಾಯಧನ ವಿತರಣ ಸಮಾರಂಭ – Vishwanews24

Featured, ಉಡುಪಿ

ಉಡುಪಿ : ಯಕ್ಷಗಾನ ಕಲಾರಂಗ – ವಿದ್ಯಾಪೋಷಕ್ ವಿನಮ್ರ ಸಹಾಯಧನ ವಿತರಣ ಸಮಾರಂಭ – Vishwanews24

ಉಡುಪಿ : ಯಕ್ಷಗಾನ ಕಲಾರಂಗ (ರಿ.), ಉಡುಪಿ ಇದರ ಅಂಗ ಸ0ಸ್ಥೆಯಾದ ವಿದ್ಯಾಪೋಷಕ್ ಉಡುಪಿ ಜಿಲ್ಲೆಯ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ೧೬ ವರ್ಷಗಳಿಂದ ಆರ್ಥಿಕನೆರವು ನೀಡುತ್ತಿದ್ದು ಈ ವರ್ಷದ ವಿನಮ್ರ ಸಹಾಯಧನ ವಿತರಣಾ ಸಮಾರಂಭವು ದಶಂಬರ್ ೫, ಭಾನುವಾರ ಪೂರ್ಣಪ್ರಜ್ಞಾ ಕಾಲೇಜಿನ ಸಭಾಭವನದಲ್ಲಿ ಸಂಪನ್ನಗೊಳ್ಳಲ್ಲಿದೆ.

ಅಂಬಲಪಾಡಿ ದೇವಳದ ಧರ್ಮದರ್ಶಿಗಳಾದ ಡಾ. ನಿ. ಬೀ. ವಿಜಯ ಬಲ್ಲಾಳರು ಬೆಳಿಗ್ಗೆ ೧೦.೦೦ ಗಂಟೆಗೆ ಉದ್ಘಾಟಿಸಲಿದ್ದಾರೆ. ಈ ಉದ್ಘಾಟನಾ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಎಚ್. ಎಸ್. ಶೆಟ್ಟಿಯವರು ವಹಿಸಲಿದ್ದಾರೆ. ಅಭ್ಯಾಗತರಾಗಿ ಶ್ರೀ ರತ್ನಕುಮಾರ್, ಸಿ ಎ ಗಣೇಶ್ ಕಾಂಚನ್, ಡಾ. ಜಿ. ಎಸ್. ಚಂದ್ರಶೇಖರ, ಡಾ. ಜೆ. ಎನ್. ಭಟ್, ಶ್ರೀ ರಾಘವೇಂದ್ರ ಕಿಣಿ, ಶ್ರೀ ಪಿ. ವಾಸುದೇವ ಐತಾಳ್, ಶ್ರೀ ವಿಠಲ ಪೈ, ಶ್ರೀ ಪ್ರವೀಣ್ ಗುಡಿ ಭಾಗವಹಿಸಲಿದ್ದಾರೆ.

ಪುತ್ತೂರು: 20 ವರ್ಷದ ವಿವಾಹಿತ ಮಹಿಳೆ ಆತ್ಮಹತ್ಯೆ – Vishwanews24

ಅಪರಾಹ್ನ ೨.೩೦ ಗಂಟೆಗೆ ನಾಡೋಜ ಡಾ. ಜಿ. ಶಂಕರ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ವಿನಮ್ರ ಸಹಾಯ ವಿತರಣಾ ಸಮಾರಂಭದಲ್ಲಿ ಕರ್ನಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕರಾದ ಶ್ರೀ ಎಂ. ಎಸ್. ಮಹಾಬಲೇಶ್ವರ ಅವರು ಶುಭಾಶಂಸನೆ ಗೈಯಲಿದ್ದಾರೆ. ಶ್ರೀ ಪ್ರಮೋದ್ ಮಧ್ವರಾಜ್, ಶ್ರೀ ರವಿರಾಜ್ ಬೆಳ್ಮ, ಶ್ರೀ ಆನಂದ ಸಿ. ಕುಂದರ್, ಶ್ರೀ ಭುವನೇಂದ್ರ ಕಿದಿಯೂರು, ಡಾ. ತಲ್ಲೂರು ಶಿವರಾಮ ಶೆಟ್ಟಿ, ಶ್ರೀ ಮಂಜುನಾಥ ಹೆಗ್ಡೆ, ಶ್ರೀ ಸಜಿತ್ ಹೆಗ್ಡೆ, ಶ್ರೀ
ಆನಂದ ಪಿ ಸುವರ್ಣ, ಶ್ರೀಮತಿ ವಿಲಾಸಿನಿ ಬಾಬುರಾಯ ಶೆಣೈ, ಶ್ರೀ ಯು. ವಿಶ್ವನಾಥ ಶೆಣೈ, ಶ್ರೀ ಹರಿಯಪ್ಪ ಕೋಟ್ಯಾನ್, ಶ್ರೀ ಪುರುಷೋತ್ತಮ ಪಟೇಲ್, ಶ್ರೀ ವಕ್ವಾಡಿ ಪ್ರವೀಣ್ ಶೆಟ್ಟಿ, ಡಾ. ವೈ. ಹರಿಶ್ಚಂದ್ರ, ಶ್ರೀ ಪಿ. ಪುರುಷೋತ್ತಮ ಶೆಟ್ಟಿ, ಶ್ರೀ ಗುರುಪ್ರಕಾಶ್ ಶೆಟ್ಟಿ, ಶ್ರೀ ರಾಜಗೋಪಾಲ ಆಚಾರ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.

ಅಂದು ೧೦೨೩ ವಿದ್ಯಾರ್ಥಿಗಳಿಗೆ ರೂಪಾಯಿ ೭೪,೧೦,೫೦೦/- ವಿತರಣೆಯಾಗಲಿದೆ. ೩ ವಿದ್ಯಾರ್ಥಿಗಳಿಗೆ ಸೋಲಾರ್ ದೀಪ ಮತ್ತು ೨ ವಿದ್ಯಾಥಿಗಳಿಗೆ ಲ್ಯಾಪ್‌ಟಾಪ್ ನೀಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್,     ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.