ಉಡುಪಿ : ರಂಗಕರ್ಮಿ ಪ್ರೊ. ಮೇಟಿ ಮುದಿಯಪ್ಪ ನಿಧನ  – Vishwanews24

Featured, ಉಡುಪಿ

ಉಡುಪಿ : ರಂಗಕರ್ಮಿ ಪ್ರೊ. ಮೇಟಿ ಮುದಿಯಪ್ಪ ನಿಧನ  – Vishwanews24

ಉಡುಪಿ : ನಿವೃತ್ತ ಪ್ರಾಂಶುಪಾಲ, ರಂಗನಟ, ಸಾಹಿತಿ ಮೇಟಿ ಮುದಿಯಪ್ಪ (೬೬) ನಿನ್ನೆ (೧೭-೦೩-೨೦೨೨) ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು. ಉಡುಪಿಯ ಹಲವಾರು ಸಾಂಸ್ಕೃತಿಕ, ಸಾಮಾಜಿಕ ಸೇವಾ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಉಡುಪಿಯ ರಂಗಭೂಮಿಯ ಜತೆ ಕಾರ್ಯದರ್ಶಿಯಾಗಿದ್ದ ಇವರು, ಯಕ್ಷಗಾನ ಕಲಾರಂಗದ ಕಾರ್ಯಕಾರಿ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

ಇವರ ಹಲವಾರು ಕವನ ಸಂಕಲನಗಳು ಪ್ರಕಟಗೊಂಡಿವೆ. ಪತ್ನಿ, ಈರ್ವರು ಪುತ್ರರು ಹಾಗೂ ಅಪಾರ ಶಿಷ್ಯ ವರ್ಗವನ್ನು ಅಗಲಿದ್ದಾರೆ.

ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಮ್. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

ಪಡಿತರದಾರರಿಗೆ ಏಪ್ರಿಲ್‌ನಿಂದ ಗೋಧಿ ವಿತರಣೆಗೆ ಬ್ರೇಕ್‌ ; ಗೋಧಿ ಬದಲು ಪ್ರತಿ ಸದಸ್ಯನಿಗೆ 1 ಕೆ.ಜಿ. ಅಕ್ಕಿ ವಿತರಣೆ – Vishwanews24

Leave a Reply