ಉಡುಪಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಸಂದರ್ಭದಲ್ಲಿ ಉಡುಪಿಯ ಆದರ್ಶ ಆಸ್ಪತ್ರೆಯ ಮುಖ್ಯಸ್ಥ ಡಾ. ಚಂದ್ರಶೇಖರ್ ಅವರ ಹೆಸರನ್ನು ಮೊದಲ ಪಟ್ಟಿಯಲ್ಲಿ ಘೋಷಿಸಿ, ಬಳಿಕ ಕೈಬಿಟ್ಟು ಮತ್ತೊಬ್ಬರನ್ನು ಆಯ್ಕೆ ಮಾಡಿರುವ ಕ್ರಮ ತೀವ್ರ ಖಂಡನೀಯ ಎಂದು ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ವೈದ್ಯಕೀಯ ಕ್ಷೇತ್ರದ ಜತೆಗೆ ಹಲವು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಡಾ. ಚಂದ್ರಶೇಖರ್ ಅವರು ಸದಾ ಜನರ ಧ್ವನಿಯಾಗಿ, ಸಮಾಜದ ಹಿತಕ್ಕಾಗಿ ಶ್ರಮಿಸುತ್ತಿದ್ದಾರೆ.
ಇಂತಹ ಗೌರವಾನ್ವಿತ ವ್ಯಕ್ತಿತ್ವದ ಸೇವೆಯನ್ನು ಕಡೆಗಣಿಸಿರುವುದು ಅತ್ಯಂತ ನೋವಿನ ಸಂಗತಿ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಈ ನಡೆ ಡಾ. ಚಂದ್ರಶೇಖರ್ ಅವರಂತಹ ವ್ಯಕ್ತಿತ್ವಕ್ಕೆ ಅಪಮಾನ ಮಾಡಿದಂತಾಗಿದೆ. ಸರ್ಕಾರದ ಈ ಕ್ರಮದ ವಿರುದ್ಧ ತೀವ್ರ ಆಕ್ರೋಶ ಹಾಗೂ ಉಗ್ರ ಖಂಡನೆ ವ್ಯಕ್ತಪಡಿಸುವುದಾಗಿ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಪ್ರೀತಿಸುತ್ತಿದ್ದ ಯುವತಿಯ ಸಹೋದರರು ಹಾಗೂ ಇತರರಿಂದ ಹಲ್ಲೆ ನಡೆಸಿದ ಆರೋಪ.. 11 ಮಂದಿ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ…
ಮಂಗಳೂರು: ಎಸ್ ಐಆರ್ ವಿರುದ್ಧ 'ಸಾಮೂಹಿಕ ಜನತಾ ನಡಿಗೆ' ಮೋದಿಯವರೇ, ನೀವು ಹೆಚ್ಚು ದಿನ ಅಧಿಕಾರದಲ್ಲಿರುವುದಿಲ್ಲ; ನಿಮ್ಮ ಪಾಪದ ಕೊಡ…
ಎಸ್‌ಐಟಿಯಿಂದ ಸೌಜನ್ಯ ಪ್ರಕರಣದ ಮರುತನಿಖೆ ಆರಂಭ; ಧರ್ಮಸ್ಥಳದ ಕಾಡಿಗೆ ಎಂಟ್ರಿ, ಮೃತದೇಹ ಪತ್ತೆಯಾದ ಜಾಗಕ್ಕೆ ಭೇಟಿ ಮಂಗಳೂರು: ಸೌಜನ್ಯ ಅತ್ಯಾಚಾರ…
ತಮಿಳುನಾಡು ಜೈಲಿನಿಂದ ಖೈದಿಗಳು ಪರಾರಿ ಪ್ರಕರಣ: ಹಿರಿಯ ಜೈಲಾಧಿಕಾರಿ ಅಮಾನತು, ಸಿಬ್ಬಂದಿ ವರ್ಗಾವಣೆ : ಸಿಎಂ ವಿಜಯ್ ಆದೇಶ ಚೆನ್ನೈ:…
ರಾಜ್ಯೋತ್ಸವ ಪಟ್ಟಿ ತಿದ್ದುಪಡಿ: ಉಡುಪಿಯ ವೈದ್ಯ ಡಾ.ಚಂದ್ರಶೇಖರ್ ಹೆಸರು ಕೈಬಿಟ್ಟಿದಕ್ಕೆ ಸರಕಾರದ ವಿರುದ್ಧ ತೀವ್ರ ಅಸಮಾಧಾನ ಉಡುಪಿ: ಕರ್ನಾಟಕ ಸರಕಾರ…
ಬೆಂಗಳೂರು: ಖಾಸಗಿ ಹೋಟೆಲ್ನ ಈಜುಕೊಳದಲ್ಲಿ ವಿದ್ಯುತ್ ಅವಘಡ : ವಿದೇಶಿ ಪ್ರಜೆಗಳಿಬ್ಬರು ಸಾವು ; ಮತ್ತಿಬ್ಬರಿಗೆ ಗಂಭೀರ ಗಾಯ ಬೆಂಗಳೂರು: ಖಾಸಗಿ ಹೋಟೆಲ್ನ…