ಉಡುಪಿ :  ರೈತರು ಆರ್ಥಿಕ ನೆರವು ಪಡೆಯಲು ಇ-ಕೆವೈಸಿ ಕಡ್ಡಾಯ – vishwanews24

Featured, ಉಡುಪಿ

 ಉಡುಪಿ :  ರೈತರು ಆರ್ಥಿಕ ನೆರವು ಪಡೆಯಲು ಇ-ಕೆವೈಸಿ ಕಡ್ಡಾಯ

     ಉಡುಪಿ : ಪಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿ.ಎಂ. ಕಿಸಾನ್) ಯೋಜನೆಯಡಿ ಕೇಂದ್ರ ಸರ್ಕಾರದಿಂದ ನೀಡಲಾಗುವ ಆರ್ಥಿಕ ನೆರವನ್ನು ಪಡೆಯಲು ಫಲಾನುಭವಿಗಳು ಕೆವೈಸಿ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಕೆವೈಸಿ ಪೂರ್ಣಗೊಳಿಸದ ರೈತ ಫಲಾನುಭವಿಗಳಿಗೆ ಯೋಜನೆಯ ಮುಂದಿನ ಕಂತಿನ ಆರ್ಥಿಕ ನೆರವು ಬಿಡುಗಡೆಯಾಗುವುದಿಲ್ಲ.

ಜಿಲ್ಲೆಯಲ್ಲಿ ಪಿ.ಎಂ. ಕಿಸಾನ್ ಯೋಜನೆಯಡಿ ಒಟ್ಟು 1,82,174 ಮಂದಿ ರೈತರು ನೋಂದಾಯಿಸಿಕೊ0ಡಿರುತ್ತಾರೆ. ನೋಂದಾಯಿಸಿಕೊ0ಡಿರುವ ರೈತ ಫಲಾನುಭವಿಗಳ ಪೈಕಿ ಉಡುಪಿ ತಾಲೂಕಿನಲ್ಲಿ 55,466, ಕುಂದಾಪುರ ತಾಲೂಕಿನಲ್ಲಿ 73,985 ಹಾಗೂ ಕಾರ್ಕಳ ತಾಲೂಕಿನಲ್ಲಿ 35,821 ಮಂದಿ ಸೇರಿದಂತೆ ಒಟ್ಟು 1,65,272 ಮಂದಿ ರೈತ ಫಲಾನುಭವಿಗಳು ಇದುವರೆಗೆ ಯೋಜನೆಯಡಿ ಆರ್ಥಿಕ ನೆರವು ಪಡೆದಿರುತ್ತಾರೆ.

ಉಡುಪಿ:  ವ್ಯಕ್ತಿ ನಾಪತ್ತೆ – vishwanews24

ಕೆವೈಸಿ ಪೂರ್ಣಗೊಳಿಸುವಂತೆ ಜಿಲ್ಲೆಯ ರೈತ ಫಲಾನುಭವಿಗಳಿಗೆ ಕೃಷಿ ಇಲಾಖೆಯಿಂದ ಈಗಾಗಲೇ ಮಾಹಿತಿ ಹಾಗೂ ಸೂಚನೆ ನೀಡಲಾಗಿದ್ದು, ಆದಾಗ್ಯೂ ಇನ್ನೂ ಕೆಲವು ರೈತ ಫಲಾನುಭವಿಗಳು ಕೆವೈಸಿ ಮಾಡಿಸಿಕೊಳ್ಳದೆ ಇರುವುದಾಗಿ ಗಮನಕ್ಕೆ ಬಂದಿರುತ್ತದೆ.

ಆದ್ದರಿA, ಕೆವೈಸಿ ಮಾಡಿಸಿಕೊಳ್ಳಲು ಇದೇ ಕೊನೆಯ ಅವಕಾಶವಾಗಿದ್ದು, ಕೆವೈಸಿ ಬಾಕಿ ಇರುವ ರೈತ ಫಲಾನುಭವಿಗಳು ಯಾವುದೇ ವಿಳಂಬ ಮಾಡದೆ ತಮ್ಮ ಆಧಾರ್ಕಾರ್ಡ್ ಹಾಗೂ ಆಧಾರ್ಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಯೊAದಿಗೆ ಸಮೀಪದ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್ ಕೇಂದ್ರ ಅಥವಾ ಸಾಮಾನ್ಯ ಸೇವಾ ಕೇಂದ್ರ ಕ್ಕೆ ಭೇಟಿ ನೀಡಿ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬೇಕುನಿಗದಿತ ಅವಧಿಯೊಳಗೆ ಕೆವೈಸಿ ಪೂರ್ಣಗೊಳಿಸದ ಫಲಾನುಭವಿಗಳಿಗೆ ಯೋಜನೆಯ ಮುಂದಿನ ಕಂತಿನ ಆರ್ಥಿಕ ನೆರವು ದೊರೆಯದಿರುವ ಸಾಧ್ಯತೆ ಇರುವುದರಿಂದ, ಸಂಬAಧಿಸಿದ ರೈತ ಫಲಾನುಭವಿಗಳು ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕೂಡಲೇ ಕೆವೈಸಿ ಮಾಡಿಸಿಕೊಳ್ಳುವಂತೆ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

 ಉಡುಪಿ : ನೇಪಾಳದಲ್ಲಿ ಸಂಕಷಕ್ಕೆ ಸಿಲುಕಿರುವ ಉಡುಪಿ ಜಿಲ್ಲೆಯ ಜನರ ಮಾಹಿತಿ ನೀಡಲು ಸೂಚನೆ – vishwanews24

 

Leave a Reply