ಉಡುಪಿ : ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆಗೆ ಲಕ್ಷಾಂತರ ರೂಪಾಯಿ ವಂಚನೆ – Vishwanews24

Featured, ಉಡುಪಿ

ಉಡುಪಿ : ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆಗೆ ಲಕ್ಷಾಂತರ ರೂಪಾಯಿ ವಂಚನೆ – Vishwanews24

ಉಡುಪಿ: ವಿದೇಶದಲ್ಲಿ ಕೆಲಸ ಕೊಡಿಸುವದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂಪಾಯಿ ಹಣ ವಂಚಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಯುವತಿ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಬಿಸಿಎ ಪದವೀಧರೆಯಾಗಿರುವ ಶಾಲಿನಿ ವಂಚನೆಗೊಳಗಾದ ಯುವತಿ. ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಕೋಲಾರ ಜಿಲ್ಲೆಯ ಮಾಲೂರು ನಿವಾಸಿ ನಿತೀನ್‌ ಕುಮಾರ್ ವಂಚಿಸಿದ ಯುವಕನಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ದುಬೈ ಹಾಗೂ ಅಮೆರಿಕದ ಪ್ರಮುಖ ಕಂಪೆನಿಯಲ್ಲಿ ಒಳ್ಳೆಯ ಕೆಲಸ ಕೊಡಿಸುವುದಾಗಿ ನಂಬಿಸಿ ಶಾಲಿನಿಯವರ ಹೆಸರಿನಲ್ಲಿರುವ ಕುಂದಾಪುರ ಯೂನಿಯನ್ ಬ್ಯಾಂಕ್ ಖಾತೆಯಿಂದ 22,63,999ರೂ., ಕೋರಮಂಗಳ ಶಾಖೆಯ ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ 5,85,000, ಶಾಲಿನಿ ಅವರ ತಂದೆ ಕೆ.ನರಸಿಂಹ ಪೂಜಾರಿ ಅವರ ಕುಂದಾಪುರದ ಎಸ್‌ಬಿಐ ಖಾತೆಯಿಂದ 5,16,302 ರೂ. ಸೇರಿದಂತೆ ಒಟ್ಟು 33,65,501 ರೂ.ನಗದು ಹಣವನ್ನು ತನ್ನ ಕೋರಮಂಗಲ ಶಾಖೆಯ ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆಗೆ ಮೊಬೈಲ್‌ನ ವಿವಿಧ ಆ್ಯಪ್ ಮೂಲಕ ವರ್ಗಾಯಿಸಿಕೊಂಡಿದ್ದು, ಪಿರ್ಯಾದಿದಾರರಿಗೆ ಕೆಲಸವನ್ನು ಕೊಡಿಸದೇ, ಹಣವನ್ನು ಹಿಂದಿರುಗಿಸದೇ ಆರೋಪಿ ನಿತೀಶ್‌ ಕುಮಾರ್ ನಂಬಿಕೆ ದ್ರೋಹ, ವಂಚನೆ ಹಾಗೂ ಮೋಸವನ್ನು ಎಸಗಿರುವುಗಾಗಿ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ದೂರಿನಲ್ಲಿ ತಿಳಿಸಲಾಗಿದೆ

 

Leave a Reply