ಉಡುಪಿ: ವಿದ್ಯಾರ್ಥಿಗಳಿಗೆ MDMA ಮಾರಾಟ: ಇಬ್ಬರ ಬಂಧನ – vishwanews24
ಉಡುಪಿ: ವಿದ್ಯಾರ್ಥಿಗಳಿಗೆ MDMA ಮಾರಾಟ: ಇಬ್ಬರ ಬಂಧನ
ಉಡುಪಿ: ವಿದ್ಯಾರ್ಥಿಗಳಿಗೆ MDMA ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಮಣಿಪಾಲ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕಟಪಾಡಿಯ ಅಕ್ಕರ್ ಮಹಮ್ಮದ್ ಬ್ಯಾರಿ (44) ಹಾಗೂ ಬೆಂಗಳೂರಿನ ಸೈಯದ್ ಸುಹೇಲ್ (26) ಎಂದು ಗುರುತಿಸಲಾಗಿದೆ.
ಪೆರಂಪಳ್ಳಿ ಬ್ರಿಡ್ಜ್ ಬಳಿ ಕಾರಿನಲ್ಲಿ MDMA ಇಟ್ಟುಕೊಂಡು ಬೆಂಗಳೂರಿನಿಂದ ತಂದು ಉಡುಪಿ, ಪೆರಂಪಳ್ಳಿ ಹಾಗೂ ಮಣಿಪಾಲ ಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಸೆ.17ರ ಮಧ್ಯರಾತ್ರಿ 12.10ರ ಸುಮಾರಿಗೆ ಕಾರ್ಯಾಚರಣೆ ನಡೆಸಿ KA19-MK-2021 ನೋಂದಣಿ ಸಂಖ್ಯೆಯ ಮಾರುತಿ ಸ್ವಿಫ್ಟ್ ಕಾರನ್ನು ತಡೆದು ಆರೋಪಿಗಳನ್ನು ಬಂಧಿಸಲಾಯಿತು.
ಆರೋಪಿಗಳಿಂದ ಸುಮಾರು 1 ಲಕ್ಷ ಮೌಲ್ಯದ 30 ಗ್ರಾಂ MDMA, ₹40 ಸಾವಿರ ಮೌಲ್ಯದ ನಾಲ್ಕು ಮೊಬೈಲ್ಗಳು, ₹5 ಸಾವಿರ ಮೌಲ್ಯದ ಡಾಂಗಲ್, ₹9,500 ನಗದು ಹಾಗೂ 3 ಲಕ್ಷ ಮೌಲ್ಯದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯ ಕಲಂ 8(ಸಿ), 22(ಸಿ) ಅಡಿ ಪುಕರಣ ದಾಖಲಾಗಿದ್ದು, ಪಿಎಸ್ಐ ತಿಮ್ಮೇಶ್ ಬಿ.ಎನ್. ತನಿಖೆ ಕೈಗೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಮಂಗಳೂರು :ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಎಸ್ಡಿಪಿಐ ಯಿಂದ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ – vishwanews24
ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ಮಹೇಶ್ ಪುಸಾದ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಸಿಬ್ಬಂದಿಗಳಾದ ಪವೀಣ್ ಕುಮಾರ್, ಪ್ರವೀಣ್ ಶೆಟ್ಟಿಗಾರ್, ರಾಜೇಶ್ ಹೆರ್ಗ, ವಿಶ್ವಜಿತ್, ಸುಕುಮಾರ್ ಶೆಟ್ಟಿ, ವಿದ್ಯಾ ನಾಯಕ್, ದೀಕ್ಷಿತ್, ಉಮೇಶ್, ಲಕ್ಷ್ಮೀಶ ಹಾಗೂ ಸಲೀಂ ಪಾಲ್ಗೊಂಡಿದ್ದರು.
