ಉಡುಪಿ : ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಜಿಲ್ಲಾ ಮಹಿಳಾ ಘಟಕ ಅಸ್ತಿತ್ವಕ್ಕೆ – ಸಂಚಾಲಕಿಯಾಗಿ ತಾರಾ ಉಮೇಶ್ ಆಚಾರ್ಯ ಆಯ್ಕೆ – vishwanews24

Featured, ಉಡುಪಿ

ಉಡುಪಿ : ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಜಿಲ್ಲಾ ಮಹಿಳಾ ಘಟಕ ಅಸ್ತಿತ್ವಕ್ಕೆ – ಸಂಚಾಲಕಿಯಾಗಿ ತಾರಾ ಉಮೇಶ್ ಆಚಾರ್ಯ ಆಯ್ಕೆ

ಉಡುಪಿ :“ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ”(ಎಸ್ಎಎಸ್ಎಸ್) ಇದರ ರಾಷ್ಟ್ರೀಯ ಅಧ್ಯಕ್ಷ ಟಿ.ಬಿ.ಶೇಖರ್ ಹಾಗೂ ರಾಜ್ಯಾಧ್ಯಕ್ಷ ಡಾ.ಜಯರಾಂ ಅವರ ನಿರ್ದೇಶನದ ಮೇರೆಗೆ, ಉಡುಪಿ ಜಿಲ್ಲಾ ಎಸ್ಎಎಸ್ಎಸ್ ಮಹಿಳಾ ಘಟಕವನ್ನು ರಚಿಸಲಾಗಿದ್ದು, ಇದರ ಜಿಲ್ಲಾ ಸಂಚಾಲಕಿಯಾಗಿ ತಾರಾ ಉಮೇಶ್ ಆಚಾರ್ಯ ಇವರನ್ನು ನಿಯೋಜಿಸಲಾಗಿದೆ.

ಎಸ್ಎಎಸ್ಎಸ್ ಉಡುಪಿ ಜಿಲ್ಲಾಧ್ಯಕ್ಷರಾದ ರಾಧಾಕೃಷ್ಣ ಮೆಂಡನ್ ರವರು ಈ ಆಯ್ಕೆಯನ್ನು ಅನುಮೋದಿಸಿದ್ದು, ಇದೇ ತಿಂಗಳ ಡಿಸೆಂಬರ್ 31 ನೇ ತಾರೀಕಿನಂದು ಭಾನುವಾರ, ಬೆಳಿಗ್ಗೆ 10.30 ಗಂಟೆಗೆ ಸರಿಯಾಗಿ, ಶಬರಿಮಲೆ ಶ್ರೀ ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲೆ ಮತ್ತು ತಾಲೂಕು ,ಹಾಗೂ ಶ್ರೀ ಅಯ್ಯಪ್ಪ ಮಂದಿರ (ರಿ) ಮಲ್ಪೆ ಇದರ ಜಂಟಿ ಆಶ್ರಯದೊಂದಿಗೆ ಮಲ್ಪೆಯ ಅಯ್ಯಪ್ಪ ಮಂದಿರ ವಠಾರದಲ್ಲಿ ನಡೆಯಲಿರುವ “ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತರ ಸಮಾವೇಶ” ಮತ್ತು “ಹರಿವರಾಸನಂ ಶತಮಾನೋತ್ಸವ” ಆಚರಣೆಯ ಸಮಾರಂಭದ ಸಂದರ್ಭದಲ್ಲಿ , ಉಡುಪಿ ಜಿಲ್ಲಾ ಮಹಿಳಾ ಎಸ್ಎಎಸ್ಎಸ್ ನ ಪದಗ್ರಹಣ ಕಾರ್ಯಕ್ರಮವು ನೆರವೇರಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಮಲ್ಪೆ: ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆ – 8 ಮೀನುಗಾರರ ರಕ್ಷಣೆ, ಲಕ್ಷಾಂತರ ರೂ‌.ನಷ್ಟ – vishwanews24

Leave a Reply