ಉಡುಪಿ : ಶ್ರೀ ಕೃಷ್ಣ ಮಠಕ್ಕೆ ರಾಜ್ಯಪಾಲ ಗೆಹಲೋಟ್ ಭೇಟಿ – Vishwanews24
ಉಡುಪಿ: ಶ್ರೀಕೃಷ್ಣ ಮಠಕ್ಕೆ ರಾಜ್ಯಪಾಲ ತಾವರಚಂದ್ ಗೆಹಲೋಟ್ ಭೇಟಿ
ಉಡುಪಿ: ಕರ್ನಾಟಕ ರಾಜ್ಯಪಾಲರಾದ ತಾವರಚಂದ್ ಗೆಹಲೋಟ್ ರವರು ಗುರುವಾರ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಈ ವೇಳೆ ಪರ್ಯಾಯ ಕೃಷ್ಣಾಪುರ ಮಠದ ದಿವಾನರಾದ ವರದರಾಜ ಭಟ್ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು.
ದೇವರ ದರ್ಶನದ ಬಳಿಕ ರಾಜ್ಯಪಾಲರು ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರಿಗೆ ಹಾರ ,ಫಲವಸ್ತುಗಳನ್ನು ಸಲ್ಲಿಸಿ ಗೌರವಿಸಿದರು. ಇದೇ ವೇಳೆ ಪರ್ಯಾಯ ಶ್ರೀಪಾದರು ರಾಜ್ಯಪಾಲರನ್ನು ಸ್ಮರಣಿಕೆ ಹಾಗೂ ಶ್ರೀಕೃಷ್ಣನ ಪ್ರಸಾದ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವೆ ಶೋಭಾ ಕೇರಂದ್ಲಾಜೆ ಹಾಗೂ ರಾಜ್ಯ ಸಚಿವರುಗಳಾದ ಸುನಿಲ್ ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವೆ ಎಸ್ ಅಂಗಾರ, ಉಡುಪಿ ಶಾಸಕರಾದ ಕೆ.ರಘುಪತಿ ಭಟ್, ಬಿ.ಜೆ.ಪಿ.ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್, ಬಿ.ಜೆ.ಪಿ ಯ ಉದಯಕುಮಾರ ಶೆಟ್ಟಿ , ಜಿಲ್ಲಾಧಿಕಾರಿ ಕೂರ್ಮರಾವ್ ಎಂ, ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ, ಪರ್ಯಾಯ ಮಠದ ದಿವಾನರಾದ ವರದರಾಜ ಭಟ್ , ಪಾರುಪತ್ಯಗಾರರಾದ ಶ್ರೀನಿವಾಸ ಉಪಾಧ್ಯಾಯ ಹಾಗೂ ಪರ್ಯಾಯ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್,ವಾಸುದೇವ ಪೆರಂಪಳ್ಳಿ ಮೊದಲಾದವರು ಉಪಸ್ಥಿತರಿದ್ದರು.
ಇನ್ನು ವಾರದಲ್ಲಿ 6 ದಿನ ಮಂಗಳೂರು-ಬೆಂಗಳೂರು ರೈಲು ಸಂಚಾರ ಆರಂಭ – Vishwanews24
