ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ರಾಬರ್ಟ್ ವಾದ್ರಾ – vishwanews24

Featured, ಉಡುಪಿ

ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ರಾಬರ್ಟ್ ವಾದ್ರಾ

ಉಡುಪಿ: ಇಲ್ಲಿನ ಶ್ರೀ ಕೃಷ್ಣ ಮಂದಿರಕ್ಕೆ  ಸಂಸದೆ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಭೇಟಿ ನೀಡಿದರು.

ಅವರ ಜನ್ಮದಿನ ಪ್ರಯುಕ್ತ ಕೆಲವು ಅಭಿಮಾನಿಗಳು ಮಠದ ಸನಿಹದಲ್ಲಿ ಸಮಾರಂಭವನ್ನು ಏರ್ಪಡಿಸಿದ್ದರು. ಅಲ್ಲಿಗೆ ಬಂದಿದ್ದ ರಾಬರ್ಟ್‌ ವಾದ್ರಾ ಕೃಷ್ಣಮಂದಿರಕ್ಕೂ ಭೇಟಿ ನೀಡಿದರು. ಇತಿಹಾಸ ಪ್ರಸಿದ್ಧ ಶ್ರೀ ಅನಂತೇಶ್ವರ ದೇವಸ್ಥಾನ, ಶ್ರೀ ಕೃಷ್ಣ ದೇವರು ಹಾಗೂ ಶ್ರೀ ಮುಖ್ಯ ಪ್ರಾಣ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಇದನ್ನೂ ಓದಿ: 

ಮಂಗಳೂರನ್ನು ರಾಜ್ಯದ ಎರಡನೇ ಬೆಂಗಳೂರು ನಗರದ ರೀತಿ ಅಭಿವೃದ್ಧಿ ಮಾಡಲು ಸರಕಾರ ಬದ್ಧ: ದಿನೇಶ್ ಗುಂಡೂರಾವ್ – vishwanews24

ಈ ಸಂದರ್ಭದಲ್ಲಿ ಅವರ ನೂರಾರು ಅಭಿಮಾನಿಗಳು ಉಪಸ್ಥಿತರಿದ್ದರು. ಮಠದ ಪ್ರಧಾನ ವ್ಯವಸ್ಥಾಪಕ ಡಾ.ವಿಠೋಬಾಚಾರ್ಯ , ಅರ್ಚಕ ಸುಮನ್ ಆಚಾರ್ಯ ಪ್ರಸಾದ ನೀಡಿದರು. ಗುರುಕುಲದ ವಿದ್ಯಾರ್ಥಿಗಳೊಂದಿಗೆ ಅವರು ಸ್ವಲ್ಪ ಹೊತ್ತು ಸಮಾಲೊಚನೆ ನಡೆಸಿ, ತೆರಳಿದರು.

Leave a Reply