ಉಡುಪಿ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಬೋಟೊಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಸಮುದ್ರದಲ್ಲಿ ಕಲ್ಲಿಗೆ ಢಿಕ್ಕಿ ಹೊಡೆದು ಅರಬ್ಬಿ ಸಮುದ್ರದಲ್ಲಿ ಅಪಘಾತಕ್ಕೀಡಾಗಿ ಲಕ್ಷಾಂತರ ರೂಪಾಯಿಗಳ ನಷ್ಟ ನಂಭವಿಸಿದ್ದು ಘಟನೆಯಲ್ಲಿ ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಲ್ಪೆಯ ತೊಟ್ಟಂ ನಿವಾಸಿ ದೀಕ್ಷಿತ್ ಎನ್ನುವವರಿಗೆ ಸೇರಿದ ಸಿಹಾನ್ ಫಿಶರೀಸ್ ಬೋಟ್ ಇದಾಗಿದ್ದು ಅದರಲ್ಲಿದ್ದ 7 ಮಂದಿ ಮೀನುಗಾರರನ್ನು ಸನಿಹದಲ್ಲಿದ್ದ ಇತರ ಮೀನುಗಾರರು ರಕ್ಷಿಸಿದ್ದಾರೆ.
ಎ.3ರಂದು ರಾತ್ರಿ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೋಗಿದ್ದ ಬೋಟು ಮರುದಿನ ಬೆಳಗಿನ ಜಾವ ಭಟ್ಕಳ ತಾಲೂಕಿನ ಕೋಟೆಗುಡ್ಡೆ ಬಳಿಯಲ್ಲಿ ಮೀನುಗಾರಿಕೆ ಮಾಡುತ್ತಿರುವಾಗ ಬೋಟಿನ ಅಡಿ ಭಾಗಕ್ಕೆ ಕಲ್ಲಿನಂತಹ ಯಾವುದೋ ಒಂದು ಬಲವಾದ ವಸ್ತು ಡಿಕ್ಕಿ ಹೊಡೆದಿತ್ತು.
ಬೋಟಿನ ಅಡಿಭಾಗದಲ್ಲಿ ತೂತಾಗಿ ನೀರು ಒಳಬರಲು ಪ್ರಾರಂಭವಾಗಿದ್ದು ತಕ್ಷಣ ಬೋಟಿನ ಚಾಲಕ ಅಳ್ವೇಕೋಡಿಯ ರವಿ ನಾಗಪ್ಪ ಮೊಗೇರ ಇವರು ಬೇರೆ ಬೋಟುಗಳನ್ನು ಕರೆದು ಅದಕ್ಕೆ ತಮ್ಮ ಬೋಟನ್ನು ಕಟ್ಟಿ ಎಳೆದುಕೊಂಡು ಬರಲು ಪ್ರಯತ್ನಿಸಿದರು.
ಆದರೂ ಕೂಡ ಬೋಟಿನೊಳಗಡೆ ನೀರು ಬರಲು ಆರಂಭವಾಗಿದ್ದರಿಂದ ಬೋಟು ಮುಳುಗಡೆಯಾಗಿದ್ದು ಎಳೆದುಕೊಂಡು ಬರಲಿಕ್ಕೂ ಸಾಧ್ಯವಾಗಿಲ್ಲ.
ಈ ಬೋಟಿನಲ್ಲಿದ್ದ ಮೋಹನ, ಮಂಜುನಾಥ, ದೇವೇಂದ್ರ, ರಮೇಶ, ವೆಂಕಟೇಶ, ಕಲ್ಲೇಶಿ ಮುಂತಾದವರನ್ನು ಬೇರೆ ಬೋಟಿನವರು ರಕ್ಷಣೆ ಮಾಡಿದ್ದು ಬೋಟಿನಲ್ಲಿದ್ದ ಕೆಲವು ವಸ್ತುಗಳನ್ನು ಕೂಡಾ ರಕ್ಷಿಸಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಬೋಟ್ ಮಾಲಕ ದೀಕ್ಷಿತ್ ಈ ಬೋಟು ಮುಳುಗಡೆಯಿಂದ 80 ಲಕ್ಷ ರೂಪಾಯಿ ಹಾನಿಯಾಗಿದೆ ಎಂದು ಹೇಳಿದ್ದಾರೆ.
ಕುಂದಾಪುರ : ತ್ರಾಸಿಯಲ್ಲಿ ರಸ್ತೆ ಅಪಘಾತ: ಮತ್ತೊಬ್ಬ ಸವಾರ ಚಿಕಿತ್ಸೆ ಫಲಕಾರಿಯಾಗದೇ ಮೃತ್ಯು ಕುಂದಾಪುರ: ಎರಡು ದ್ವಿಚಕ್ರ ವಾಹನಗಳ ನಡುವೆ ಸೋಮವಾರ…
ಕೃಷಿ ಸಾಲ ಮನ್ನಾ ಮಾಡುವ ಬಗ್ಗೆ ಪರಿಶೀಲನೆ ಮಾಡುವೆ : ಸಿಎಂ ಡಿಕೆಶಿ ಕಲಬುರಗಿ: ಕೃಷಿ ಸಾಲ ಮನ್ನಾ ಮಾಡುವ…
ಮಂಗಳೂರು: ಯುವತಿ ನಾಪತ್ತೆ: ಪೋಲಿಸರಿಂದ ಪತ್ತೆಗೆ ಮನವಿ ಮಂಗಳೂರು: ಉರ್ವ ಅಶೋಕ ನಗರದ ಮೆಡ್ ಕ್ವಿಸ್ಟ್ ಲ್ಯಾಬ್ನಲ್ಲಿ ಲ್ಯಾಬ್ ಟೆಕ್ನಿಷಿಯನ್…
ಕಟಪಾಡಿಯಿಂದ ಕಳವಾದ ಆಟೋರಿಕ್ಷಾ ಬೆಳ್ತಂಗಡಿಯಲ್ಲಿ ಪತ್ತೆ ಬೆಳ್ತಂಗಡಿ : ಕಟಪಾಡಿಯಿಂದ ಕಳವಾದ ಆಟೋರಿಕ್ಷಾವೊಂದು ಸೋಮವಾರ ಬೆಳ್ತಂಗಡಿ ಪಟ್ಟಣದ ಮೂರು ಮಾರ್ಗದಲ್ಲಿ…
ಮುಂಬೈ : ಭಾರೀ ಮಳೆ - ಸಂಪೂರ್ಣ ಅಸ್ತವ್ಯಸ್ತ ; 43 ರೈಲು ಸಂಚಾರ ರದ್ದು ಮುಂಬೈ: ಕಳೆದ ಮೂರು…
ಬೆಳ್ತಂಗಡಿ: ಭಾರೀ ಮಳೆಯ ಹಿನ್ನೆಲೆ - ಜು. 8ರಿಂದ ಗಡಾಯಿಕಲ್ಲು ಚಾರಣ ನಿಷೇಧ ಬೆಳ್ತಂಗಡಿ: ತಾಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ…