ಭುವನೇಶ್ವರ: ಬುಧವಾರ ಬೆಳಗ್ಗೆ ಅತ್ಯಂತ ಬಿರುಸಿನ ‘ಅರ್ನಬ್’ ಚಂಡಮಾರುತ ಆಂಧ್ರಪ್ರದೇಶ ಕರಾವಳಿಯನ್ನು ಅಪ್ಪಳಿಸಿದೆ. ಚಂಡ ಮಾರುತದ ತೀವ್ರತೆ ಇನ್ನೂ ಎರಡು ಗಂಟೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಯನಂಗೆ ಸಮೀಪವಿರುವ ಬಾಪಟ್ಲಾ ಮತ್ತು ವಿಶಾಖಪಟ್ಟಣಂ ನಡುವಿನ ಆಂಧ್ರಪ್ರದೇಶ ಕರಾವಳಿಗೆ ಈ ಚಂಡಮಾರುತ ಅಪ್ಪಳಿಸಿದೆ. ಈ ಚಂಡಮಾರುತ ಪ್ರತಿ ಗಂಟೆಗೆ 125-135 ಕಿಮೀ ತೀವ್ರತೆಯಲ್ಲಿ ಪ್ರಾರಂಭಗೊಂಡು, ಪ್ರತಿ ಗಂಟೆಗೆ 150 ಕಿಮೀ ವೇಗದಲ್ಲಿ ಬೀಸಲಿದೆ.
ಬುಧವಾರ (ಅಕ್ಟೋಬರ್ 28) ಮುಂಜಾನೆ ಸುಮಾರು 1.20ರ ಸುಮಾರಿಗೆ ಈ ಚಂಡಮಾರುತ ಆಂಧ್ರಪ್ರದೇಶ ಕರಾವಳಿಯನ್ನು ಪ್ರವೇಶಿಸಿದೆ.
ಚಂಡಮಾರುತದ ಪ್ರಭಾವದಿಂದಾಗಿ ಆಂಧ್ರ ಪ್ರದೇಶ, ಯನಂ ಮತ್ತು ಒಡಿಶಾದ ಕೆಲ ಭಾಗಗಳಲ್ಲಿ ಭಾರಿ ಮಳೆ ಹಾಗೂ ಪ್ರಬಲ ಗಾಳಿ ಬೀಸುವುದು ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ನರ್ಸಾಪುರದಿಂದ ಸುಮಾರು 20 ಕಿಮೀ, ದಕ್ಷಿಣ-ನೈರುತ್ಯ ಯನಂನಿಂದ ಸುಮಾರು 40 ಕಿಮೀ, ದಕ್ಷಿಣ-ನೈರುತ್ಯ ಕಾಕಿನಾಡದಿಂದ 60 ಕಿಮೀ ಹಾಗೂ ಪೂರ್ವ-ಈಶಾನ್ಯ ಮಚಲಿಪಟ್ಟಣಂನಿಂದ ಸುಮಾರು 90 ಕಿಮೀ ದೂರದಲ್ಲಿ ಈ ಚಂಡಮಾರುತ ಕೇಂದ್ರೀಕೃತಗೊಂಡಿದೆ.
ಉಡುಪಿ: ಅಗ್ರಿಗೋಲ್ಡ್ ಕೋಟ್ಯಂತರ ರೂ. ವಂಚನೆ ಪ್ರಕರಣ: ಉಡುಪಿ ಎಸ್ಪಿ ಕಚೇರಿಗೆ ಮುಗಿಬಿದ್ದ ಸಂತ್ರಸ್ತರು ಉಡುಪಿ: ಆಂಧ್ರಪ್ರದೇಶ ಮೂಲದ ಅಗ್ರಿಗೋಲ್ಡ್…
ಟೋಲ್ ಪ್ಲಾಜಾದ 20 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವ ನಿವಾಸಿಗಳಿಗೆ ವಿಶೇಷ ವಾರ್ಷಿಕ ಪಾಸ್ ನವದೆಹಲಿ :ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳ…
ಬ್ರಹ್ಮಾವರ: ರೌಡಿಶೀಟರ್ ಸುಜಿತ್ ಪಿಂಟೋ ಕೊಲೆ ಪ್ರಕರಣ; ಮತ್ತೋರ್ವ ಆರೋಪಿಯ ಬಂಧನ ಬ್ರಹ್ಮಾವರ: ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಬೈಕಾಡಿ…
ಕಾಪು: ಬೀಚ್‌ನಲ್ಲಿ ಗಾಂಜಾ ಮಾರಾಟಕ್ಕೆ ಯತ್ನ – ಇಬ್ಬರ ಬಂಧನ, ₹2.85 ಲಕ್ಷ ಮೌಲ್ಯದ 5.710 ಕೆ.ಜಿ. ಗಾಂಜಾ ವಶ…
ಉಡುಪಿ : ನ. 24ರಂದು ಜಿಲ್ಲಾಮಟ್ಟದ ಗ್ಯಾರಂಟಿ ಸಮಾವೇಶ: ಅಶೋಕ್ ಕೊಡವೂರು ಉಡುಪಿ : ಜಿಲ್ಲೆಯಲ್ಲಿ ಮುಂದಿನ ನವೆಂಬರ್ 24…
ಬ್ರಹ್ಮಾವರ: ರೌಡಿಶೀಟರ್ ಸುಜಿತ್ ಪಿಂಟೊ ಕೊಲೆ; ಆರೋಪಿ ಬಂಧನ ಬ್ರಹ್ಮಾವರ: ರೌಡಿಶೀಟರ್ ಸುಜಿತ್ ಪಿಂಟೊ (43) ಎಂಬಾತನನ್ನು ರಾತ್ರಿ ಬ್ರಹ್ಮಾವರ…