ಉಡುಪಿ: ಹಿಂದೂ ರಾಷ್ಟ್ರ ಮಾಡುವುದಾಗಿ ಬ್ಯಾನರ್ ಹಾಕಿದ ವ್ಯಕ್ತಿಗಳ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ : ಅಮೃತ್ ಶೆಣೈ – Vishwanews24
ಉಡುಪಿ: ಹಿಂದೂ ರಾಷ್ಟ್ರ ಮಾಡುವುದಾಗಿ ಬ್ಯಾನರ್ ಹಾಕಿದ ವ್ಯಕ್ತಿಗಳ ಮೇಲೆ ದೇಶದ್ರೋಹ
ಪ್ರಕರಣ ದಾಖಲಿಸಿ : ಅಮೃತ್ ಶೆಣೈ
ಉಡುಪಿ: ಉಡುಪಿಯಲ್ಲಿ ಹಿಂದೂ ರಾಷ್ಟ್ರ ಮಾಡುವುದಾಗಿ ಬ್ಯಾನರ್ ಹಾಕಿದ ವ್ಯಕ್ತಿಗಳ ಮೇಲೆ ಪೊಲೀಸರು ದೇಶದ್ರೋಹದ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಸಹಬಾಳ್ವೆ ಉಡುಪಿ ಇದರ ಅಧ್ಯಕ್ಷರಾದ ಅಮೃತ್ ಶೆಣೈ ಅವರು ಆಗ್ರಹಿಸಿದ್ದಾರೆ.
ಕೆಲವೊಂದು ಹಿಂದೂ ಸಂಘಟನೆಗಳು ಭಾರತವನ್ನು ಹಿಂದೂ ರಾಷ್ಟ್ರ ಮಾಡಬೇಕು ಎನ್ನುವ ಬಗ್ಗೆ ನಿರಂತರ ಹೇಳಿಕೆಗಳನ್ನು ಪ್ರಚೋದನೆ ನೀಡುವ ಕೆಲಸವನ್ನು ಹಾದಿ ಬೀದಿಯಲ್ಲಿ ನೀಡುತ್ತಾ ಇದ್ದಾರೆ. ಆದರೆ ಯಾವುದೇ ಮುಸ್ಲಿಂ ನಾಯಕರು ಅಥವಾ ಸಂಘಟನೆಗಳು ಈ ದೇಶವನ್ನು ಮುಸ್ಲಿಂ ರಾಷ್ಟ್ರ ಮಾಡಬೇಕು ಎನ್ನುವ ಹೇಳಿಕೆಯನ್ನು ನೀಡಿದ್ದು ಇಲ್ಲ. ಆದರೆ ಈ ಹಿಂದೂ ಸಂಘಟನೆಗಳು ಮುಸ್ಲಿಂ ನಾಯಕರು, ಸಂಘಟನೆ ಹಾಗೂ ಹೆಚ್ಚು ಸಂಖ್ಯೆಯಲ್ಲಿ ಮುಸ್ಲಿಂ ಪ್ರಾಬಲ್ಯ ಇರುವ ರಾಜಕೀಯ ಪಕ್ಷಗಳ ಮೇಲೆ ಮುಸ್ಲಿಂ ರಾಷ್ಟ್ರ ಮಾಡುವ ಹುನ್ನಾರ ಮಾಡಿದ್ದಾರೆ ಎನ್ನುವ ಆರೋಪಗಳನ್ನು ಮಾಡುತ್ತಾರೆ. ಇಂತಹ ಸಂವಿಧಾನಬಾಹಿರ ಹೇಳಿಕೆ ನೀಡುವ ವ್ಯಕ್ತಿಗಳನ್ನು ತಕ್ಷಣ ಜೈಲಿಗೆ ಹಾಕಬೇಕು ಯಾಕಂದರೆ ನಾವು ಇರುವುದು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಎನ್ನುವುದನ್ನು ಯಾರೂ ಕೂಡ ಮರೆಯುವಂತಿಲ್ಲ.
ಉಡುಪಿ ಜಿಲ್ಲಾ ನೂತನ ಎಸ್ ಪಿ ಆಗಿ ಅಕ್ಷಯ್ ಮಚ್ಚೇಂದ್ರ – Vishwanews24
ಕೋಮು ಸೌಹಾರ್ದತೆಗೆ ಹೆಸರಾದ ಉಡುಪಿಯಲ್ಲಿ ಯಾರೋ ಕೆಲವೊಂದು ವ್ಯಕ್ತಿಗಳು ಇದನ್ನು ಹಿಂದೂ ರಾಷ್ಟ್ರ ಮಾಡುವುದಾಗಿ ಬಹಿರಂಗವಾಗಿ ಬ್ಯಾನರ್ ಹಾಕಿರುವುದು ನಮ್ಮ ಸರ್ವ ಧರ್ಮದ ನೆಲೆಬೀಡಿದ ಭಾರತದಲ್ಲಿ ಇದ್ದು ಮಾಡಿದ ದೊಡ್ಡ ದೇಶ ದ್ರೋಹದ ಕೃತ್ಯವಾಗಿದೆ. ಈ ಬ್ಯಾನರ್ ಅಳವಡಿಸಲು ಅವಕಾಶ ನೀಡಿದ ನಗರಸಭೆಯ ಅಧಿಕಾರಿಗಳು ಅದರಲ್ಲಿ ಇರುವ ವಿಷಯ ಏನು ಎನ್ನುವುದನ್ನು ತಿಳಿದು ಪರವಾನಿಗೆ ನೀಡಿಲ್ಲ ಆದ್ದರಿಂದ ಅವರ ಮೇಲೆ ಕೂಡ ಪ್ರಕರಣ ದಾಖಲಿಸಬೇಕು. ಬ್ಯಾನರ್ ನಲ್ಲಿ ಹೆಸರಿರುವ ವ್ಯಕ್ತಿಗಳನ್ನು ಕೂಡಲೇ ಪೊಲೀಸರು ಕರೆದು ವಿಚಾರಣೆ ನಡೆಸಿ ಅವರ ಮೇಲೆ ದೇಶದ್ರೋಹದ ಪ್ರಕರಣವನ್ನು ದಾಖಲಿಸಿ ಬಂಧಿಸಬೇಕು.
ಇಂದು ಸಾಮಾಜಿಕ ಜಾಲತಾಣದಲ್ಲಿ ಏನೋ ಬರೆದಿದ್ದಾರೆ ಎಂಬ ನೆಪವೊಡ್ಡಿ ಅವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿ ಬಂಧಿಸಿದ ಹಲವಾರು ಉದಾಹರಣೆಗಳಿವೆ. ಆದರೆ ಅವರ ಮೇಲೆ ಹಾಕಿದ ಆರೋಪಗಳನ್ನು ಸಾಬೀತು ಮಾಡುವಲ್ಲಿ ಇಲಾಖೆ ವಿಫಲವಾಗಿದೆ. ಇದೇ ವೇಳೆ ನಿಜವಾದ ದೇಶದ್ರೋಹ ಮಾಡುವ ವ್ಯಕ್ತಿಗಳು ಇಂತಹ ಬ್ಯಾನರ್ ಹಾಕಿದವರು. ಅವರು ಸಮಾಜದಲ್ಲಿ ಬಹಿರಂಗವಾಗಿ ತಿರುಗಾಟ ಮಾಡುತ್ತಾರೆ ಅಂತಹವರನ್ನು ಕೂಡಲೇ ಬಂಧಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು : ಮದರಸಾಗಳಲ್ಲಿ ಇನ್ಮುಂದೆ ರಾಷ್ಟ್ರಗೀತೆ ಕಡ್ಡಾಯ : ಶೀಘ್ರವೇ ಸರ್ಕಾರದ ಆದೇಶ – Vishwanews24

One thought on “ಉಡುಪಿ: ಹಿಂದೂ ರಾಷ್ಟ್ರ ಮಾಡುವುದಾಗಿ ಬ್ಯಾನರ್ ಹಾಕಿದ ವ್ಯಕ್ತಿಗಳ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ : ಅಮೃತ್ ಶೆಣೈ – Vishwanews24”
ಒಬ್ಬ ಪ್ರಾಮಾಣಿಕ ವ್ಯಕ್ತಿಗೆ ಸಹಾಯ ಮಾಡಲು ನಿಮ್ಮಿಂದ ಆಗುವುದಿಲ್ಲ ಮಾರ್ರೆ ಒಂದು ವಾದದಿಂದ ಹೇಳಿ ಹೇಳಿ ಸಾಕಾಗಿ ಹೋಗಿದೆ