ಉಡುಪಿ : 9 ನೇ ತರಗತಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ – Vishwanews24
ಉಡುಪಿ : 9 ನೇ ತರಗತಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ – Vishwanews24
ಉಡುಪಿ: ಮಾನಸಿಕ ಖಿನ್ನತೆಗೆ ಒಳಪಟ್ಟು ಒಂಬತ್ತನೆ ತರಗತಿಯ ವಿದ್ಯಾರ್ಥಿನಿಯೋರ್ವಳು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ನಗರದಲ್ಲಿ ಗುರುವಾರ ವರದಿಯಾಗಿದೆ.
ಮೃತ ಬಾಲಕಿಯನ್ನು ಬಾಗಲಕೋಟೆ ಮೂಲದ ನಿವಾಸಿ ಪ್ರಸ್ತುತ ನಗರದ ಬನ್ನಂಜೆ ಬಳಿ ಇರುವ ಮನೆಯಲ್ಲಿ ವಾಸವಾಗಿದ್ದ ದೀಪಾ(15) ಎಂದು ಗುರುತಿಸಲಾಗಿದೆ.
ಕಳೆದ ಕೆಲ ವರ್ಷಗಳಿಂದ ಬನ್ನಂಜೆಯಲ್ಲಿ ಬಾಡಿಗೆ ಮನೆಯಲ್ಲಿರುವ ದೀಪ ಕುಟುಂಬ ವಾಸವಾಗಿದ್ದು ದೈಹಿಕ ಅನಾರೋಗ್ಯದಿಂದ ವಿದ್ಯಾರ್ಥಿನಿ ಬಳಲುತ್ತಿದ್ದಳು. ಫಿಡ್ಸ್ ಹಾಗೂ ಇನ್ನಿತರ ಕಾಯಿಲೆಗಳಿಂದ ಬಳಲುತ್ತಿದ್ದ ಆಕೆಗೆ ಒದಿಗೆ ತೊಡಗಕಾಗುತ್ತಿದ್ದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ಎನ್ನಲಾಗಿದೆ. ಇದರಿಂದ ಮನನೊಂದ ಬಾಲಕಿ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ : ಮಕ್ಕಳಿಗೆ ಮೊಟ್ಟೆ ಕೊಡದೇ ಇರುವುದು ಸೂಕ್ತವಾದ ನಿರ್ಧಾರವಲ್ಲ : ರಘುಪತಿ ಭಟ್ – Vishwanews24
