ಉಳ್ಳಾಲ : ಚೂರಿಯಿಂದ ಇರಿದು ಮಹಿಳೆಯ ಬರ್ಬರ ಹತ್ಯೆ – Vishwanews24

Featured, ದಕ್ಷಿಣ ಕನ್ನಡ

ಉಳ್ಳಾಲ : ಚೂರಿಯಿಂದ ಇರಿದು ಮಹಿಳೆಯ ಬರ್ಬರ ಹತ್ಯೆ

ಉಳ್ಳಾಲ  : ಇಲ್ಲಿನ ಕೋಟೆಪುರ ಬಸ್ ನಿಲ್ದಾಣದ ಸಮೀಪ ಮಹಿಳೆಯನ್ನು ಚೂರಿಯಿಂದ ಇರಿದು ಹತ್ಯೆ ನಡೆಸಿರುವ ಘಟನೆ ನಿನ್ನೆ ಸಂಜೆ ನಡೆದಿದೆ.

ದೆಹಲಿ ಮೂಲದ 35-40 ವರ್ಷದ ಮಹಿಳೆಯ ಹತ್ಯೆ ನಡೆದಿದೆ. ಘಟನೆ ಬಳಿಕ ಈಕೆ ಜತೆಗಿದ್ದ ವ್ಯಕ್ತಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.

ಎರಡು ದಿನಗಳ ಹಿಂದೆ ಕೋಟೆಪುರಕ್ಕೆ ಬಂದಿದ್ದ ಜೋಡಿ, ಸ್ಥಳೀಯ ಸೆಲೂನ್ ಮಾಲೀಕರ ಮೂಲಕ ಬಾಡಿಗೆ ಮನೆಯನ್ನು ಪಡೆದುಕೊಂಡಿದ್ದರು. ಮನೆಗೆ ಬರುವಾಗ ಬಟ್ಟೆ ವ್ಯಾಪಾರ ನಡೆಸುವವರು ಎಂದು ತಿಳಿಸಿದ್ದು, ಇನ್ನೇನು ಬಟ್ಟೆಗಳು ಬರಬೇಕಿದೆ ಎಂದು ತಿಳಿಸಿ ಮನೆಯಲ್ಲಿದ್ದರು. ಇಂದು ಸಂಜೆ ವೇಳೆ ಇಬ್ಬರೂ ಮನೆಯಿಂದ ಹೊರಬಾರದೇ ಇರುವುದನ್ನು ಗಮನಿಸಿ ಯುವಕನೋರ್ವ ಮನೆಯನ್ನು ಗಮನಿಸಿದಾಗ ಶೌಚಾಲಯದೊಳಗೆ ಮಹಿಳೆಯ ಮೃತದೇಹ ಚೂರಿಯಿಂದ ಇರಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಉಡುಪಿ : ಬಂಟ ಸಮುದಾಯಕ್ಕೆ ಯಾವುದೇ ರೀತಿಯ ಅನುದಾನವನ್ನು ನೀಡದಿರುವುದು ಬೇಸರದ ಸಂಗತಿ : ಶ್ರೀ ವಿಶ್ವ ಸಂತೋಷ ಭಾರತಿ ಸ್ವಾಮೀಜಿ – Vishwanews24

ಶೌಚಾಲಯದೊಳಕ್ಕೆ ಮಹಿಳೆ ಮೃತದೇಹ ಚೂರಿಯಿಂದ ಇರಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಫಾರೆನ್ಸಿಕ್ ವಿಭಾಗ, ಶ್ವಾನದಳ ಆಗಮಿಸಿ ಪರಿಶೀಲನೆ ನಡೆಸಿದರು. ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply