ಉಳ್ಳಾಲ: ಶೇಂದಿ ತೆಗೆಯುವ ಸಂದರ್ಭ ತೆಂಗಿನ ಮರದಿಂದ ಕಾಲುಜಾರಿ ಬಿದ್ದು ವ್ಯಕ್ತಿ ಸಾವು..vishwanews24

Featured, ದಕ್ಷಿಣ ಕನ್ನಡ

ಉಳ್ಳಾಲ: ಶೇಂದಿ ತೆಗೆಯುವ ಸಂದರ್ಭ ತೆಂಗಿನ ಮರದಿಂದ ಕಾಲುಜಾರಿ ಬಿದ್ದು ವ್ಯಕ್ತಿ ಸಾವು..

ಉಳ್ಳಾಲ: ಕೊಣಾಜೆ ಮೂರ್ತೆದಾರರ ಸಂಘದ ಮಾಜಿ ನಿರ್ದೇಶಕರೋರ್ವರು ಶೇಂದಿ ತೆಗೆಯುವ ಸಂದರ್ಭ ತೆಂಗಿನ ಮರದಿಂದ ಕೆಳಗೆ ಬಿದ್ದು ಮೃತಪಟ್ಟ ಧುರ್ಘಟನೆ ಉಳ್ಳಾಲದಲ್ಲಿ ನಡೆದಿದೆ.

ಕುತ್ತಾರಿನ ನೇತ್ರಾವತಿ ನದಿ ಸಮೀಪದ ಸೋಮನಾಥ ಉಳಿಯ ಎಂಬಲ್ಲಿನ ಈ ಧುರ್ಘಟನೆ ನಡೆದಿದ್ದು, ತೆಂಗಿನ ಮರದಿಂದ ಶೇಂದಿ ತೆಗೆಯುತ್ತಿದ್ದ ವಿಶ್ವಾಂಬರಂ (58) ಎಂಬವರು ಮೃತಪಟ್ಟಿದ್ದಾರೆ. ಮುಂಜಾನೆ ಮನೆಯ ಸಮೀಪದ ಮರದಿಂದ ಶೇಂದಿ ತೆಗೆಯಲು ಮರ ಹತ್ತಿದ್ದರು. ಈ ವೇಳೆ ಅವಘಡ ಸಂಭವಿಸಿದೆ. ಮೂಲತ: ಧರ್ಮಸ್ಥಳ ಪುದುವೆಟ್ಟು ನಿವಾಸಿಯಾಗಿದ್ದ ಮೃತರು ಸದ್ಯ ಸಂತೋಷ ನಗರ ಕುಟುಂಬ ಸಮೇತರಾಗಿ ನೆಲೆಸಿದ್ದಾರೆ. ಕುತ್ತಾರಿಗೆ ಬಂದು ನೆಲೆಸಿರುವ ಇವರು ಶೇಂದಿ ತೆಗೆಯುವ ಗುತ್ತಿಗೆ ವಹಿಸಿಕೊಂಡಿದ್ದರು.

ಮಂದಿರ ಉದ್ಘಾಟನೆಗೆ ಸಾಕ್ಷಿಯಾದಾಗ, ಅದರ ಭಾಗವಾದಾಗ ಮೂಕವಿಸ್ಮಿತನಾದೆ : ಪೇಜಾವರ ವಿಶ್ವಪ್ರಸನ್ನ ಶ್ರೀಪಾದರು – vishwanews24

ಕುತ್ತಾರು ಸೋಮನಾಥ ಉಳಿಯ ಸಮೀಪದ ತೆಂಗಿನಮರಕ್ಕೆ ಹತ್ತಿದ್ದವರು ಕಾಲುಜಾರಿ ಕೆಳಗೆಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಕೊಣಾಜೆ ಮೂರ್ತೆದಾರರ ಸಂಘದ ನಿರ್ದೇಶಕರಾಗಿದ್ದ ಇವರು, ಮೂರು ತಿಂಗಳ ಹಿಂದಷ್ಟೇ ರಾಜೀನಾಮೆ ನೀಡಿ ಸದಸ್ಯರಾಗಿ ಮುಂದುವರಿದಿದ್ದರು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply