Featured

ಎಂಆರ್‌ಪಿಎಲ್‌ ದುರಂತ: ಸಮಗ್ರ ತನಿಖೆಗೆ ಐವನ್ ಡಿʼಸೋಜಾ ಆಗ್ರಹ -vishwanews24

ಎಂಆರ್‌ಪಿಎಲ್‌ ದುರಂತ: ಆಸ್ತಿ-ಪಾಸ್ತಿ ನಷ್ಟಕ್ಕೆ ಸೂಕ್ತ ಪರಿಹಾರ , ಸಮಗ್ರ ತನಿಖೆಗೆ ಐವನ್ ಡಿʼಸೋಜಾ ಆಗ್ರಹ

ಮಂಗಳೂರು :ಎಂಆರ್‌ಪಿಎಲ್‌ನಲ್ಲಿ ಸಂಭವಿಸಿದ ಸ್ಫೋಟದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಉಂಟಾಗಿರುವ ಆಸ್ತಿ-ಪಾಸ್ತಿ ನಷ್ಟ ಹಾಗೂ ಜೀವಹಾನಿಗೆ ಸಂಬಂಧಿಸಿದಂತೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಐವನ್ ಡಿʼಸೋಜಾ ಅವರು ಒತ್ತಾಯಿಸಿದ್ದಾರೆ.

ಸ್ಫೋಟದ ಪರಿಣಾಮವಾಗಿ ಎಂಆರ್‌ಪಿಎಲ್‌ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕಂಪದ ರೀತಿಯ ಅನುಭವ ಉಂಟಾಗಿದ್ದು, ಹಲವು ಮನೆಗಳು, ಕಟ್ಟಡಗಳು ಹಾಗೂ ಚರ್ಚ್ ಸೇರಿದಂತೆ ಸಾರ್ವಜನಿಕ ಮತ್ತು ಖಾಸಗಿ ಆಸ್ತಿ-ಪಾಸ್ತಿಗಳಿಗೆ ಹಾನಿಯಾಗಿರುವ ಕುರಿತು ವರದಿಯಾಗಿದೆ. ಅಲ್ಲದೆ, ಘಟನೆಯಲ್ಲಿ ಒಬ್ಬರು ಮೃತಪಟ್ಟಿರುವ ಕುರಿತು ಮಾಹಿತಿ ದೊರೆತಿದ್ದು, ಸುತ್ತಮುತ್ತಲಿನ ಜನರು ಭಯಭೀತರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಘಟನೆಯಿಂದ ಉಂಟಾಗಿರುವ ಹಾನಿಯ ಕುರಿತು ಕೂಡಲೇ ಸಮಗ್ರ ಸಮೀಕ್ಷೆ ನಡೆಸಬೇಕು. ಹಾನಿಗೊಳಗಾದ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿ-ಪಾಸ್ತಿಗಳ ನಷ್ಟವನ್ನು ಪರಿಶೀಲಿಸಿ, ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಐವನ್ ಡಿʼಸೋಜಾ ಅವರು ಎಂಆರ್‌ಪಿಎಲ್‌ನ ವ್ಯವಸ್ಥಾಪಕ ನಿರ್ದೇಶಕರಾದ ಮುಂಡ್ಕೂರು ಶ್ಯಾಮ್ ಪ್ರಸಾದ್ ಕಾಮತ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮನವಿ ಮಾಡಿದ್ದಾರೆ.

ಅಲ್ಲದೆ, ಸಂಭವಿಸಿರುವ ಜೀವಹಾನಿಗೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಸಮಗ್ರ ತನಿಖೆ ನಡೆಸಬೇಕು. ಘಟನೆಯ ನಿಖರ ಕಾರಣಗಳನ್ನು ಪರಿಶೀಲಿಸಿ, ಎಂಆರ್‌ಪಿಎಲ್‌ನಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಸುರಕ್ಷತಾ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸ್ಫೋಟದ ಪರಿಣಾಮವಾಗಿ ಹತ್ತಿರದ ಮನೆಗಳು, ಕಟ್ಟಡಗಳು ಹಾಗೂ ಚರ್ಚ್‌ಗೆ ಹಾನಿಯಾಗಿರುವ ಹಿನ್ನೆಲೆಯಲ್ಲಿ, ಎಲ್ಲಾ ಹಾನಿಗೊಳಗಾದ ಆಸ್ತಿಗಳ ಕುರಿತು ತಕ್ಷಣ ಸಮೀಕ್ಷೆ ನಡೆಸಿ ನಷ್ಟದ ಪ್ರಮಾಣವನ್ನು ನಿರ್ಧರಿಸಬೇಕು ಹಾಗೂ ಅರ್ಹ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು. ಜನರ ಸುರಕ್ಷತೆಗೆ ಮೊದಲ ಆದ್ಯತೆ ನೀಡುವ ಮೂಲಕ, ಇಂತಹ ಘಟನೆಗಳು ಭವಿಷ್ಯದಲ್ಲಿ ಮರುಕಳಿಸದಂತೆ ಶಾಶ್ವತ ಹಾಗೂ ಪರಿಣಾಮಕಾರಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಐವನ್ ಡಿʼಸೋಜಾ ಅವರು ತಿಳಿಸಿದ್ದಾರೆ.

Vishwa News 24

Recent Posts

ಕಾಪುವಿನಲ್ಲಿ ನ.27ರಂದು ಬೃಹತ್ ಉಚಿತ ಉದ್ಯೋಗ ಮೇಳ -vishwanews24

ಕಾಪುವಿನಲ್ಲಿ ನ.27ರಂದು ಬೃಹತ್ ಉಚಿತ ಉದ್ಯೋಗ ಮೇಳ ವಿದೇಶಿ ಕಂಪೆನಿ ಸೇರಿದಂತೆ ಹತ್ತಾರು ಸಂಸ್ಥೆಗಳ ಭಾಗಹಿಸುವಿಕೆ ಕಾಪು: ಯುವಜನತೆಗೆ ಉದ್ಯೋಗಾವಕಾಶ…

16 hours ago

ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಪ್ರಮೋದ್ ಮಧ್ವರಾಜ್ ನೇಮಕ -vishwanews24

ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಪ್ರಮೋದ್ ಮಧ್ವರಾಜ್ ನೇಮಕ ನವದೆಹಲಿ: ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಪದಾಧಿಕಾರಿಗಳನ್ನು…

2 days ago

ನ. 24, 25 ರಂದು ಇತಿಹಾಸ ಪ್ರಸಿದ್ಧ ಕಾಪು ಮಾರಿಗುಡಿಗಳಲ್ಲಿ ಜಾರ್ದೆ ಮಾರಿಪೂಜೆ ಸಂಭ್ರಮ – vishwanews24

ನ. 24, 25 ರಂದು ಇತಿಹಾಸ ಪ್ರಸಿದ್ಧ ಕಾಪು ಮಾರಿಗುಡಿಗಳಲ್ಲಿ ಜಾರ್ದೆ ಮಾರಿಪೂಜೆ ಸಂಭ್ರಮ ಇತಿಹಾಸ ಪ್ರಸಿದ್ಧ ಕಾಪು ಹಳೆ…

5 days ago

ಸಂಬಂಧಿಕರನ್ನು ಬೀಳ್ಕೊಡಲು ಬಂದ 12 ಮಂದಿ ವಂದೇ ಭಾರತ್‌ ರೈಲಲ್ಲಿ ಲಾಕ್‌ ; 36 ಸಾವಿರ ದಂಡ – vishwanews24

ಸಂಬಂಧಿಕರನ್ನು ಬೀಳ್ಕೊಡಲು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರವೇಶಿಸಿದ 12 ಮಂದಿ ಸ್ವಯಂಚಾಲಿತ ಬಾಗಿಲುಗಳು ಮುಚ್ಚಿದ್ದರಿಂದ ರೈಲಿನೊಳಗೆ ಲಾಕ್ 140 ಕಿ.ಮೀ…

5 days ago

ಗ್ರಾಹಕರಿಗೆ ಗುಡ್ ನ್ಯೂಸ್: ಸೋನಾ ಮಸೂರಿ ಅಕ್ಕಿ ಬೆಲೆಯಲ್ಲಿ ಭಾರೀ ಇಳಿಕೆ, ಕೆಜಿಗೆ ₹ 20ರವರೆಗೆ ಕಡಿತ – vishwanews24

ಗ್ರಾಹಕರಿಗೆ ಗುಡ್ ನ್ಯೂಸ್: ಸೋನಾ ಮಸೂರಿ ಅಕ್ಕಿ ಬೆಲೆಯಲ್ಲಿ ಭಾರೀ ಇಳಿಕೆ, ಕೆಜಿಗೆ ₹20ರವರೆಗೆ ಕಡಿತ ಬೆಂಗಳೂರು: ಮಾರುಕಟ್ಟೆಯಲ್ಲಿ ಹೊಸ…

5 days ago

ನವೆಂಬರ್ 30ರವರೆಗೆ ಸೌದಿಗೆ ಇಂಡಿಗೋ ವಿಮಾನ ಹಾರಾಟ ರದ್ದು -vishwanews24

ನವೆಂಬರ್ 30ರವರೆಗೆ ಸೌದಿಗೆ ಇಂಡಿಗೋ ವಿಮಾನ ಹಾರಾಟ ರದ್ದು ನವದೆಹಲಿ: ಸೌದಿ ಅರೇಬಿಯಾದಲ್ಲಿನ ಪ್ರಸ್ತುತ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇಂಡಿಗೋ…

5 days ago