Featured

ಮಂಗಳೂರು: ಎಂಆರ್ ಪಿಎಲ್ ದುರಂತ : ಕಂಪನಿ ಅಧಿಕಾರಿಗಳ ವಿರುದ್ಧ ಎಫ್ಐಆರ್ -vishwanews24

ಮಂಗಳೂರು: ಎಂಆರ್ ಪಿಎಲ್ ದುರಂತ : ಕಂಪನಿ ಅಧಿಕಾರಿಗಳ ವಿರುದ್ಧ ಎಫ್ಐಆರ್

ಮಂಗಳೂರು : ಎಂಆರ್ ಪಿಎಲ್ ತೈಲ ಸ್ಥಾವರ ಘಟಕದಲ್ಲಿ ನಡೆದ ದುರಂತಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವೆಂದು ಸುರತ್ಕಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಘಟನೆಯಲ್ಲಿ ಒಟ್ಟು 13 ಮಂದಿ ಗಾಯಗೊಂಡಿದ್ದು, ಈ ಪೈಕಿ ಮುಲ್ಕಿ ಹಳೆಯಂಗಡಿ ನಿವಾಸಿ ಮನೀಶ್ ಕರ್ಕಡ(23) ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾರೆ.

ಕಾರ್ಕಳ ಹಿರ್ಗಾನ ನಿವಾಸಿ ರವಿ ಪೂಜಾರಿ ಎಂಬವರು ಎಂಆರ್ ಪಿಎಲ್ 3ನೇ ಫೇಸ್ ನಲ್ಲಿರುವ ಘಟಕದ ನೌಕರರಿಗೆ ಊಟ, ಉಪಹಾರ ಪೂರೈಸುವ ಕೆ-ಸ್ಟಾ‌ರ್ ಫುಡ್ ಅಂಡ್ ಹಾಸ್ಪಿಟಾಲಿಟಿ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಮಧ್ಯಾಹ್ನ 12.15ರ ವೇಳೆಗೆ ಊಟ ವಿತರಣೆಗೆ ಬಂದಿದ್ದಾಗ ಕೋಕರ್ ಹೈಡೋ ಟ್ರೇಯರ್ ಯೂನಿಟ್ ನಲ್ಲಿ ಒಮ್ಮಿಂದೊಮ್ಮೆಲೇ ಸ್ಫೋಟ ಸಂಭವಿಸಿದೆ.

ಇದರಿಂದಾಗಿ ರವಿ ಪೂಜಾರಿ ಸೇರಿದಂತೆ ಸ್ಥಳದಲ್ಲಿದ್ದ ಘಟಕದ ನೌಕರರಾದ ರಾಜೇಶ್ ಪ್ರಸಾದ್, ಇಂದ್ರಜಿತ್, ರಮಣ್ ಕುಮಾರ್, ಲೋಕೇಶ್ ಕುಳಾಯಿ, ಜಯರಾಮ್, ಜೆರೋಮ್, ಅವಿನಾಶ್, ಅಕ್ಷಯ್, ಜಗಜೀವನ್ ಸಿಂಗ್, ಶರತ್ ಶೆಟ್ಟಿ ಗಾಯಗೊಂಡಿದ್ದಾರೆ. ರಾಜೇಶ್ ಪೂಜಾರಿ ಮತ್ತು ಮನೀಶ್ ಕರ್ಕಡ ಎಂಬವರಿಗೆ ಗಂಭೀರ ಗಾಯವಾಗಿದ್ದು, ಮನೀಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಎಂಆರ್ ಪಿಎಲ್ ಫೇಸ್ 3ರಲ್ಲಿ ಕೋಕರ್ ಹೈಡೋ ಟೀಯರ್ ಯೂನಿಟ್ ನಲ್ಲಿ ಯಂತ್ರೋಪಕರಣಗಳನ್ನು ಯುನಿಟ್ ಮುಖ್ಯಸ್ಥರು ಮತ್ತು ಎಂಆರ್ ‌ ಪಿಎಲ್ ಸಂಸ್ಥೆಯವರು ಸರಿಯಾಗಿ ನೋಡಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದರಿಂದ ಘಟನೆ ನಡೆದಿದೆ ಎಂದು ರವಿ ಪೂಜಾರಿಯವರ ದೂರಿನಂತೆ ಸುರತ್ಕಲ್ ಠಾಣೆಯಲ್ಲಿ ಬಿಎನ್‌ಎಸ್ 287, 125 ಬಿ, 106 ಅಡಿ ಪ್ರಕರಣ ದಾಖಲಾಗಿದೆ.

 

Vishwa News 24

Recent Posts

ಮಡ್‌ಗಾಂವ್‌ – ಮಂಗಳೂರು ‘ವಂದೇ ಭಾರತ್‌’ ರೈಲು ಬೆಂಗಳೂರಿಗೆ ವಿಸ್ತರಣೆ -vishwanews24

ಮಡ್‌ಗಾಂವ್‌ - ಮಂಗಳೂರು 'ವಂದೇ ಭಾರತ್‌' ರೈಲು ಬೆಂಗಳೂರಿಗೆ ವಿಸ್ತರಣೆ ಮಂಗಳೂರು/ಉಡುಪಿ: ಈ ಹಿಂದೆ ಮಂಗಳೂರು ಸೆಂಟ್ರಲ್‌-ಮಡ್‌ಗಾಂವ್‌ ನಡುವೆ ಓಡುತ್ತಿದ್ದ…

55 minutes ago

ಅಕ್ಟೋಬರ್ 11ರಿಂದ 20ರ ವರೆಗೆ KSRTC ಯಿಂದ ವಿಶೇಷ ಪ್ಯಾಕೇಜ್ ಪ್ರವಾಸ -vishwanews24

ಅಕ್ಟೋಬರ್ 11ರಿಂದ 20ರ ವರೆಗೆ KSRTC ಯಿಂದ ವಿಶೇಷ ಪ್ಯಾಕೇಜ್ ಪ್ರವಾಸ ಉಡುಪಿ: ಕ.ರಾ.ರ.ಸಾ.ನಿಗಮ ಮಂಗಳೂರು ವಿಭಾಗವು ದಸರಾ ಪ್ರಯುಕ್ತ…

1 hour ago

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ 62 ರೂ. ಏರಿಕೆ -vishwanews24

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ 62 ರೂ. ಏರಿಕೆ ನವದೆಹಲಿ: ಹಬ್ಬದ ಹೊಸ್ತಿಲಲ್ಲೇ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಗಣನೀಯ…

1 hour ago

ಎಂಆರ್‌ಪಿಎಲ್‌ ದುರಂತ: ಸಮಗ್ರ ತನಿಖೆಗೆ ಐವನ್ ಡಿʼಸೋಜಾ ಆಗ್ರಹ -vishwanews24

ಎಂಆರ್‌ಪಿಎಲ್‌ ದುರಂತ: ಆಸ್ತಿ-ಪಾಸ್ತಿ ನಷ್ಟಕ್ಕೆ ಸೂಕ್ತ ಪರಿಹಾರ , ಸಮಗ್ರ ತನಿಖೆಗೆ ಐವನ್ ಡಿʼಸೋಜಾ ಆಗ್ರಹ ಮಂಗಳೂರು :ಎಂಆರ್‌ಪಿಎಲ್‌ನಲ್ಲಿ ಸಂಭವಿಸಿದ…

2 hours ago

ಎಂಆರ್‌ಪಿಎಲ್‌ ನಲ್ಲಿ ಭಾರೀ ಸ್ಫೋಟ : ಓರ್ವನ ಮೃತದೇಹ ಪತ್ತೆ -vishwanews24

ಎಂಆರ್‌ಪಿಎಲ್‌ ನಲ್ಲಿ ಭಾರೀ ಸ್ಫೋಟ : ಸುಟ್ಟು ಕರಕಲಾದ ಸ್ಥಿತಿಯಲ್ಲಿ ಓರ್ವನ ಮೃತದೇಹ ಪತ್ತೆ ಮಂಗಳೂರು: ಎಂಆರ್‌ಪಿಎಲ್‌ನಲ್ಲಿ ಬುಧವಾರ ಮಧ್ಯಾಹ್ನದ…

15 hours ago

MRPLನಲ್ಲಿ ಭಾರೀ ಸ್ಫೋಟ : ಎಂಟು ಮಂದಿಗೆ ಗಾಯ: ಪೊಲೀಸ್ ಕಮಿಷನರ್ -vishwanews24

MRPLನಲ್ಲಿ ಭಾರೀ ಸ್ಫೋಟ : ಎಂಟು ಮಂದಿಗೆ ಗಾಯ ಘಟನಾ ಸ್ಥಳದಲ್ಲಿ ಮಹಿಳಾ ಸಿಬ್ಬಂದಿ ಹಾಜರಿರಲಿಲ್ಲ ಹಾಗೂ ಗಾಯಗೊಂಡಿಲ್ಲ :…

21 hours ago