ಎಬಿಡಿ ಜೊತೆ ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ – Vishwanews24
ಎಬಿಡಿ ಜೊತೆ ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ
ʼಕಾಂತಾರʼ ಸಿನಿಮಾ ಮೂಲಕ ಯಶಸ್ಸಿನ ಉತ್ತುಂಗದಲ್ಲಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ, ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಆಟಗಾರ ಎಬಿ ಡಿವಿಲಿಯರ್ಸ್ ಜೊತೆ ಕಾಣಿಸಿಕೊಂಡಿದ್ದಾರೆ.
![]()
ಸಿನಿಮಾದ 360 ಡಿಗ್ರಿ ಹಾಗೂ ಕ್ರಿಕೆಟ್ನ 360 ಡಿಗ್ರಿ ಮುಖಾಮುಖಿಯಾಗಿದ್ದಾರೆ ಎಂದು ಹೊಂಬಾಳೆ ಫಿಲ್ಸ್ಂ ಟ್ವೀಟ್ ಮಾಡಿದೆ. ಕಂಬಳದಲ್ಲಿ ಕೋಣ ಓಡಿಸುವ ಮುನ್ನ ಹೇಳುವ ʻಬಿಡಿಯಾ…ʼ ಪದವನ್ನು ರಿಷಬ್ ಹಾಗೂ ಎಬಿಡಿ ಒಟ್ಟಿಗೆ ಹೇಳಿ, ಒಬ್ಬರು ಕೋಣ ಓಡಿಸಿದ್ರೆ, ಮತ್ತೊಬ್ರು ಕ್ರಿಕೆಟ್ ಬ್ಯಾಟ್ ಬೀಸುವ ಪೋಸ್ಟ್ ವೈರಲ್ ಆಗಿದೆ. ಇದನ್ನೂ ಓದಿ: ಬೈಂದೂರು: ಬೈಕ್ ಸ್ಕಿಡ್ ಆಗಿ ಗಂಭೀರ ಗಾಯಗೊಂಡಿದ್ದ ಪತ್ರಿಕಾ ವಿತರಕ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು – Vishwanews24
ರಿಷಬ್ ಶೆಟ್ಟಿ ಕೂಡ ವೀಡಿಯೋ ಪೋಸ್ಟ್ ಮಾಡಿದ್ದು, ಇದು ಪಂದ್ಯ, ನಿಜವಾದ 360ಯನ್ನು ಭೇಟಿಯಾದೆ. ಸೂಪರ್ ಹೀರೋ ಮತ್ತೆ ತಮ್ಮ ಮೂಲಸ್ಥಾನಕ್ಕೆ ಮರಳಿದ್ದಾರೆ. ನಮ್ಮ ಬೆಂಗಳೂರು ಎಂದು ರಿಷಬ್ ಟ್ವೀಟ್ ಮಾಡಿದ್ದಾರೆ. ಈ ವೀಡಿಯೋ ಮೂಲಕ ರಾಯಲ್ ಚಾಲೆಂಜರ್ಸ್ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.
It’s a match.
The real 360s today of the film industry and Cricket.#Kantara @shetty_rishab @ABdeVilliers17 @RCBTweets @hombalefilms @VKiragandur @gowda_sapthami @HombaleGroup @ChaluveG @Karthik1423 @AJANEESHB @actorkishore @KantaraFilm pic.twitter.com/MKeWi8tF9Q— Hombale Films (@hombalefilms) November 3, 2022
