ಎಲ್ಪಿಜಿ: ಇ-ಕೆವೈಸಿ ದಿನಾಂಕ ಆ. 23ರ ವರೆಗೆ ವಿಸ್ತರಣೆ -vishwanews24
ಎಲ್ಪಿಜಿ: ಇ-ಕೆವೈಸಿ ದಿನಾಂಕ ಆ. 23ರ ವರೆಗೆ ವಿಸ್ತರಣೆ
ಉಡುಪಿ: ಎಲ್ಪಿಜಿ ಗ್ರಾಹಕರಿಗೆ ಇ-ಕೆವೈಸಿ ಪೂರ್ಣ ಗೊಳಿಸಲು ನೀಡಲಾಗಿದ್ದ ಗಡುವನ್ನು ಆ. 23ರ ವರೆಗೆ ವಿಸ್ತರಿಸಲಾಗಿದೆ. ಎಲ್ಪಿಸಿ ಇ-ಕೆವೈಸಿ ಮಾಡಿಸಲು ಗ್ರಾಹಕರು ಭಾರೀ ಸಂಖ್ಯೆಯಲ್ಲಿ ವೆಬ್ಸೈಟ್ ಅಥವಾ ಆ್ಯಪ್ಗಳಿಗೆ ಭೇಟಿ ನೀಡುತ್ತಿರುವುದರಿಂದ ಸರ್ವರ್ ಸಮಸ್ಯೆ ಎದುರಾಗುತ್ತಿದೆ.
ಹೀಗಾಗಿ ಕೇಂದ್ರ ಸರಕಾರವು ಗ್ರಾಹಕರಿಗೆ ಅನುಕೂಲ ಆಗುವಂತೆ ಕೊನೆಯ ದಿನಾಂಕವನ್ನು ಆ. 23ರ ವರೆಗೆ ವಿಸ್ತರಿಸಿದೆ. ಇ-ಕೆವೈಸಿ ಮಾಡಿಸದ ಗ್ರಾಹಕರು ಸಂಬಂಧಿಸಿದ ಗ್ಯಾಸ್ ಏಜೆನ್ಸಿ ಕಚೇರಿಗೆ ಹೋಗಿ ಆಧಾರ್ ಕಾರ್ಡ್ ಸಹಿತ ಅಗತ್ಯ ದಾಖಲೆ ಒದಗಿಸಿ ಇ-ಕೆವೈಸಿ ಮಾಡಿಸಬಹುದಾಗಿದೆ.
