ಎಲ್ಲಾ ಆರೋಪದಿಂದ ಮುಕ್ತನಾಗಿ ಬರುವೆ :  ಮುರುಘಾ ಶ್ರೀ – Vishwanews24

Featured, ರಾಜ್ಯ ನ್ಯೂಸ್

ಎಲ್ಲಾ ಆರೋಪದಿಂದ ಮುಕ್ತನಾಗಿ ಬರುವೆ :  ಮುರುಘಾ ಶ್ರೀ

ಚಿತ್ರದುರ್ಗ: ಬಾಲಕಿಯರ ಮೇಲೆ ಲೌಂಗಿಕ ದೌರ್ಜನ್ಯ ಆರೋಪದಲ್ಲಿ ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಅವರನ್ನು ಇದೀಗ ಪೋಲಿಸರ ವಶಕ್ಕೆ ಪಡೆದುಕೊಳ್ಳಲಾಗಿದೆ ಎನ್ನಲಾಗಿತು. ಈ ನಡುವೆ ಮಠಕ್ಕೆ ವಾಪಸ್ಸು ಬಂದ ಶ್ರೀಗಳು ಮಠದ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು, ಇದೇ ವೇಳೆ ಅವರು ಮಾತನಾಡುತ್ತ, ನಾವೆಲ್ಲರೂ ಒಟ್ಟಾಗಿ, ಇದಕ್ಕೆ ಶಾಶ್ವತವಾಗಿ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ ಅಂತ ಹೇಳಿದರು.

ಇದೇನು ಹೊಸತು ಅಲ್ಲ, ಕಳೆದ ಹದಿನೈದು ವರ್ಷಗಳಿಂದ ನಡೆಯುತ್ತಿದ್ದು, ಅದರೆ ಅದು ಹೊರಕ್ಕೆ ಬಂದಿರಲಿಲ್ಲ, ಇದಕ್ಕೆ ಈಗ ತಾರ್ಕಿಕ ಅಂತ್ಯ ಬೇಕಾಗಿದೆ ಅಂತ ಹೇಳಿದರು. ಯಾವುದೇ ಕಾರಣಕ್ಕೂ ಯಾರು ಆತಂಕಕ್ಕೆ ಒಳಗಾಗ ಬೇಡಿ, ನಿಮ್ಮೆಲ್ಲರ ಸಲುವಾಗಿ ನಾವು ಧೈರ್ಯವಾಗಿ ಹೆದರಿಸಬೇಕು. ನಾವೆಲ್ಲರೂ ನೆಲದ ಕಾನೂನನ್ನು ಗೌರವಿಸುತ್ತೇವೆ ಅಂತ ಹೇಳಿದರು. ಆರೋಪಕ್ಕೆ ಬೇಕಾದ ಕಾನೂನು ಸಹಕರವನ್ನು ನೀಡಲಾಗುತ್ತದೆ ಅಂತ ಹೇಳಿದರು, ಈ ನಿಟ್ಟಿನಲ್ಲಿ ಮಠದ ಭಕ್ತರು ಗಾಳಿ ಸುದ್ದಿಗಳನ್ನು ನಂಬಬಾರದು ಅಂತ ಹೇಳಿದರು. ಇನ್ನೂ ನಾವು ನ್ಯಾಯಾಕ್ಕೆ ತಲೆ ಬಾಗುತ್ತೇವೆ ಅಂತ ಹೇಳಿದರು. ಇವತ್ತಿಗೂ ನಾವು ಕಾನೂನಿಗೆ ಬೆಲೆ ನೀಡುತ್ತೇವೆ ಅಂತ ತಿಳಿಸಿದರು. ಸದ್ಯದ ಕೆಟ್ಟ ಪರಿಸ್ಥಿತಿಯಿಂದ ನಾವು ಹೊರಗೆ ಬರುತ್ತೇವೆ ಅಂತ ಹೇಳಿದರು. ಎಲ್ಲರಿಗೂ ಒಳ್ಳೆಯದಾಗಲಿ, ಮಠದ ಭಕ್ತರು ನಮ್ಮ ಜೊತೆ ಇರುವುದು ನಮಗೆ ಧೈರ್ಯ ತಂದಿದೆ. ಯಾವುದಕ್ಕೂ ಹೆದರುವ ಅಗತ್ಯವಿಲ್ಲ, ಅಭಿಮಾನದ ಚಿಲುಮೆಯನ್ನು ಚಿಮ್ಮಿಸುವವರಿಗೆ ಕೂಡ ಧನ್ಯವಾದವನ್ನು ತಿಳಿಸುತ್ತೇವೆ ಅಂತ ಹೇಳಿದರು.

ಬ್ರಿಟಿಷರೊಂದಿಗೆ ಕ್ಷಮಾಪಣೆ ಕೇಳಿ ಜೈಲಿನಿಂದ ಬಿಡುಗಡೆಗೊಂಡಿರುವವರನ್ನು ಹೀರೋ ಮಾಡ್ತಿದ್ದಾರೆ: ಸೊರಕೆ – Vishwanews24

Leave a Reply