ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಎಬಿ ಡಿವಿಲಿಯರ್ಸ್ – Vishwanews24
ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಎಬಿ ಡಿವಿಲಿಯರ್ಸ್ – Vishwanews24
ನವದೆಹಲಿ : ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಇವರು 2018 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು
ದಕ್ಷಿಣ ಆಫ್ರಿಕಾ ಮೂಲದ ಈ ದಿಗ್ಗಜ ಆಟಗಾರ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಈಗಾಗಲೇ ನಿವೃತ್ತಿಯನ್ನು ಪಡೆದಿದ್ದರು. ಆದರೆ ಲೀಗ್ ಕ್ರಿಕೆಟ್ಗಳ ಮೂಲಕ ಸಕ್ರಿಯವಾಗಿದ್ದು ಅಭಿಮಾನಿಗಳನ್ನು ರಂಜಿಸುತ್ತಿದ್ದರು. ಕಳೆದ ಹಲವು ವರ್ಷಗಳಿಮದ ಆರ್ಸಿಬಿ ಪರವಾಗಿ ಐಪಿಎಲ್ನಲ್ಲಿ ಆಡುತ್ತಿದ್ದ ಎಬಿ ಡಿವಿಲಿಯರ್ಸ್ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೊಂದು ಅದ್ಭುತವಾದ ಪ್ರಯಾಣವಾಗಿದ್ದು ಈಗ ನಾನು ಎಲ್ಲಾ ಮಾದರಿಯ ಕ್ರಿಕೆಟ್ಗೂ ನಿವೃತ್ತಿಯನ್ನು ಘೋಷಿಸುತ್ತಿದ್ದೇನೆ ಎಂದು ಎಬಿ ಡಿವಿಲಿಯರ್ಸ್ ಘೋಷಿಸಿದ್ದಾರೆ.
It has been an incredible journey, but I have decided to retire from all cricket.
Ever since the back yard matches with my older brothers, I have played the game with pure enjoyment and unbridled enthusiasm. Now, at the age of 37, that flame no longer burns so brightly. pic.twitter.com/W1Z41wFeli
— AB de Villiers (@ABdeVilliers17) November 19, 2021
ಕ್ರಿಕೆಟ್ ನನಗೆ ಅಪಾರವಾದ ಕರುಣೆ ತೋರಿಸಿದೆ. ನಾನು ಟೈಟಾನ್ಸ್ ಪರವಾಗಿ ಆಡುವಾಗ ಅಥವಾ ಪ್ರೊಟೀಸ್ ಪರವಾಗಿ ಅಥವಾ ಆರ್ಸಿಬಿ ಪರವಾಗಿ ಆಡುವಾದ ಅಥವಾ ವಿಶ್ವಾದ್ಯಂತ ಆಡುವಾಗ ಈ ಕ್ರೀಡೆ ನನಗೆ ಊಹಿಸಲೂ ಸಾಧ್ಯವಾಗದ ಅನುಭವ ಹಾಗೂ ಅವಕಾಶವನ್ನು ನೀಡಿದೆ. ಅದಕ್ಕಾಗಿ ನಾನು ಯಾವಾಗಲೂ ಕೃತಜ್ಞನಾಗಿರುತ್ತೇನೆ” ಎಂದಿದ್ದಾರೆ ಎಬಿ ಡಿವಿಲಿಯರ್ಸ್.
ಕೊನೆಯದಾಗಿ ತನಗೆ ಸಹಕಾರ ನೀಡಿದ ಕುಟುಂಬಕ್ಕೆ ಎಬಿ ಡಿವಿಲಿಯರ್ಸ್ ಧನ್ಯವಾದ ಸಲ್ಲಿಸಿದ್ದಾರೆ. “ಅಂತಿಮವಾಗಿ, ನನ್ನ ಕುಟುಂಬ ನನ್ನ ಹೆತ್ತವರು, ನನ್ನ ಸೋದರರು, ನನ್ನ ಪತ್ನಿ ಡೇನಿಯೆಲ್ ಹಾಗೂ ನನ್ನ ಮಕ್ಕಳು ನನಗಾಗಿ ತ್ಯಾಗವನ್ನು ಮಾಡದಿದ್ದರೆ ನನ್ನಿಂದ ಈ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಾನೀನ ಮುಂದಿನ ಅಧ್ಯಾಯವನ್ನು ಎದುರು ನೋಡುತ್ತಿದ್ದೇನೆ” ಎಂದು ಟ್ವಿಟ್ಟರ್ನಲ್ಲಿ ಸರಣಿ ಟ್ವೀಟ್ಗಳನ್ನು ಮಾಡಿ ಎಬಿ ಡಿವಿಲಿಯರ್ಸ್ ಹಂಚಿಕೊಂಡಿದ್ದಾರೆ. ಇನ್ನು ಈ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಹಾಗೂ ಭಾರತದಲ್ಲಿ ಪಡೆದುಕೊಂಡ ಬೆಂಬಲಕ್ಕೆ ಆಭಾರಿಯಾಗಿರುತ್ತೇನೆ ಎಂದಿದ್ದಾರೆ. 2008ರಿಂದಲೂ ಐಪಿಎಲ್ನಲ್ಲಿ ಸಕ್ರಿಯ: ಎಬಿ ಡಿವಿಲಿಯರ್ಸ್ ಐಪಿಎಲ್ನ ಆರಂಭಿಕ ಆವೃತ್ತಿಯಿಂದಲೂ ಸಕ್ರಿಯವಾಗಿದ್ದಾರೆ. ಐಪಿಎಲ್ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪರವಾಗಿ ಆರಂಭಿಕ ಮೂರು ಆವೃತ್ತಿಗಳಲ್ಲಿ ಕಣಕ್ಕಿಳಿದಿದ್ದರು. ನಂತರ 2011ರ ಆವೃತ್ತಿಯಲ್ಲಿ 5 ಕೋಟಿ ಮೊತ್ತಕ್ಕೆ ಆರ್ಸಬಿ ಪಾಲಾದರು. ಅದಾದ ಬಳಿಕ ಆರ್ಸಿಬಿ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ ಎಬಿ ಡಿವಿಲಿಯರ್ಸ್. ಅನೇಕ ಪಮದ್ಯಗಳಲ್ಲಿ ಏಕಾಂಗಿಯಾಗಿ ಹೋರಾಡಿ ಗೆಲುವು ತಂದುಕೊಟ್ಟಿದ್ದಾರೆ ಎಬಿ ಡಿವಲಿಯರ್ಸ್
“I’m going to be an RCBian for life. Every single person in the RCB set-up has become family to me. People come & go, but the spirit & the love we have for each other at RCB will always remain. I’ve become half Indian now & I’m proud of that.” – @ABdeVilliers17 #ThankYouAB pic.twitter.com/5b6RUYfjDY
— Royal Challengers Bangalore (@RCBTweets) November 19, 2021
