ಎಸ್‌ಐಟಿಯಿಂದ ಸೌಜನ್ಯ ಪ್ರಕರಣದ ಮರುತನಿಖೆ ಆರಂಭ : ಮೃತದೇಹ ಪತ್ತೆಯಾದ ಜಾಗಕ್ಕೆ ಭೇಟಿ – vishwanews24

Featured, ದಕ್ಷಿಣ ಕನ್ನಡ

ಎಸ್‌ಐಟಿಯಿಂದ ಸೌಜನ್ಯ ಪ್ರಕರಣದ ಮರುತನಿಖೆ ಆರಂಭ; ಧರ್ಮಸ್ಥಳದ ಕಾಡಿಗೆ ಎಂಟ್ರಿ, ಮೃತದೇಹ ಪತ್ತೆಯಾದ ಜಾಗಕ್ಕೆ ಭೇಟಿ

ಮಂಗಳೂರು: ಸೌಜನ್ಯ ಅತ್ಯಾಚಾರ ಹಾಗೂ ಹತ್ಯೆ  ಪ್ರಕರಣದ ಮರುತನಿಖೆ ಆರಂಭವಾಗಿದೆ. ಧರ್ಮಸ್ಥಳದ ಕಾಡಿಗೆ ಎಸ್‌ಐಟಿ  ಎಂಟ್ರಿ ಕೊಟ್ಟಿದ್ದು, ಸೌಜನ್ಯ ಮೃತದೇಹ ಸಿಕ್ಕ ಜಾಗಕ್ಕೆ ಭೇಟಿ ನೀಡಿದೆ.

14 ವರ್ಷದ ಹಿಂದಿನ ಪ್ರಕರಣದಲ್ಲಿ ಸೌಜನ್ಯ ಮೃತದೇಹ ಸಿಕ್ಕ ಜಾಗದಲ್ಲಿ ಮರುಸೃಷ್ಠಿ ಮಾಡಲಾಗಿದೆ. ಧರ್ಮಸ್ಥಳದ ಮಣ್ಣಸಂಕದ ಕಾಡಿನಲ್ಲಿ ಸೌಜನ್ಯ ಮೃತದೇಹ ಸಿಕ್ಕಿತ್ತು.

ಇದನ್ನೂ ಓದಿ: 

ತಮಿಳುನಾಡು ಜೈಲಿನಿಂದ ಖೈದಿಗಳು ಪರಾರಿ ಪ್ರಕರಣ: ಹಿರಿಯ ಜೈಲಾಧಿಕಾರಿ ಅಮಾನತು, ಸಿಬ್ಬಂದಿ ವರ್ಗಾವಣೆ : ಸಿಎಂ ವಿಜಯ್ ಆದೇಶ – vishwanews24

ಎಸ್‌ಐಟಿ ತನಿಖಾಧಿಕಾರಿ ಲೋಕೇಶ್ ಜಗಲಸಾರ್ ನೇತೃತ್ವದಲ್ಲಿ ಮರುಸೃಷ್ಠಿ ಮಾಡಲಾಗಿದೆ. ಎಸ್‌ಐಟಿ ತಂಡದ ಜೊತೆ ಎಫ್‌ಎಸ್‌ಎಲ್ ಸಿಬ್ಬಂದಿ ಕೂಡ ಆಗಮಿಸಿದ್ದಾರೆ. ಸೌಜನ್ಯ ಮೃತದೇಹ ಸಿಕ್ಕ ಜಾಗವನ್ನು ಕುಟುಂಬಸ್ಥರು ತೋರಿಸಿದ್ದಾರೆ.

ಸೌಜನ್ಯ ಮಾವ ಪುರಂದರಗೌಡ ಹಾಗೂ ಸಂಬಂಧಿ ತುಕಾರಾಂ ಅವರಿಂದ ಮಾಹಿತಿ ಸಂಗ್ರಹಿಸಲಾಗಿದೆ. SOCO ತಂಡ, ಬೆಂಗಳೂರು FSL ತಂಡ, ಗ್ರಾಮ ಆಡಳಿತ ಅಧಿಕಾರಿ, ಪಂಚರು, ವೈದ್ಯರು, ಫೋಟೊ-ವೀಡಿಯೋ ತಂಡ ಕೂಡ ಸ್ಥಳಕ್ಕೆ ಆಗಮಿಸಿದೆ.

ಬೆಂಗಳೂರು: ಖಾಸಗಿ ಹೋಟೆಲ್​​ನ ಈಜುಕೊಳದಲ್ಲಿ ವಿದ್ಯುತ್ ಅವಘಡ : ವಿದೇಶಿ ಪ್ರಜೆಗಳಿಬ್ಬರು ಸಾವು  – vishwanews24

Leave a Reply