ಎಸ್ ಎಸ್ ಎಲ್ ಸಿ ಪಠ್ಯವನ್ನು ಚಿತ್ರದಲ್ಲಿ ಬಿಡಿಸಿ ದಾಖಲೆ ಬರೆದ ಮಂಗಳೂರಿನ ಆದಿ ಸ್ವರೂಪ -Vishwanews24

Featured, ದಕ್ಷಿಣ ಕನ್ನಡ

ಎಸ್ ಎಸ್ ಎಲ್ ಸಿ ಪಠ್ಯವನ್ನು ಚಿತ್ರದಲ್ಲಿ ಬಿಡಿಸಿ ದಾಖಲೆ ಬರೆದ ಮಂಗಳೂರಿನ ಆದಿ ಸ್ವರೂಪ -Vishwanews24

ಮಂಗಳೂರು : ಸಾಧನೆ ಮಾಡಬೇಕು ಎಂದು ಹೊರಟರೆ ಯಾವ ರಂಗದಲ್ಲಾದರೂ ಕೂಡ ಸಾಧನೆಗೈಯ್ಯಬಹುದು. ಆದ್ರೆ ತಮ್ಮ ಗುರಿ ಮುಟ್ಟಬೇಕಂದ್ರೆ ಶ್ರಮ ಬೇಕು ಅಷ್ಟೆ. ಇದೀಗ ಅಂತಹದ್ದೇ ಒಂದು ಸಾಧನೆಯನ್ನು ಮಾಡಿದ್ದಾಳೆ ಮಂಗಳೂರಿನ ಆದಿ ಸ್ವರೂಪ.

ಎಸ್ ಎಸ್ ಎಲ್ ಸಿ ಸಂಪೂರ್ಣ ಪಠ್ಯವನ್ನು ಚಿತ್ರಗಳಲ್ಲೆ ಬಿಡಿಸಿ india book of records ದಾಖಲೆಯನ್ನು ಬರೆದಿದ್ದಾಳೆ. ಆರು ವಿಷಯಗಳನ್ನು ಕೇವಲ A4 ಗಾತ್ರದ ಎಂಟು ಹಾಳೆಗಳಲ್ಲಿ ಅಡಕ ಮಾಡಿದ್ದಾಳೆ.

ಸೋಮವಾರ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು ಗರಿಷ್ಠ ಅಂಕ ಪಡೆಯುವ ವಿಶ್ವಾಸ ಇರುವುದಾಗಿ ಸ್ವರೂಪ ತಿಳಿಸಿದ್ದಾಳೆ. ಇನ್ನು ಸ್ಮರಣ ಶಕ್ತಿ ಮೆದುಳು ಚುರುಕಿಗೆ ಚಿತ್ರಗಳು ಸಹಕಾರಿಯಾಗುತ್ತವೆ. ಇದು ವಿಶುವಲ್ ಆರ್ಟ್ ಮಾದರಿ. ಇತರ ಮಕ್ಕಳಿಗೂ ಮುಂದೆ ಪ್ರಯೊಜನವಾಗಲಿದೆ. ಅಲ್ಲದೆ ಇತರ ಮಕ್ಕಳಿಗೆ ಪ್ರೇರಣೆಯಾಗಲೆಂದು ದಾಖಲೆ ಮಾಡಿರುವುದಾಗಿ ತಿಳಿಸುತ್ತಾಳೆ ಆದಿ ಸ್ವರೂಪ.