ಎಸ್.ಎಸ್.ಎಲ್.ಸಿ ವಿಜ್ಞಾನ ವಿಷಯದ ಕುರಿತು ಫೋನ್ ಇನ್ ಕಾರ್ಯಕ್ರಮ -Vishwanews24

Featured, ಉಡುಪಿ

ಎಸ್.ಎಸ್.ಎಲ್.ಸಿ ವಿಜ್ಞಾನ ವಿಷಯದ ಕುರಿತು ಫೋನ್ ಇನ್ ಕಾರ್ಯಕ್ರಮ -Vishwanews24

ಉಡುಪಿ : ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಬಲವರ್ಧನೆಗಾಗಿ ಎಸ್.ಎಸ್.ಎಲ್.ಸಿ ವಿಜ್ಞಾನ ವಿಷಯದ ಕುರಿತು ಫೋನ್ ಇನ್ ಕಾರ್ಯಕ್ರಮವನ್ನು ಮಾರ್ಚ್ 5 ರಂದು ಸಂಜೆ 5 ರಿಂದ ರಾತ್ರಿ 7 ರ ವರೆಗೆ ಉಡುಪಿಯ ಸರಕಾರಿ ಪ್ರೌಢ ಶಾಲೆ (ಬೋರ್ಡ್) ಯಲ್ಲಿ ಹಮ್ಮಿಕೊಳ್ಳಲಾಗಿದೆ.

ವಿದ್ಯಾರ್ಥಿಗಳು ವಿಜ್ಞಾನ ವಿಷಯದ ಕಲಿಕಾ ಸಮಸ್ಯೆಗಳ ಬಗ್ಗೆ ದೀಪಾ ಉಡುಪ ಮೊ.ನಂ: 8618240682, ರಜನಿ ಉಡುಪ ಮೊ.ನಂ: 9880784064, ವಿನೋದ ಮೊ.ನಂ: 9743577651, ನವ್ಯಾ ಮೊ.ನಂ: 9008417909, ನಾಗೇಂದ್ರ ಪೈ ಮೊ.ನಂ: 9886118891, ಮಿಲ್ಟನ್ ಕ್ರಾಸ್ತಾ ಮೊ.ನಂ: 9481144081, ನಯನಾ ಮೊ.ನಂ: 9481842173 ಹಾಗೂ ಪರೀಕ್ಷಾ ಸಿದ್ಧತೆ, ಮತ್ತಿತರ ಪ್ರಶ್ನೆಗಳಿಗೆ ಡಿಡಿಪಿಐ ಎನ್. ಎಚ್. ನಾಗೂರ ಮೊ.ನಂ: 9448999353 ಮತ್ತು ಉಡುಪಿ ಬಿಇಓ ಮೊ.ನಂ: 9480695376 ಇವರಿಗೆ ಕರೆ ಮಾಡಿ ಪ್ರಶ್ನೆ ಕೇಳಿ ಪರಿಹಾರ ಪಡೆಯಬಹುದು. ಪಾಲಕರು, ಸಾರ್ವಜನಿಕರೂ ಸಹ ಕರೆ ಮಾಡಿ ಪರೀಕ್ಷಾ ಸಿದ್ಧತೆ ಮತ್ತಿತರ ಶೈಕ್ಷಣಿಕ ಸಮಸ್ಯೆಗಳಿಗೆ ಡಿಡಿಪಿಐ ನಂಬರ್‌ಗೆ ಕರೆ ಮಾಡಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಕಚೇರಿ ಪ್ರಕಟಣೆ ತಿಳಿಸಿದೆ.

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ : ಬಿಗ್ ಬಾಸ್ ಖ್ಯಾತಿಯ ಮಸ್ತಾನ್ ಚಂದ್ರ ಮನೆ ಮೇಲೆ ಪೊಲೀಸರ ದಾಳಿ -Vishwanews24