ಏಪ್ರಿಲ್‌ 16ಕ್ಕೆ ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಶಾಸಕ ಎಂ ಶ್ರೀನಿವಾಸ್‌ ನಾಮಪತ್ರ ಸಲ್ಲಿಕೆ – Vishwanews24

Featured, ರಾಜ್ಯ ನ್ಯೂಸ್

ಏಪ್ರಿಲ್‌ 16ಕ್ಕೆ ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಶಾಸಕ ಎಂ ಶ್ರೀನಿವಾಸ್‌ ನಾಮಪತ್ರ ಸಲ್ಲಿಕೆ

ಮಂಡ್ಯ, : ಕರ್ನಾಟಕ ವಿಧಾನಸಭಾ ಚುನಾವಣೆ ಕಣರಂಗೇರುತ್ತಿದ್ದಂತೆ ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಶಾಸಕ ಎಂ ಶ್ರೀನಿವಾಸ್‌ ಅವರು ಏಪ್ರಿಲ್‌ 16ಕ್ಕೆ ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಂಡ್ಯದಲ್ಲಿ ಈಗಾಗಲೇ ಟಿಕೆಟ್‌ ಪಡೆದು ಪ್ರಚಾರ ಆರಂಭಿಸಿರುವ ಎಂ ಶ್ರೀನಿವಾಸ್ ಅವರು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಂಡ್ಯದಲ್ಲಿ ಮೊದಲಿನಿಂದಲೂ ಜೆಡಿಎಸ್‌ ಪ್ರಾಬಲ್ಯವಿದೆ. ಎಚ್‌ಡಿ ದೇವೇಗೌಡ, ಎಚ್‌ಡಿ ಕುಮಾರಸ್ವಾಮಿ ಹಾಗೂ ಹಾಲಿ ಶಾಸಕ ಎಂ ಶ್ರೀನಿವಾಸ್‌ ಅವರ ಬೆಂಬಲಿಗರು ಕಾರ್ಯಕರ್ತರ ಬಹುದೊಡ್ಡ ಪಡೆ ಇದೆ.

ಕರುನಾಡಿನಲ್ಲಿ ಕಾಂಗ್ರೆಸ್ ಸೂರ್ಯೋದಯಕ್ಕೆ ಇನ್ನೊಂದು ತಿಂಗಳಷ್ಟೇ ಬಾಕಿ : ಡಿ.ಕೆ ಶಿ – Vishwanews24

ಜೆಡಿಎಸ್‌ ಭದ್ರಕೋಟೆಯಾಗಿರುವ ಮಂಡ್ಯದಲ್ಲಿ ಚುನಾವಣಾ ರಂಗ ಜೋರಾಗಿದೆ. ಎಲ್ಲ ಪಕ್ಷಗಳಿಂದಲೂ ಪ್ರಚಾರವೂ ನಡೆಯುತ್ತಿದೆ. ಜೆಡಿಎಸ್‌ನಿಂದ ಈಗಾಗಲೇ ಟಿಕೆಟ್ ಪಡೆದಿರುವ ಎಂ.ಶ್ರೀನಿವಾಸ್‌ ಅವರು ಧರ್ಮಸ್ಥಳ ಮಂಜುನಾಥೇಶ್ವರನ ದರ್ಶನ ಪಡೆದಿದ್ದು, ಏಪ್ರಿಲ್‌ 16ಕ್ಕೆ ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.

ಅವರದು ರೈತಾಪಿ ಕುಟುಂಬ. ಹನಕೆರೆಯಲ್ಲಿಯೇ ಪ್ರಾಥಮಿಕ ಹಾಗೂ ಮಾಧ್ಯಮಿಕ ವಿದ್ಯಾಭ್ಯಾಸ ಮುಗಿಸಿದರು. ಪ್ರೌಢಶಾಲಾ ಶಿಕ್ಷಣವನ್ನು ಮಂಡ್ಯದ ಸರ್ಕಾರಿ ಪ್ರೌಢಶಾಲೆಯಲ್ಲೂ (ಕಲ್ಲುಕಟ್ಟಡ), ಬಿಎಸ್ಸಿ ಪದವಿಯನ್ನು ಮೈಸೂರಿನ ಎಂಡಿಟಿಡಿಬಿ ಕಾಲೇಜಿನಲ್ಲಿ ಮುಗಿಸಿದರು. ಕಾನೂನು ಪದವಿಯನ್ನು ಮಂಡ್ಯದ ಹೊಂಬೇಗೌಡ ಕಾನೂನು ಕಾಲೇಜಿನಲ್ಲಿ ಪಡೆದು ವಕೀಲಿ ವೃತ್ತಿಯನ್ನು ಮಂಡ್ಯದಲ್ಲಿಯೇ ಪ್ರಾರಂಭಿಸಿದ್ದರು.

ಉಡುಪಿ: ಕೃಷ್ಣಮೂರ್ತಿ ಆಚಾರ್ಯ ಅವರಿಗೆ ಕೈ ತಪ್ಪಿದ ಕಾಂಗ್ರೆಸ್ ಟಿಕೆಟ್ : ಅಭಿಮಾನಿಗಳಿಂದ  ಇಂದು ಸಂಜೆ ತುರ್ತು ಸಭೆ – Vishwanews24

Leave a Reply