ಏ.30 ರವರೆಗೆ ಅಂತಾರಾಷ್ಟ್ರೀಯ ವಿಮಾನಯಾನ ರದ್ದತಿ ವಿಸ್ತರಣೆ -Vishwanews24
ಏ.30 ರವರೆಗೆ ಅಂತಾರಾಷ್ಟ್ರೀಯ ವಿಮಾನಯಾನ ರದ್ದತಿ ವಿಸ್ತರಣೆ -Vishwanews24
ನವದೆಹಲಿ : ಅಂತಾರಾಷ್ಟ್ರೀಯ ವಿಮಾನಯಾನಗಳ ರದ್ಧತಿಯನ್ನು ಏಪ್ರಿಲ್ 30 ರವರೆಗೆ ವಿಸ್ತರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶಕರು ಮಂಗಳವಾರ ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ಆದಾಗ್ಯೂ, ಅಂತರರಾಷ್ಟ್ರೀಯ ನಿಗದಿತ ವಿಮಾನಗಳನ್ನು ಆಯ್ದ ಮಾರ್ಗಗಳಲ್ಲಿ ಪ್ರಾಧಿಕಾರವು ಅನುಮತಿಸಬಹುದಾಗಿದೆ.
ಈ ನಿಷೇಧವು ಒಪ್ಪಿಗೆ ಪಡೆದು ಕಾರ್ಯಾಚರಿಸುತ್ತಿರುವ ವಿಮಾನಗಳಿಗೆ ಹಾಗೂ ಸರಕು ಸಾಗಾಣೆ ವಿಮಾನಗಳಿಗತೆ ಅನ್ವಯವಾಗಲ್ಲ ಎಂದು ಕೂಡಾ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ.
ಉಡುಪಿ ಜಿಲ್ಲೆಯ ಮೂವರು ಪೊಲೀಸರು ಹಾಗೂ ದಕ ಜಿಲ್ಲೆಯ ಐವರು ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ -Vishwanews24
ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಮಧ್ಯೆ, ಗೃಹ ಸಚಿವಾಲಯವು ಮಂಗಳವಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಮಾರ್ಗಸೂಚಿ ಏಪ್ರಿಲ್ 1 ರಿಂದ 30 ರವರೆಗೆ ಜಾರಿಯಲ್ಲಿ ಇರಲಿದೆ.
ಕೊರೊನಾ ಸೋಂಕಿಗೆ ಲಸಿಕೆ ನೀಡಲಾಗುತ್ತಿರುವ ಮಧ್ಯೆಯೂ ಕೊರೊನಾ ಸೋಂಕು ನಿರಂತರವಾಗಿ ಏರಿಕೆ ಆಗುತ್ತಿರುವುದನ್ನು ಗಮನದಲ್ಲಿರಿಸಿಕೊಂಡು ಅಂತರರಾಷ್ಟ್ರೀಯ ವಿಮಾನಯಾನ ರದ್ಧತಿ ವಿಸ್ತರಣೆ ಮಾಡಲಾಗಿದೆ ಎಂದೂ ನಿರ್ದೇಶನಾಲಯ ತಿಳಿಸಿದೆ.
