ಐಫೋನ್ ಬದಲು ಆಯಿಲ್ ಕಳುಹಿಸಿದ್ದ ಫ್ಲಿಪ್​ಕಾರ್ಟ್​ : 1.8 ಲಕ್ಷ ರೂ. ಪರಿಹಾರಕ್ಕೆ ಮುಂಬೈನ ಗ್ರಾಹಕ ನ್ಯಾಯಾಲಯ ಆದೇಶ – vishwanews24

Featured, ರಾಷ್ಟ್ರ ನ್ಯೂಸ್

ಐಫೋನ್ ಬದಲು ಆಯಿಲ್ ಕಳುಹಿಸಿದ್ದ ಫ್ಲಿಪ್​ಕಾರ್ಟ್​ : ಭಾರಿ ದಂಡ ವಿಧಿಸಿದ ಮುಂಬೈನ ಗ್ರಾಹಕ ನ್ಯಾಯಾಲಯ

ಮುಂಬೈ: ಆನ್‌ಲೈನ್‌ನಲ್ಲಿ ಲಕ್ಷಾಂತರ ರೂಪಾಯಿ ಕೊಟ್ಟು ಪ್ರೀಮಿಯಂ ಐಫೋನ್ ಆರ್ಡರ್ ಮಾಡಿದ ಗ್ರಾಹಕನಿಗೆ ಫೋನ್ ಬದಲಿಗೆ ‘ಗಡ್ಡಬೆಳೆಸುವ ಎಣ್ಣೆ’ ತಲುಪಿಸಿದ್ದ ಇ-ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್​ಗೆ ಮುಂಬೈನ ಗ್ರಾಹಕ ನ್ಯಾಯಾಲಯ ಭಾರಿ ದಂಡ ವಿಧಿಸಿದೆ.

ಗ್ರಾಹಕನಿಗೆ ಫೋನ್‌ನ ಪೂರ್ಣ ಮೊತ್ತ 1.11 ಲಕ್ಷ ರೂ. ವನ್ನು ಬಡ್ಡಿ ಸಮೇತ ಮರುಪಾವತಿಸುವುದರ ಜೊತೆಗೆ, ಅನುಭವಿಸಿದ ಮಾನಸಿಕ ಯಾತನೆ ಹಾಗೂ ಕಾನೂನು ವೆಚ್ಚವಾಗಿ 70,000 ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ ಏನು?

ಏಪ್ರಿಲ್ 2023ರಲ್ಲಿ ಮುಂಬೈನ ಪೊವೈ ನಿವಾಸಿಯೊಬ್ಬರು ಫ್ಲಿಪ್‌ಕಾರ್ಟ್ ಮೂಲಕ ನೋ-ಕಾಸ್ಟ್ ಇಎಂಐ ಯೋಜನೆಯಡಿ 1,11,793 ರೂ. ವೆಚ್ಚ ಮಾಡಿ ಆ್ಯಪಲ್ ಐ-ಫೋನ್ 14 ಪ್ರೊ (128 GB) ಬುಕ್ ಮಾಡಿದ್ದರು. ಫೋನ್‌ಗಾಗಿ ಆರ್ಡರ್ ಮಾಡಿದ್ದ ಚಾರ್ಜರ್ ಮತ್ತು ಕವರ್ ಸರಿಯಾಗಿ ತಲುಪಿದ್ದರೂ, ಮುಖ್ಯ ಪಾರ್ಸೆಲ್ ಓಪನ್ ಮಾಡಿದಾಗ ಐಫೋನ್ ಬದಲಿಗೆ ಬಾಕ್ಸ್‌ನಲ್ಲಿ ‘ಗಡ್ಡದ ಬೆಳವಣಿಗೆಗೆ ಬಳಸುವ ಎಣ್ಣೆ’ ಮತ್ತು ಪ್ಯಾಕಿಂಗ್ ಸಾಮಗ್ರಿಗಳಿರುವುದು ಕಂಡುಬಂದಿತ್ತು.

ಕೇಂದ್ರದ ಭರವಸೆಯ ಬಳಿಕ  ಸೋನಂ ವಾಂಗ್ಚುಕ್ 26 ದಿನಗಳ ಉಪವಾಸ ಅಂತ್ಯ – vishwanews24

ಗ್ರಾಹಕ ತಕ್ಷಣವೇ ಅಗತ್ಯ ಸಾಕ್ಷ್ಯಗಳೊಂದಿಗೆ ಫ್ಲಿಪ್‌ಕಾರ್ಟ್ ಗ್ರಾಹಕ ಸೇವೆಯನ್ನು ಸಂಪರ್ಕಿಸಿದರೂ, ಸಂಸ್ಥೆಯು ಯಾವುದೇ ಹಣ ಮರುಪಾವತಿ ಅಥವಾ ಹೊಸ ಫೋನ್ ನೀಡದೇ, ದೂರನ್ನು ಪರಿಹರಿಸಲಾಗಿದೆ ಎಂದು ಪದೇ ಪದೇ ಕ್ಲೋಸ್ ಮಾಡಿದೆ. ಸಮಸ್ಯೆ ಬಗೆಹರಿಯದಿದ್ದಾಗ ಗ್ರಾಹಕರು ಮುಂಬೈನ ಹೆಚ್ಚುವರಿ ಗ್ರಾಹಕ ನ್ಯಾಯಾಲಯದ ಮೊರೆ ಹೋದರು. ಪ್ರಕರಣದ ವಿಚಾರಣೆ ನಡೆಸಿದ ಪೀಠವು ಈ ಕೆಳಗಿನ ಪ್ರಮುಖ ಆದೇಶಗಳನ್ನು ನೀಡಿದೆ.

ಐಫೋನ್‌ನ ಪೂರ್ಣ ಮೊತ್ತ 1,11,793 ರೂ.ವನ್ನು ವಾರ್ಷಿಕ ಶೇಕಡಾ 9 ರಷ್ಟು ಬಡ್ಡಿಯೊಂದಿಗೆ ಹಿಂತಿರುಗಿಸಬೇಕು. ಜೊತೆಗೆ ಗ್ರಾಹಕನಿಗೆ ಉಂಟಾದ ಮಾನಸಿಕ ಕಿರುಕುಳಕ್ಕೆ 50,000 ರೂ. ಹಾಗೂ ವ್ಯಾಜ್ಯದ ವೆಚ್ಚವಾಗಿ 20,000 ರೂ.ವನ್ನು 45 ದಿನಗಳ ಒಳಗೆ ಪಾವತಿಸಬೇಕು ಎಮದು ಸೂಚಿಸಿದೆ.

ಬೆಳ್ತಂಗಡಿ: ಚಾರ್ಮಾಡಿ ಘಾಟ್ ನಲ್ಲಿ ಚಿರತೆ ಪ್ರತ್ಯಕ್ಷ ; ವಾಹನ ಸವಾರರಲ್ಲಿ ಆತಂಕ – vishwanews24

ಗ್ರಾಹಕರಿಗೆ ತಪ್ಪು ವಸ್ತು ತಲುಪಿದಾಗ ಇ-ಕಾಮರ್ಸ್ ಸಂಸ್ಥೆಯು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಸೂಕ್ತ ತನಿಖೆ ನಡೆಸದೆ ದೂರನ್ನು ಮುಚ್ಚುವುದು “ಅನ್ಯಾಯದ ವ್ಯಾಪಾರ ಪದ್ಧತಿ” ಎಂದು ಆಯೋಗ ಕಟ್ಟುನಿಟ್ಟಾಗಿ ಹೇಳಿದೆ.

Leave a Reply