ಒಂದು ಹಿಂದೂ ಹುಡುಗಿಯನ್ನು ಹಾರಿಸಿಕೊಂಡು ಹೋದ್ರೆ 10 ಮುಸ್ಲಿಂ ಹುಡುಗಿಯನ್ನು ಹಾರಿಸಿಕೊಂಡು ಹೋಗಿ : ಹಿಂದೂ ಯುವಕರಿಗೆ ಪ್ರಮೋದ್ ಮುತಾಲಿಕ್ ಕರೆ – Vishwanews24
ಒಂದು ಹಿಂದೂ ಹುಡುಗಿಯನ್ನು ಹಾರಿಸಿಕೊಂಡು ಹೋದ್ರೆ 10 ಮುಸ್ಲಿಂ ಹುಡುಗಿಯನ್ನು ಹಾರಿಸಿಕೊಂಡು ಹೋಗಿ : ಹಿಂದೂ ಯುವಕರಿಗೆ ಪ್ರಮೋದ್ ಮುತಾಲಿಕ್ ಕರೆ
ಗದಗ : ಇನ್ಮುಂದೆ ಒಂದು ಹಿಂದೂ ಹುಡುಗಿಯನ್ನು ಹಾರಿಸಿಕೊಂಡು ಹೋದ್ರೆ ನೀವು 10 ಮುಸ್ಲಿಂ ಹುಡುಗಿಯನ್ನು ಹಾರಿಸಿಕೊಂಡು ಹೋಗಿ ಎಂದು ಬಹಿರಂಗ ಸಮಾವೇಶದಲ್ಲಿ ಹಿಂದೂ ಯುವಕರಿಗೆ ಪ್ರಮೋದ್ ಮುತಾಲಿಕ್ ಕರೆ ಕೊಟ್ಟಿದ್ದಾರೆ.
ಗದಗ ಜಿಲ್ಲೆ ಶಿರಹಟ್ಟಿ ಪಟ್ಟಣದಲ್ಲಿ ನಡೆದ ಸಮಾವೇಶದಲ್ಲಿ ಪ್ರಮೋದ್ ಮುತಾಲಿಕ್ ಮುಸ್ಲಿಂ ಸಮುದಾಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಹಿಂದು ಯುವತಿಯರನ್ನು ಲವ್ ಜಿಹಾದ್ ಮಾಡಲಾಗುತ್ತಿದೆ.
ಹಿಂದೂ ಹೆಣ್ಣು ಮಕ್ಕಳನ್ನು ಪ್ರೀತಿ ಪ್ರೇಮದ ಹೆಸರಿನಲ್ಲಿ ವ್ಯವಸ್ಥಿತವಾಗಿ ಮೋಸ ಮಾಡಲಾಗುತ್ತಿದೆ. ಮೋಸದಿಂದ ಹೆಣ್ಣು ಮಕ್ಕಳನ್ನು ಮತಾಂತರ ಮಾಡಲಾಗುತ್ತಿದೆ. ಸಂಘರ್ಷಕ್ಕೆ ಎಡೆ ಮಾಡಿಕೊಡಬೇಡಿ, ನಿಮ್ಮ ಮಕ್ಕಳಿಗೆ ಬುದ್ಧಿ ಹೇಳಿ” ಅಂತ ಮುಸ್ಲಿಂ ಮುಖಂಡರಿಗೆ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
ಈ ಮಣ್ಣಿನ ಕಣ ಕಣದಲ್ಲಿಯೂ ಶಿವಾಜಿ ರಕ್ತ ಇದೆ. ಓವೈಸಿ ಒಬ್ಬ ನಾಯಿ, ನಿನ್ನಂತವರನ್ನ ಬಹಳ ಜನರನ್ನ ನೋಡಿದ್ದೀವಿ. ನಾವು 20 ಕೊಟಿ ಮುಸ್ಲಿಂರು 100 ಕೋಟಿ ಹಿಂದೂಗಳನ್ನು ನಾಶ ಮಾಡುತ್ತೇವೆ ಅಂತಾನೆ. ಟಿಪ್ಪು ಸುಲ್ತಾನ, ಗೋರಿ, ಘಜನಿ, ಬಾಬಾರ್ ಗಳನ್ನ ಗೋರಿ ಮಾಡಿದ್ದೇವೆ” ಅಂತ ಗುಡುಗಿದ್ರು. ಈ ದೇಶವನ್ನ ಇಸ್ಲಾಂ ನ್ನಾಗಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಜಾತಿಗಳ ಆಚರಣೆ ಮನೆಯಲ್ಲಿರಲಿ, ಹೊರಗೆ ಬಂದ್ರೆ ಹಿಂದೂ ಅಂತ ಹೆಮ್ಮೆಯಿಂದ ಹೇಳಿ ಎಂದ ಅವರು, ಶಾಸಕ ಜಮೀರ್ ಅಹ್ಮದ್ ವಿರುದ್ಧ ವಾಗ್ದಾಳಿ ಸಹ ನಡೆಸಿದರು.
ಈಶ್ವರಪ್ಪ ಅವರು ತಮ್ಮ ಮೇಲಿನ ಆರೋಪದಿಂದ ಮುಕ್ತರಾಗಲಿದ್ದಾರೆ ಎಂಬ ನಂಬಿಕೆ ಇದೆ : ಸಿಎಂ ಬೊಮ್ಮಾಯಿ – VIshwanews24
