ಓಮನ್ ಬಿಲ್ಲವಾಸ್ : ಅಧ್ಯಕ್ಷರಾಗಿ ಸುಜಿತ್ ಎಸ್ ಪಾಂಗಾಳ ಆಯ್ಕೆ – Vishwanews24

Featured, ಉಡುಪಿ

ಓಮನ್ ಬಿಲ್ಲವಾಸ್ : ಅಧ್ಯಕ್ಷರಾಗಿ ಸುಜಿತ್ ಎಸ್ ಪಾಂಗಾಳ ಆಯ್ಕೆ

ಮಸ್ಕತ್: ಓಮನ್ ಬಿಲ್ಲವಾಸ್ ಇದರ 2023-24ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ಜನವರಿ 6ರಂದು ಮಸ್ಕತಿನ ಅಜೈಬ ಗಾರ್ಡನ್ ಸಭಾಂಗಣದಲ್ಲಿ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಕಾರ್ಯಕ್ರಮ ಜರಗಿತು.

ನೂತನ ಸಾಲಿನ ಅಧ್ಯಕ್ಷರಾಗಿ ಸುಜಿತ್ ಎಸ್ ಅಂಚನ್ ಪಾಂಗಾಳ ಮತ್ತು ವಿವಿಧ ಪದಾಧಿಕಾರಿಗಳು ಆಯ್ಕೆಯಾಗಿದ್ದು, ಬ್ರಹ್ಮಶ್ರೀ ನಾರಾಯಣ ಗುರುದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಹಿರಿಯರಾದ ರಾಮಕೃಷ್ಣ ಸುಜೀರ್ ಪ್ರಮಾಣ ವಚನ ಬೋಧಿಸಿ, ಆಶೀರ್ವಚನ ನೀಡಿದರು.

ಹುಬ್ಬಳ್ಳಿಯಲ್ಲಿ ಮೋದಿ ಭರ್ಜರಿ ರೋಡ್ ಶೋ : ಅಭಿಮಾನಿಗಳಿಂದ ಮೋದಿ ಮೋದಿ ಜೈಕಾರ – ಕಾರಿನಿಂದ ಹೊರಬಂದು ಜನರತ್ತ ಕೈ ಬೀಸಿದ ಪ್ರಧಾನಿ – Vishwanews24

ಈ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕ ಸದಸ್ಯರಾದ ಡಾ. ಅಂಚನ್ ಸಿ ಕೆ, ಆಯ್ಕೆ ಸಮಿತಿಯ ಕೃಷ್ಣಪ್ರಸಾದ್ ಮತ್ತು ಬಾಲಕೃಷ್ಣ ಆರ್ ಕೋಟ್ಯಾನ್ ಕಾಪು ಹಾಗೂ ಹಾಗೂ ವಿವಿಧ ಬಿಲ್ಲವ ಸಮಾಜದ ಸದಸ್ಯರು ಉಪಸ್ಥಿತರಿದ್ದರು.

Leave a Reply