ಕಂಚಿನಡ್ಕದ ಮಿಂಚಿನ ಬಾವಿ ಬಬ್ಬು ಸ್ವಾಮೀ ದೈವಸ್ಥಾನದ ಅಭಿವೃದ್ಧಿಗೆ SDPI ವಿರೋಧ ವಿಚಾರ -ಅವಶ್ಯಕತೆ ಬಿದ್ದರೇ ಕಂಚಿನಡ್ಕ ಚಲೋ – ಯಶ್ಪಾಲ್ ಸುವರ್ಣ ಎಚ್ಚರಿಕೆ :vishwanews24
ಅವಶ್ಯಕತೆ ಬಿದ್ದರೇ ಕಂಚಿನಡ್ಕ ಚಲೋ – ಯಶ್ಪಾಲ್ ಸುವರ್ಣ Vishwanews24
ಉಡುಪಿ: ಕಂಚಿನಡ್ಕ ಮಿಂಚಿನ ಬಾವಿ ಶ್ರೀ ಬಬ್ಬುಸ್ವಾಮಿ ದೇವಸ್ಥಾನಕ್ಕೆ ಬಿಜೆಪಿ ರಾಷ್ಟ್ರೀಯ ಹಿಂ.ಮೋರ್ಚಾದ ಪ್ರ.ಕಾರ್ಯದರ್ಶಿ ಯಶ್ಪಾಲ್ ಸುವರ್ಣ ಮಂಗಳವಾರ ಸಂಜೆ ಭೇಟಿ ನೀಡಿದರು
ನಂತರ ಮಾತನಾಡಿದ ಅವರು ದಲಿತರು ಹಾಗೂ ಇತರರು ಅನಾದಿ ಕಾಲದಿಂದಲೂ ಶ್ರದ್ಧಾ ಭಕ್ತಿಯಿಂದ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ಶಕ್ತಿಗಳನ್ನು ಆರಾಧಿಸಿಕೊಂಡು ಬರುತ್ತಿದ್ದು ಐತಿಹಾಸಿಕ ಸ್ಥಳವಾಗಿದೆ. ಈ ಕಾರಣೀಕದ ಕ್ಷೇತ್ರಕ್ಕೆ ಭಕ್ತರೊಬ್ಬರು ದಾನದ ರೂಪದಲ್ಲಿ ತಗಡಿನ ಮೇಲ್ಛಾವಣಿ ನೀಡಲು ಮುಂದಾಗ ಅದನ್ನು ಅಡ್ಡಿಪಡಿಸಲು ಎಸ್.ಡಿ.ಪಿ.ಐ ಪ್ರಾಯೋಜಕತ್ವದ ಮುಸಲ್ಮಾನರು ಯಾರು ಎಂದು ಪ್ರಶ್ನಿಸಿದರು
ಸರಕಾರಿ ಜಾಗದಲ್ಲಿ ಮೇಲ್ಛಾವಣಿ ಬರುತ್ತದೆ ಎಂದು ಅವರು ದೂರುತ್ತಿದ್ದಾರೆ, ಆದರೆ ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಕೆಲವು ಮುಸಲ್ಮಾನರು ಮನೆ ನಿರ್ಮಿಸಿಕೊಂಡಿದ್ದಾರೆ ಆ ವಿಚಾರಗಳ ಬಗ್ಗೆಯೂ ತನಿಖೆ ನಡೆಯಲಿ
ಸಮಸ್ತ ಹಿಂದೂ ಸಮಾಜ ದಲಿತ ಸಮುದಾಯದ ಬೆಂಬಕ್ಕೆ ನಿಲ್ಲುತ್ತದೆ, ಅವಶ್ಯಕತೆ ಬಿದ್ದರೇ ಕಂಚಿನಡ್ಕ ಚಲೋ ಮಾಡಲು ನಾವು ಸಿದ್ದರಿದ್ದೇವೆ ಎಂದು ಹೇಳಿದರು.
ತುಳುನಾಡಿನ ಕಾರಣಿಕದ ಬಬ್ಬುಸ್ವಾಮಿ ದೈವ ಮಾಯವಾದ ಸ್ಥಳ ಕಂಚಿನಡ್ಕ ದ ಮಿಂಚಿನ ಬಾವಿ ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವವಿರುವ ದಲಿತ ಸಮುದಾಯಕ್ಕೆ ಸೇರಿದ ಆರಾಧನಾ ಕ್ಷೇತ್ರದಅಭಿವೃದ್ಧಿಗೆ ಮುಸಲ್ಮಾನರಿಂದ ಕೆಲವು ದಿನಗಳ ಹಿಂದೆ ತಡೆ ಉಂಟಾಗಿತ್ತು.

ಈ ಸಂದರ್ಭದಲ್ಲಿ ಕ್ಷೇತ್ರದ ಪ್ರಮುಖರಾದ ಲೋಕೇಶ್ ಪಡುಬಿದ್ರಿ, ದಿನೇಶ್ ಕೋಟ್ಯಾನ್, ಸದಾಶಿವ ಕೋಟ್ಯಾನ್, ವಸಂತ ಪಾದೆಬೆಟ್ಟು, ಸಂತೋಷ್ ನಂಬಿಯಾರ್, ಶಂಕರ್ ನಂಬಿಯರ್, ಸುಜಿತ್ ಕಂಚಿನಡ್ಕ, ಶಂಕರ ಪಾನರ, ಸುವಾಸ್ ಶೆಟ್ಟಿ,, ಗೋವಿಂದ ಕಂಚಿನಡ್ಕ, ರಮೇಶ್ ಕಂಚಿನಡ್ಕ ಮೊದಲಾದವರು ಉಪಸ್ಥಿತರಿದ್ದರು.

