ಕಟೀಲು ಬ್ರಹ್ಮಕಲಶೋತ್ಸವದಲ್ಲಿ ಮಗುವಿನ ಚಿಕಿತ್ಸೆಗೆ  ವಿಭಿನ್ನ ವೇಷ ಧರಿಸಿ ಹಣ ಸಂಗ್ರಹಿಸಿದ ಮೂಡಬಿದ್ರೆಯ ವಿಕ್ಕಿ ಶೆಟ್ಟಿ ..Vishwanews24

Featured, ಉಡುಪಿ, ದಕ್ಷಿಣ ಕನ್ನಡ

ಕಟೀಲು ಬ್ರಹ್ಮಕಲಶೋತ್ಸವದಲ್ಲಿ ಮಗುವಿನ ಚಿಕಿತ್ಸೆಗೆ  ವಿಭಿನ್ನ ವೇಷ ಧರಿಸಿ ಹಣ ಸಂಗ್ರಹಿಸಿದ ಮೂಡಬಿದ್ರೆಯ ವಿಕ್ಕಿ ಶೆಟ್ಟಿ ..

5 ವರ್ಷ ದ ಕಂದಮ್ಮ ನಿಹಾರಿಕಾ ರಕ್ತದ ಕ್ಯಾನ್ಸರ್ ನಿಂದ ಬಳತಿದ್ದು ಮಣಿಪಾಲ ದ ಕಸ್ತೂರ್ಬ ಅಸ್ಪತೆ ಯಲ್ಲಿ‌ ಚಿಕಿಸ್ಸೆ ಪಡೆಯುತ್ತಿದ್ದರೆ ಇದರ ಚಿಕಿತ್ಸಾ ವೆಚ್ಚಾಕ್ಕೆ ಮೂಡಬಿದ್ರೆಯ ವಿಕ್ಕಿ ಶೆಟ್ಟಿಯಿಂದ ವಿಶೇಷ ವೇಷ..

ಮಹೇಶ್ ಮಡಿವಾಳರ ಐದರ ಹರೆಯದ ಮುದ್ದು ಕಂದಮ್ಮ ನಿಹಾರಿಕಾ ಎಂಬ ಹೆಣ್ಣು ಮಗು ರಕ್ತಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದು ಈ ಮಗುವಿಗೆ ಚಿಕಿತ್ಸೆಗೆ ಸುಮಾರು 15 ಲಕ್ಷದಷ್ಟು ಬೇಕಾಗಿದ್ದು‌‌.. ಈ ಮಗುವಿನ ಕಾಯಿಲೆಗೆ ನನ್ನ ಕೈಲಾದ ಸಹಾಯ ಮಾಡಲು ಮುಂದಾಗಿ ದಿನಾಂಕ *30-01-2020 ನೇ ಗುರುವಾರ ನಡೆದ ಶ್ರೀಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ಅಮ್ಮನ ಬ್ರಹ್ಮಕಲಶದಲ್ಲಿ ಮೂಡಬಿದ್ರೆಯ ವಿಕ್ಕಿ ಶೆಟ್ಟಿಯವರು ವಿಶೇಷ ವೇಷ ಧರಿಸಿ ಹಣಸಂಗ್ರಹ ಮಾಡಿದರು.

ಈ ನನ್ನ ಈ ಪ್ರಯತ್ನಕ್ಕೆ ನನ್ನ ಬೆಂಗಾವಲಾಗಿ ನಿಂತ ನೇತಾಜಿ ಬ್ರಿಗೇಡ್ ಸಂಘಟನೆ, ಶ್ರೀ ಕಟೀಲು ಬ್ರಹ್ಮಕಲಶೋತ್ಸವ ಸಮಿತಿ, ಅಮೃತ ಸಂಜೀವಿನಿಯ ಸರ್ವಸದಸ್ಯರಿಗೂ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ.ಮಗುವಿನ ಚಿಕಿತ್ಸೆಗೆ ಅಳಿಲು ಸೇವೆಯಾಗಿ ಧನಸಹಾಯ ನೀಡಿ ನನ್ನ ಪ್ರಯತ್ನಕ್ಕೆ ಯಶದ ಮಾಲೆ ತೊಡಿಸಿದ ಊರ ಪರವೂರ ಕಟಿಲೇಶ್ವರಿಯ ಭಕ್ತವೃಂದಕ್ಕೆ ಹೃತ್ಪೂರ್ವಕ ಧನ್ಯವಾದಗಳು…

ಹಾಗೆಯೇ ನನ್ನ ಈ ಪುಟ್ಟ ಕೈಂಕರ್ಯಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ನನ್ನೆಲ್ಲ ಮಿತ್ರರು ಹಾಗೂ ಹಿತೈಷಿಗಳಿಗೂ ಹಾಗೆಯೇ ಸಾಮಾಜಿಕ ಜಾಲತಾಣ ಹಾಗೂ ಇತರ ಮಾಧ್ಯಮಗಳಲ್ಲಿ ಪ್ರಚಾರ ನೀಡಿದ ಹಾಗೂ ಧನಸಹಾಯ ನೀಡಿದ ನಿಮ್ಮ ಪ್ರೀತಿ ವಿಶ್ವಾಸಕ್ಕೆ ಚಿರಋಣಿಯಾಗಿ ಮನದಾಳದ ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದೇನೆ.

ವಿಕ್ಕಿ ಶೆಟ್ಟಿ ಬೆದ್ರ