ಕಡಬ : ಆಲ್ಟೋ ಕಾರು ಮತ್ತು ತೂಫಾನ್ ನಡುವೆ ಭೀಕರ ರಸ್ತೆ ಅಪಘಾತ -ಮಗು ಸೇರಿದಂತೆ ನಾಲ್ವರು ಮೃತ್ಯು – Vishwanews24
ಕಡಬ : ಆಲ್ಟೋ ಕಾರು ಮತ್ತು ತೂಫಾನ್ ನಡುವೆ ಭೀಕರ ರಸ್ತೆ ಅಪಘಾತ -ಮಗು ಸೇರಿದಂತೆ ನಾಲ್ವರು ಮೃತ್ಯು
ಕಡಬ : ಆಲ್ಟೋ ಕಾರು ಮತ್ತು ತೂಫಾನ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟು, ಹಲವರು ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನೆಟ್ಟಣದ ಸೇತುವೆ ಸಮೀಪ ಮಂಗಳವಾರ (ಎ.18) ಮಧ್ಯಾಹ್ನ ಸಂಭವಿಸಿದೆ.
ಕಾರು ಮತ್ತು ತೂಫಾನ್ ವಾಹನ ಮುಖಾಮುಖಿ ಢಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಕಾರು ಕುಕ್ಕೆ ಕಡೆ ಹಾಗೂ ತೂಫನ್ ಧರ್ಮಸ್ಥಳ ಕಡೆಗೆ ತೆರಳುವ ವೇಳೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಒಂದು ಮಗು, ಇಬ್ಬರು ಪುರುಷರು ಹಾಗೂ ಒರ್ವ ಮಹಿಳೆ ಸೇರಿದಂತೆ ನಾಲ್ವರು, ಮೃತಪಟ್ಟಿದ್ದಾರೆ.
ಮೃತರು ಬೇಳೂರು ಕಡೆಯವರು ಎಂದು ತಿಳಿದು ಬಂದಿದೆ. ತೂಫನ್ ನಲ್ಲಿದ್ದವರು ಹಾಸನ ಕಡೆಯವರು ಎನ್ನಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ತೀವ್ರತೆಗೆ ಎರಡೂ ವಾಹನಗಳು ಜಖಂಗೊಂಡಿವೆ.
ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿದ್ದಾರೆ.
