ಕರ್ನಾಟಕದಲ್ಲಿ ಜೆಡಿಎಸ್​ ನಾಶ ಮಾಡ್ತೀವಿ ಎಂದು ಹೊರಟ ಕಾಂಗ್ರೆಸ್ಸಿಗರಿಗೆ ಪಂಚರಾಜ್ಯ ಚುನಾವಣೆ ಫಲಿತಾಂಶ ತಕ್ಕ ಉತ್ತರ ಕೊಟ್ಟಿದೆ : ಎಚ್​ಡಿಕೆ – Vishwanews24

Featured, ರಾಜ್ಯ ನ್ಯೂಸ್

ಕರ್ನಾಟಕದಲ್ಲಿ ಜೆಡಿಎಸ್​ ನಾಶ ಮಾಡ್ತೀವಿ ಎಂದು ಹೊರಟ ಕಾಂಗ್ರೆಸ್ಸಿಗರಿಗೆ ಪಂಚರಾಜ್ಯ ಚುನಾವಣೆ ಫಲಿತಾಂಶ ತಕ್ಕ ಉತ್ತರ ಕೊಟ್ಟಿದೆ : ಎಚ್​ಡಿಕೆ – Vishwanews24

ಬೆಂಗಳೂರು: ಭಾರೀ ಕುತೂಹಲ ಮೂಡಿಸಿದ್ದ ಪಂಚರಾಜ್ಯ ಚುನಾವಣಾಯ ಫಲಿತಾಂಶ ಕುರಿತು ಬಹುತೇಕ ಸ್ಪಷ್ಟ ಚಿತ್ರಣ ಸಿಕ್ಕಿದ್ದು, ಕಾಂಗ್ರೆಸ್​ಗೆ ಹೀನಾಯ ಸೋಲಾಗಿದೆ. ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ, ಕರ್ನಾಟಕದಲ್ಲಿ ಆಗಲೇ ಅಧಿಕಾರ ಹಿಡಿದೇ ಬಿಟ್ಟಿದ್ದೀವಿ ಅನ್ನೋ ಹೇಗೆ ಕರ್ನಾಟಕದಲ್ಲಿ ಜೆಡಿಎಸ್​ ಅನ್ನು ನಾಶ ಮಾಡ್ತೀವಿ ಎಂದು ಹೊರಟ ಕಾಂಗ್ರೆಸ್ಸಿಗರಿಗೆ ಈ ಪಂಚರಾಜ್ಯ ಚುನಾವಣೆ ಫಲಿತಾಂಶ ತಕ್ಕ ಉತ್ತರ ಕೊಟ್ಟಿದೆ ಎಂದರು.

ಪಶ್ಚಿಮ ಬಂಗಾಳ ಮತ್ತು ಪಂಜಾಬ್​ ಚುನಾವಣೆ ಫಲಿತಾಂಶವೇ ನಮಗೆ ಸ್ಫೂರ್ತಿ. ಗೋವಾ, ಉತ್ತರಾಖಂಡ್​ನಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸಲು ಅಲ್ಲಿ ಯಾರೂ ನಾಯಕರಿಲ್ಲ ಎಂಬಂತೆ ಕರ್ನಾಟಕದ ಸೂತ್ರಧಾರಿಗಳನ್ನು ಕರೆಸಿಕೊಳ್ಳಲಿಲ್ಲವೇ? ಈಗ ಏನಾಯ್ತು ನೋಡಿ? ಎಂದು ಡಿಕಿಶಿ ವಿರುದ್ಧ ಎಚ್​ಡಿಕೆ ಪರೋಕ್ಷ ವಾಗ್ದಾಳಿ ನಡೆಸಿದರು.

ಪಂಜಾಬ್​ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಸೋಲು: ಸಿಎಂ ಸ್ಥಾನಕ್ಕೆ ಚನ್ನಿ ರಾಜೀನಾಮೆಗೆ ಕ್ಷಣಗಣನೆ – Vishwanews24

Leave a Reply