ಕರ್ನಾಟಕ ಉಪಚುನಾವಣೆ : ಗೆಲುವು ನಮ್ಮದೇ ಎಂದ ಎನ್ಡಿಎ ನಾಯಕರು ; ಸಮೀಕ್ಷೆಗಳು ಹಿಂದೆ ಸುಳ್ಳಾಗಿವೆ ಎಂದ ಕಾಂಗ್ರೆಸ್ – vishwanews24
ಕರ್ನಾಟಕ ಉಪಚುನಾವಣೆ : ಗೆಲುವು ನಮ್ಮದೇ ಎಂದ ಎನ್ಡಿಎ ನಾಯಕರು ; ಸಮೀಕ್ಷೆಗಳು ಹಿಂದೆ ಸುಳ್ಳಾಗಿವೆ ಎಂದ ಕಾಂಗ್ರೆಸ್
ಬೆಂಗಳೂರು: ರಾಜ್ಯದ ಮೂರು ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂಬ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ಗೆ ಬಿಗ್ ಶಾಕ್ ಸಿಗುವ ಸಾಧ್ಯತೆಯಿದೆ.
ವಿಧಾನಸಭಾ ಚುನಾವಣೆಯಲ್ಲಿ 136 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್ ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂಬ ನಿರೀಕ್ಷೆಯನ್ನು ಇಟ್ಟುಕೊಂಡಿದೆ. ಆದರೆ ಸಮೀಕ್ಷೆಯಲ್ಲಿ ಸಂಡೂರು ಮಾತ್ರ ಈ ಬಾರಿ ಕೈ ಹಿಡಿಯಲಿದೆ ಎಂದು ಭವಿಷ್ಯ ನುಡಿದಿವೆ.
ಪಿ-ಮಾರ್ಕ್ ಸಮೀಕ್ಷೆ ಚನ್ನಪಟ್ಟಣದಲ್ಲಿ ಜೆಡಿಎಸ್, ಶಿಗ್ಗಾವಿಯಲ್ಲಿ ಬಿಜೆಪಿ, ಸಂಡೂರಿನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಹೇಳಿದೆ. ಉಪಚುನಾವಣೆಯ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ನೋಡಿ ಎನ್ಡಿಎ ಮೈತ್ರಿಕೂಟದಲ್ಲಿ ಸಂಭ್ರಮ ಮನೆ ಮಾಡಿದೆ. ಆದರೆ ಕಾಂಗ್ರೆಸ್ ಸಮೀಕ್ಷಾ ವರದಿಯನ್ನು ಒಪ್ಪಿಕೊಂಡಿಲ್ಲ. ಹಿಂದೆ ಹಲವಾರು ಸಮೀಕ್ಷೆಗಳು ಸುಳ್ಳಾಗಿವೆ. ಹೀಗಾಗಿ ಈ ಬಾರಿ ಮೂರಕ್ಕೆ ಮೂರು ಸ್ಥಾನ ಗೆಲ್ಲುತ್ತೇವೆ ಎಂದು ಕಾಂಗ್ರೆಸ್ ಹೇಳುತ್ತಿದೆ.
ಉಡುಪಿ: ಮನೆಯಲ್ಲಿದ್ದ ಚಿನ್ನ ವಜ್ರಾಭರಣ ಕಳವು ಪ್ರಕರಣ: ಹೋಮ್ ನರ್ಸ್ ಬಂಧನ – vishwanews24
ಎನ್ಡಿಎ ಪಾಳೆಯದಲ್ಲಿ ವಿಶ್ವಾಸ:
ಶಿಗ್ಗಾಂವಿ ಗೆಲುವು ನಿಶ್ಚಿತ ಎನ್ನುವ ವಿಶ್ವಾಸದಲ್ಲಿ ಮೈತ್ರಿ ನಾಯಕರಿದ್ದಾರೆ. ಸಂಸದ ಬೊಮ್ಮಾಯಿ ಸ್ವಕ್ಷೇತ್ರದ ಮೇಲೆ ಹಿಡಿತ ಇಟ್ಟುಕೊಂಡಿದ್ದಾರೆ. ಕಾಂಗ್ರೆಸ್ನಲ್ಲಿ ನಾಯಕತ್ವದ ಕೊರತೆ ಬಿಜೆಪಿಗೆ ಪ್ಲಸ್ ಆಗಲಿದೆ ಎನ್ನುವ ಲೆಕ್ಕಾಚಾರವನ್ನು ಹಾಕಿಕೊಂಡಿದ್ದಾರೆ.
ಸಂಡೂರಿನಲ್ಲೂ ಈ ಬಾರಿ ಅಲ್ಲಿ ಜನ ಬದಲಾವಣೆ ಬಯಸಿದ್ದಾರೆ. ಕಾಂಗ್ರೆಸ್ ಆಂತರಿಕ ಕಚ್ಚಾಟ ನಮಗೆ ಪೂರಕ ಆಗಲಿದೆ. ಜನಾರ್ದನ ರೆಡ್ಡಿ ಕಮಾಲ್ ಮಾಡಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಚನ್ನಪಟ್ಟಣದಲ್ಲಿ ನಿಖಿಲ್ ಜಯಗಳಿಸಲಿದ್ದಾರೆ.
ಜಮೀರ್ ಹೇಳಿಕೆಗಳು, ದೇವೇಗೌಡರ ಪ್ರವೇಶ, ನಿಖಿಲ್ ಮೇಲೆ ಅನುಕಂಪ ಎಲ್ಲ ಕೆಲಸ ಮಾಡಲಿದೆ. ಯೋಗೇಶ್ವರ್ ಕೊನೆ ಕ್ಷಣದಲ್ಲಿ ಸೇರಿದ್ದರಿಂದ ಕಾಂಗ್ರೆಸ್ಗೆ ಹಿನ್ನಡೆಯಾಗಲಿದೆ. ನಮ್ಮ ಒಗ್ಗಟ್ಟಿನ ಶ್ರಮ ಕೈ ಹಿಡಿಯಲಿದೆ ಎಂದು ದೋಸ್ತಿ ನಾಯಕರು ಹೇಳುತ್ತಿದ್ದಾರೆ.
ಉಡುಪಿ: ಮನೆಯಲ್ಲಿದ್ದ ಚಿನ್ನ ವಜ್ರಾಭರಣ ಕಳವು ಪ್ರಕರಣ: ಹೋಮ್ ನರ್ಸ್ ಬಂಧನ – vishwanews24
