ಕರ್ನಾಟಕ ವಿಧಾನಸಭೆ ನೂತನ ಸ್ಪೀಕರ್​ ಆಗಿ ಜಿ.ಎಸ್. ಪಾಟೀಲ್ ಅವಿರೋಧ ಆಯ್ಕೆ – vishwanews24

Featured, ರಾಜ್ಯ ನ್ಯೂಸ್

ಕರ್ನಾಟಕ ವಿಧಾನಸಭೆ ಸ್ಪೀಕರ್​ ಆಗಿ ಜಿ.ಎಸ್. ಪಾಟೀಲ್ ಅವಿರೋಧ ಆಯ್ಕೆ

ಬೆಂಗಳೂರು: ಕರ್ನಾಟಕ ವಿಧಾನಸಭಾಧ್ಯಕ್ಷರಾಗಿ ಗುರುಪಾದಗೌಡ ಸಂಗನಗೌಡ ಪಾಟೀಲ (ಜಿ.ಎಸ್.ಪಾಟೀಲ್) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ವಿಧಾನಸಭಾ ಅಧಿವೇಶನದ 2ನೇ ದಿನವಾದ ಶುಕ್ರವಾರ ವಿಧಾನಸಭಾಧ್ಯಕ್ಷರ ಆಯ್ಕೆ ನಡೆಯಿತು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸ್ಪೀಕರ್ ಸ್ಥಾನಕ್ಕೆ ಜಿ.ಎಸ್.ಪಾಟೀಲರ ಹೆಸರನ್ನು ಸೂಚಿಸಿದರು. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅನುಮೋದಿಸಿದರು.

ಇದನ್ನೂ ಓದಿ :

ನಿರ್ಮಾಣ ಹಂತದಲ್ಲಿದ್ದ ಸುರಂಗದ ಒಳಗೆ ನುಗ್ಗಿದ ನೀರು : 7 ಕಾರ್ಮಿಕರ ದಾರುಣ ಸಾವು ; 14ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ – vishwanews24

ಸ್ಪೀಕರ್ ಸ್ಥಾನಕ್ಕೆ ಜಿ.ಎಸ್.ಪಾಟೀಲ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರು ಸರ್ವಾನುಮತದಿಂದ ಆಯ್ಕೆಯಾದರು.

ವಿಧಾನಸಭೆ ಸ್ಪೀಕರ್​ ಆಗಿ ಜಿ.ಎಸ್. ಪಾಟೀಲ್ ಅವಿರೋಧ ಆಯ್ಕೆ

ಹಂಗಾಮಿ ಸ್ಪೀಕರ್ ಟಿ.ಬಿ.ಜಯಚಂದ್ರ ಅವರ ಆದೇಶ ಅನುಸಾರ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಸ್ಪೀಕರ್ ಪೀಠದ ಬಳಿಗೆ ಜಿ.ಎಸ್.ಪಾಟೀಲ್ ಅವರನ್ನು ಕರೆತಂದರು. ಬಳಿಕ ಶುಭಾಶಯ ಕೋರಲಾಯಿತು.

ಮನೆ ತೆರಿಗೆ ಲಕ್ಷಾಂತರ ಹಣ ದುರುಪಯೋಗ: ಶಿವಪುರ ಗ್ರಾ.ಪಂ ಸಿಬ್ಬಂದಿ ವಜಾ – vishwanews24

Leave a Reply