ಕಾಂಗ್ರೆಸ್ ಜಾತಿ, ಧರ್ಮದ ಮೇಲೆ ರಾಜಕೀಯ ಮಾಡಲು ಬಯಸುವುದಿಲ್ಲ; ಸಂವಿಧಾನಕ್ಕೆ ಬದ್ಧವಾಗಿದೆ : ಸಿದ್ದರಾಮಯ್ಯ – Vishwanews24

Featured, ರಾಜ್ಯ ನ್ಯೂಸ್

ಎಷ್ಟು ದಿನ ಒಡೆದು ಆಳುವ ರಾಜಕಾರಣ ಮಾಡುತ್ತೀರಿ

ಒಡೆದು ಆಳುವ ಬಿಜೆಪಿ ರಾಜಕೀಯ ನಡೆಯುವುದಿಲ್ಲ

ಕರ್ನಾಟಕದಲ್ಲಿ ಬಿಜೆಪಿ ತಂತ್ರಗಳನ್ನು ಅರಿತುಕೊಳ್ಳುವಷ್ಟು ಮತದಾರರು ಪ್ರಬುದ್ಧತೆ ಹೊಂದಿದ್ದಾರೆ

ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿ ತಂತ್ರಗಳನ್ನು ಅರಿತುಕೊಳ್ಳುವಷ್ಟು ಮತದಾರರು ಪ್ರಬುದ್ಧತೆ ಹೊಂದಿರುವುದರಿಂದ ಹಿಂದೂಗಳನ್ನು ಕೋಮು ಧ್ರುವೀಕರಣಗೊಳಿಸಿ, ಒಡೆದು ಆಳುವ ಬಿಜೆಪಿ ರಾಜಕೀಯ ನಡೆಯುವುದಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

‘ಕರ್ನಾಟಕವು ಉತ್ತರ ಪ್ರದೇಶ, ಮಣಿಪುರ, ಉತ್ತರಾಖಂಡ ಅಥವಾ ಪಂಜಾಬ್ ಅಲ್ಲ. ಕರ್ನಾಟಕ ಎಂದರೇ ಕರ್ನಾಟಕ ಅಷ್ಟೆ. ಎಷ್ಟು ದಿನ ಒಡೆದು ಆಳುವ ರಾಜಕಾರಣ ಮಾಡುತ್ತೀರಿ.. ಧರ್ಮದ ರಾಜಕಾರಣ? ಜನರು ನಿಮ್ಮನ್ನು (ಬಿಜೆಪಿ) ಎಂದಿಗೂ ಕ್ಷಮಿಸುವುದಿಲ್ಲ ಎಂದು ಅವರು ಹೇಳಿದರು.

ಬೆಂಗಳೂರಿನಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮಾಜಿ ಸಚಿವ ಎಂ.ಬಿ.ಪಾಟೀಲ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು ‘ಇಲ್ಲಿ ಮನುವಾದ ಮತ್ತು ಮನುಷ್ಯತ್ವ (ಮಾನವೀಯತೆ) ನಡುವೆ ಸಂಘರ್ಷವಿದೆ. ಜಾತಿ, ಧರ್ಮದ ಮೇಲೆ ರಾಜಕೀಯ ಮಾಡಲು ಕಾಂಗ್ರೆಸ್ ಬಯಸುವುದಿಲ್ಲ. ನಾವು ಮಾನವೀಯತೆಗೆ ಬದ್ಧರಾಗಿದ್ದೇವೆ ಎಂದು ಅವರು ಹೇಳಿದರು.

ಮಾ.31ರಂದು ರಾಜ್ಯಕ್ಕೆ ರಾಹುಲ್ ಗಾಂಧಿ ಭೇಟಿ – Vishwanews24

 

Leave a Reply