Featured

ಸುಪ್ರೀಂ ಕೋರ್ಟ್‌ಗೆ ಮುತ್ತಿಗೆ ಹಾಕುವ ದುಷ್ಟತನಕ್ಕೆ ರಾಹುಲ್ ಗಾಂಧಿ ಪ್ರಚೋದನೆ: ಕೆ.ಎಸ್. ನವೀನ್ ವಾಗ್ದಾಳಿ – vishwanews24

ಸುಪ್ರೀಂ ಕೋರ್ಟ್‌ಗೆ ಮುತ್ತಿಗೆ ಹಾಕುವ ದುಷ್ಟತನಕ್ಕೆ ರಾಹುಲ್ ಗಾಂಧಿ ಪ್ರಚೋದನೆ: ಕೆ.ಎಸ್. ನವೀನ್ ವಾಗ್ದಾಳಿ

ಉಡುಪಿ: ಸಂವಿಧಾನವನ್ನು ಎತ್ತಿಹಿಡಿಯುವ ಸುಪ್ರೀಂ ಕೋರ್ಟ್‌ಗೆ ಮುತ್ತಿಗೆ ಹಾಕುವ ದುಷ್ಟತನಕ್ಕೆ ರಾಹುಲ್ ಗಾಂಧಿ ಪ್ರಚೋದನೆ ನೀಡುತ್ತಿದ್ದಾರೆ. ದೇಶದ ಇತಿಹಾಸದಲ್ಲಿ ಸುಪ್ರೀಂ ಕೋರ್ಟ್‌ಗೆ ಮುತ್ತಿಗೆ ಹಾಕುವ ಪ್ರಯತ್ನ ನಡೆದಿರಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ರಾಜ್ಯ ವಕ್ತಾರ ಕೆ.ಎಸ್. ನವೀನ್ ವಾಗ್ದಾಳಿ ನಡೆಸಿದರು.

ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಸಮರ್ಪಕವಾಗಿ ನಡೆದಿದೆ ಎಂದು ಕಾಂಗ್ರೆಸ್ ಸರ್ಕಾರದ ಸಚಿವರೇ ಒಪ್ಪಿಕೊಂಡಿದ್ದಾರೆ. ಆದರೂ ರಾಹುಲ್ ಗಾಂಧಿ ಯಾವುದೇ ದಾಖಲೆಗಳಿಲ್ಲದೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಎಸ್‌ಐಆರ್ ಪ್ರಕ್ರಿಯೆಯ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಚುನಾವಣಾ ಆಯೋಗದ ಘನತೆ ಹಾಗೂ ಗೌರವಕ್ಕೆ ಧಕ್ಕೆ ತರುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ದೂರಿದರು.

ರಾಹುಲ್ ಗಾಂಧಿ ಬೆಂಬಲದೊಂದಿಗೆ ಪ್ರತಿಭಟನೆ ನಡೆಸುತ್ತಿರುವ ಕೆಲವು ವಿದ್ಯಾರ್ಥಿ ಸಂಘಟನೆಗಳ ನಾಯಕರು ನೇಪಾಳ, ಬಾಂಗ್ಲಾದೇಶ ಹಾಗೂ ಯುರೋಪ್‌ನಲ್ಲಿ ನಡೆದ ದಂಗೆಗಳ ಮಾದರಿಯಲ್ಲಿ ಭಾರತದಲ್ಲಿಯೂ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ. ವಿದ್ಯಾರ್ಥಿಗಳು ಹಾಗೂ ಯುವಜನರನ್ನು ದಾರಿ ತಪ್ಪಿಸುವ ಕೆಲಸವನ್ನು ರಾಹುಲ್ ಗಾಂಧಿ ನಿರಂತರವಾಗಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ದೇಶದ ಪರಿಸ್ಥಿತಿ ಹೇಗಿತ್ತು ಎಂಬ ಅರಿವು ಇಂದಿನ ಯುವಜನರಿಗೆ ಇಲ್ಲ. ಮುಗ್ಧ ಯುವಕರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ತಪ್ಪು ಮಾಹಿತಿ ನೀಡಿ, ಅವರನ್ನು ದೇಶದ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ನಡೆಯುತ್ತಿದೆ. ವಿದ್ಯಾರ್ಥಿ ಸಮುದಾಯವನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿರುವುದು ಖಂಡನೀಯ ಎಂದು ಕೆ.ಎಸ್. ನವೀನ್ ವಾಗ್ದಾಳಿ ನಡೆಸಿದರು.

Vishwa News 24

Recent Posts

ಮಂಗಳೂರು: ಕಂಬಳದಲ್ಲಿ ಗೆದ್ದ ಚಿನ್ನದ ಪದಕ ಅನಾರೋಗ್ಯಪೀಡಿತ ಮಾಜಿ ಕಾರ್ಮಿಕನಿಗೆ ಉಡುಗೊರೆ: ಪದವು ಕಾನಡ್ಕ ತಂಡದ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ – vishwanews24

ಮಂಗಳೂರು: ಕಂಬಳದಲ್ಲಿ ಗೆದ್ದ ಚಿನ್ನದ ಪದಕ ಅನಾರೋಗ್ಯಪೀಡಿತ ಮಾಜಿ ಕಾರ್ಮಿಕನಿಗೆ ಉಡುಗೊರೆ: ಪದವು ಕಾನಡ್ಕ ತಂಡದ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ…

13 minutes ago

ಪೋಕ್ಸೊ ಪ್ರಕರಣ: ಮಂಗಳೂರಿನ ಚರ್ಚ್ ಫಾದರ್ ಸಿಪ್ರಿಯನ್ ಪಿಂಟೊಗೆ ಷರತ್ತುಬದ್ಧ ಜಾಮೀನು ಮಂಜೂರು – vishwanews24

ಪೋಕ್ಸೊ ಪ್ರಕರಣ: ಮಂಗಳೂರಿನ ಚರ್ಚ್ ಫಾದರ್ ಸಿಪ್ರಿಯನ್ ಪಿಂಟೊಗೆ ಷರತ್ತುಬದ್ಧ ಜಾಮೀನು ಮಂಜೂರು ಮಂಗಳೂರು: ನಗರದ ವೆಲೆನ್ಸಿಯಾದ ಸೇಂಟ್ ವಿನ್ಸೆಂಟ್…

36 minutes ago

ಗೋಹತ್ಯೆ ಪ್ರಕರಣದಲ್ಲಿ ಮಹತ್ವದ ತೀರ್ಪು : ಗುಜರಾತ್‌ನಲ್ಲಿ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ – vishwanews24

ಗೋಹತ್ಯೆ ಪ್ರಕರಣದಲ್ಲಿ ಮಹತ್ವದ ತೀರ್ಪು : ಗುಜರಾತ್‌ನಲ್ಲಿ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ ಗಾಂಧಿನಗರ: ಗೋಹತ್ಯೆ ಪ್ರಕರಣದಲ್ಲಿ ಮೂವರು…

49 minutes ago

ಕಾಂಗ್ರೆಸ್ ಬ್ಯಾಂಕ್‌ ಗಳನ್ನು ನಿರ್ಮಿಸಿತು, ಬಿಜೆಪಿ ಅವುಗಳನ್ನು ಮಾರಾಟ ಮಾಡುತ್ತಿದೆ : ರಾಹುಲ್ ಗಾಂಧಿ ವಾಗ್ದಾಳಿ – vishwanews24

ಕಾಂಗ್ರೆಸ್ ಬ್ಯಾಂಕ್‌ ಗಳನ್ನು ನಿರ್ಮಿಸಿತು, ಬಿಜೆಪಿ ಅವುಗಳನ್ನು ಮಾರಾಟ ಮಾಡುತ್ತಿದೆ : : IDBI ಬ್ಯಾಂಕ್ ಖಾಸಗೀಕರಣದ ವಿರುದ್ಧ ರಾಹುಲ್…

2 hours ago

ಉಡುಪಿ ಜಿಲ್ಲಾ ಆಸ್ಪತ್ರೆ ಲೋಕಾರ್ಪಣೆಗೆ ಶಾಸಕ ಯಶ್ಪಾಲ್ ಸುವರ್ಣ ಒತ್ತಾಯ: ನ. 15ರೊಳಗೆ ಆರೋಗ್ಯ ಸಚಿವರಿಂದ ಪರಿಶೀಲನೆಗೆ ಆಗ್ರಹ – vishwanews24

ನ. 15ರೊಳಗೆ ಉಡುಪಿ ಜಿಲ್ಲಾಸ್ಪತ್ರೆ ಲೋಕಾರ್ಪಣೆ ದಿನಾಂಕ ಘೋಷಿಸಿ: ಆರೋಗ್ಯ ಸಚಿವರಿಗೆ ಯಶ್ಪಾಲ್ ಸುವರ್ಣ ಒತ್ತಾಯ ಉಡುಪಿ: ಉಡುಪಿ ಜಿಲ್ಲೆಯ…

2 hours ago

ಸೌಜನ್ಯಾ ಪ್ರಕರಣ ತನಿಖೆ: ಎಸ್‌ಐಟಿ ಮುಖ್ಯಸ್ಥರ ಬದಲಾವಣೆ ; ಶಶಿಕುಮಾರ್ ಬದಲಿಗೆ ಚೇತನ್ ಸಿಂಗ್ ರಾಥೋಡ್ ನೇಮಕ – vishwanews24

ಸೌಜನ್ಯ ಪ್ರಕರಣ: ಶಶಿಕುಮಾರ್ ಬದಲಿಗೆ ಚೇತನ್ ಸಿಂಗ್ ರಾಥೋಡ್ ಅವರನ್ನು ಎಸ್‌ಐಟಿ ಮುಖ್ಯಸ್ಥರಾಗಿ ನೇಮಕ ಮಂಗಳೂರು : ಸೌಜನ್ಯ ಅತ್ಯಾಚಾರ…

2 hours ago