ಮಂಗಳೂರು: ಕಂಬಳದಲ್ಲಿ ಚಿನ್ನದ ಪದಕ ಗೆಲ್ಲುವುದು ಕೋಣಗಳ ಮಾಲೀಕರಿಗೆ ಹೆಮ್ಮೆಯ ಸಂಗತಿ. ಆದರೆ, ಗೆದ್ದ ಪದಕವನ್ನು ತಮ್ಮ ತಂಡದಲ್ಲಿ ಹಲವು ವರ್ಷಗಳ ಕಾಲ ದುಡಿದ ಅನಾರೋಗ್ಯಪೀಡಿತ ಮಾಜಿ ಕಾರ್ಮಿಕನಿಗೆ ಉಡುಗೊರೆಯಾಗಿ ನೀಡುವ ಮೂಲಕ ಮಂಗಳೂರಿನ ಶಕ್ತಿನಗರದ ಪದವು ಕಾನಡ್ಕ ತಂಡ ಮಾನವೀಯತೆ ಮೆರೆದಿದೆ. ಟ್ರೋಫಿಗಿಂತ ಮನುಷ್ಯತ್ವವೇ ದೊಡ್ಡದು ಎಂಬ ಸಂದೇಶ ಸಾರಿದ ತಂಡದ ಈ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಕಂಬಳದಲ್ಲಿ ಫ್ಲೇವಿ ಡಿಸೋಜಾ ಅವರ ಪದವು ಕಾನಡ್ಕ ತಂಡದ ಕೋಣಗಳು ‘ಹಗ್ಗ ಕಿರಿಯ’ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದವು. ಈ ಸಾಧನೆಗೆ ಲಭಿಸಿದ ಚಿನ್ನದ ಪದಕವನ್ನು ಬಂಟ್ವಾಳ ತಾಲೂಕಿನ ಕೊಳತ್ತಮಜಲಿನ ನಿವಾಸಿ ವೀರಪ್ಪ ಅವರಿಗೆ ತಂಡ ಉಡುಗೊರೆಯಾಗಿ ನೀಡಿದೆ.
ವೀರಪ್ಪ ಅವರು ಹಲವು ವರ್ಷಗಳಿಂದ ತಂಡದ ಕೋಣಗಳ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದರು. ಕಳೆದ ವರ್ಷದವರೆಗೂ ತಂಡದೊಂದಿಗೆ ಕೆಲಸ ಮಾಡುತ್ತಿದ್ದ ಅವರು, ಅನಾರೋಗ್ಯದ ಕಾರಣ ಕಂಬಳ ಚಟುವಟಿಕೆಗಳಿಂದ ದೂರ ಉಳಿಯಬೇಕಾಯಿತು. ತಮ್ಮ ತಂಡದ ಏಳಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ವೀರಪ್ಪ ಅವರ ಸೇವೆಯನ್ನು ಸ್ಮರಿಸಿದ ತಂಡ, ಗೆಲುವಿನ ಸಂಭ್ರಮವನ್ನು ಅವರೊಂದಿಗೆ ಹಂಚಿಕೊಳ್ಳಲು ನಿರ್ಧರಿಸಿದೆ.
ಮೈಸೂರಿನ ಕಂಬಳದಲ್ಲಿ ಗೆದ್ದ ಚಿನ್ನದ ಪದಕ ಸುಮಾರು 16 ಗ್ರಾಂ ತೂಕ ಹೊಂದಿದ್ದು, ಪ್ರಸ್ತುತ ಅಂದಾಜು ಮೌಲ್ಯ 2.30 ಲಕ್ಷ ರೂಪಾಯಿ ಎಂದು ತಿಳಿದುಬಂದಿದೆ. ಇಷ್ಟು ಮೌಲ್ಯದ ಪದಕವನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವ ಬದಲು, ಹಲವು ವರ್ಷಗಳ ಕಾಲ ತಂಡಕ್ಕಾಗಿ ದುಡಿದ ವ್ಯಕ್ತಿಗೆ ನೀಡುವ ಮೂಲಕ ಫ್ಲೇವಿ ಡಿಸೋಜಾ ಹಾಗೂ ತಂಡ ಕೃತಜ್ಞತೆ ಮೆರೆದಿದೆ.
ಪದವು ಕಾನಡ್ಕ ತಂಡಕ್ಕೆ ಇಂತಹ ಮಾನವೀಯ ನಡೆ ಹೊಸದೇನಲ್ಲ. 2024ರಲ್ಲಿ ಬಂಟ್ವಾಳ ತಾಲೂಕಿನ ನಾವೂರು ಕಂಬಳದಲ್ಲಿ ತಂಡದ ಪ್ರಸಿದ್ಧ ಕೋಣಗಳ ಜೋಡಿ ಪ್ರಥಮ ಬಹುಮಾನ ಗಳಿಸಿತ್ತು. ಆಗ ಲಭಿಸಿದ್ದ ಚಿನ್ನದ ಪದಕವನ್ನು ಕಂಬಳದ ಓಟದ ವೇಳೆ ಬಿದ್ದು ಕಾಲು ಮುರಿತಕ್ಕೊಳಗಾಗಿದ್ದ ನಾವೂರಿನ ಸಾವ್ಯ ಗಂಗಾಧರ ಪೂಜಾರಿ ಅವರಿಗೆ ತಂಡ ಉಡುಗೊರೆಯಾಗಿ ನೀಡಿತ್ತು.
ಇದೀಗ ಮತ್ತೊಮ್ಮೆ ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಕಾರ್ಮಿಕನಿಗೆ ಗೆದ್ದ ಚಿನ್ನದ ಪದಕವನ್ನು ಅರ್ಪಿಸುವ ಮೂಲಕ ತನ್ನ ಮಾನವೀಯ ಸಂಪ್ರದಾಯವನ್ನು ಮುಂದುವರಿಸಿದೆ. ಕಂಬಳದ ಯಶಸ್ಸು ಕೇವಲ ಕೋಣಗಳ ಮಾಲೀಕರದ್ದಾಗಲಿ, ಕೋಣಗಳದ್ದಾಗಲಿ ಅಲ್ಲ; ತೆರೆಮರೆಯಲ್ಲಿ ದುಡಿಯುವ ಪ್ರತಿಯೊಬ್ಬರ ಶ್ರಮವೂ ಅದರಲ್ಲಿ ಅಡಗಿದೆ ಎಂಬುದನ್ನು ಪದವು ಕಾನಡ್ಕ ತಂಡದ ಈ ನಡೆ ಸಾರಿದೆ. ಗೆಲುವಿನ ಪದಕಕ್ಕಿಂತ ಅದನ್ನು ಹಂಚಿಕೊಳ್ಳುವ ಹೃದಯವಂತಿಕೆಯೇ ದೊಡ್ಡದು ಎಂಬುದಕ್ಕೆ ಈ ತಂಡ ಮಾದರಿಯಾಗಿದೆ.
ಪೋಕ್ಸೊ ಪ್ರಕರಣ: ಮಂಗಳೂರಿನ ಚರ್ಚ್ ಫಾದರ್ ಸಿಪ್ರಿಯನ್ ಪಿಂಟೊಗೆ ಷರತ್ತುಬದ್ಧ ಜಾಮೀನು ಮಂಜೂರು ಮಂಗಳೂರು: ನಗರದ ವೆಲೆನ್ಸಿಯಾದ ಸೇಂಟ್ ವಿನ್ಸೆಂಟ್…
ಸುಪ್ರೀಂ ಕೋರ್ಟ್‌ಗೆ ಮುತ್ತಿಗೆ ಹಾಕುವ ದುಷ್ಟತನಕ್ಕೆ ರಾಹುಲ್ ಗಾಂಧಿ ಪ್ರಚೋದನೆ: ಕೆ.ಎಸ್. ನವೀನ್ ವಾಗ್ದಾಳಿ ಉಡುಪಿ: ಸಂವಿಧಾನವನ್ನು ಎತ್ತಿಹಿಡಿಯುವ ಸುಪ್ರೀಂ ಕೋರ್ಟ್‌ಗೆ…
ಗೋಹತ್ಯೆ ಪ್ರಕರಣದಲ್ಲಿ ಮಹತ್ವದ ತೀರ್ಪು : ಗುಜರಾತ್‌ನಲ್ಲಿ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ ಗಾಂಧಿನಗರ: ಗೋಹತ್ಯೆ ಪ್ರಕರಣದಲ್ಲಿ ಮೂವರು…
ಕಾಂಗ್ರೆಸ್ ಬ್ಯಾಂಕ್ ಗಳನ್ನು ನಿರ್ಮಿಸಿತು, ಬಿಜೆಪಿ ಅವುಗಳನ್ನು ಮಾರಾಟ ಮಾಡುತ್ತಿದೆ : : IDBI ಬ್ಯಾಂಕ್ ಖಾಸಗೀಕರಣದ ವಿರುದ್ಧ ರಾಹುಲ್…
ನ. 15ರೊಳಗೆ ಉಡುಪಿ ಜಿಲ್ಲಾಸ್ಪತ್ರೆ ಲೋಕಾರ್ಪಣೆ ದಿನಾಂಕ ಘೋಷಿಸಿ: ಆರೋಗ್ಯ ಸಚಿವರಿಗೆ ಯಶ್ಪಾಲ್ ಸುವರ್ಣ ಒತ್ತಾಯ ಉಡುಪಿ: ಉಡುಪಿ ಜಿಲ್ಲೆಯ…
ಸೌಜನ್ಯ ಪ್ರಕರಣ: ಶಶಿಕುಮಾರ್ ಬದಲಿಗೆ ಚೇತನ್ ಸಿಂಗ್ ರಾಥೋಡ್ ಅವರನ್ನು ಎಸ್‌ಐಟಿ ಮುಖ್ಯಸ್ಥರಾಗಿ ನೇಮಕ ಮಂಗಳೂರು : ಸೌಜನ್ಯ ಅತ್ಯಾಚಾರ…