Featured

ಕಾಂಗ್ರೆಸ್ ಸರಕಾರ ಮಾಡಿದ್ದು “ಗರೀಬಿ ಹಠಾವೋ” ಆದರೆ, ಬಿಜೆಪಿ ಮಾಡುತ್ತಿರುವುದು “ಗರೀಬೋಂಕೊ ಹಠಾವೋ” : ಯು.ಟಿ. ಖಾದರ್ -Vishwanews24

ಕಾಂಗ್ರೆಸ್ ಸರಕಾರ ಮಾಡಿದ್ದು “ಗರೀಬಿ ಹಠಾವೋ” ಆದರೆ, ಬಿಜೆಪಿ ಮಾಡುತ್ತಿರುವುದು “ಗರೀಬೋಂಕೊ ಹಠಾವೋ” : ಯು.ಟಿ. ಖಾದರ್ -Vishwanews24

ಮಂಗಳೂರು: ಆಹಾರ ಸಚಿವ ಉಮೇಶ್ ಕತ್ತಿ ಅವರು ಬಿಪಿಎಲ್ ಕಾರ್ಡ್ ರದ್ದತಿ ಬಗ್ಗೆ ನೀಡಿದ ಹೇಳಿಕೆಗೆ ಮಾಜಿ ಆಹಾರ ಸಚಿವ ಯು.ಟಿ. ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯು.ಟಿ.ಖಾದರ್, ಟಿವಿ-ಫ್ರಿಡ್ಜ್, ಬೈಕ್ ಇದ್ದರೆ ಕಾರ್ಡ್ ರದ್ದು ಮಾಡುವುದಾಗಿ ಹೇಳುತ್ತಿದ್ದಾರೆ. ಆ ಪಟ್ಟಿಯಲ್ಲಿ ಮೊಬೈಲ್ ಸೇರಿಸಿದ್ರೆ ಎಲ್ಲ BPL ಕಾರ್ಡ್ ರದ್ದು ಆಗುತ್ತಿತ್ತು. ಮೊಬೈಲ್ ಇಲ್ಲದ ಮನೆಗಳು ಹೇಗೆ ಇಲ್ಲವೋ, ಹಾಗೆಯೇ ಟಿವಿ, ಫ್ರಿಡ್ಜ್, ಬೈಕ್ ಇಲ್ಲದ ಮನೆಗಳಿಲ್ಲ ಎಂದರು.

ಪರಿಸರ ಹೋರಾಟಗಾರ್ತಿ ದಿಶಾ ರವಿ ಬಂಧನ ಮಹಿಳೆಯರ ಮೇಲಿನ ದೌರ್ಜನ್ಯ : ಸಿದ್ದರಾಮಯ್ಯ -Vishwanews24

ಈ ಸರಕಾರಕ್ಕೆ ಜನಸಾಮಾನ್ಯರ ನಾಡಿಮಿಡಿತ ಇನ್ನೂ ಗೊತ್ತಾಗಿಲ್ಲ. ಮೊದಲು ರೇಷನ್ ಕಾರ್ಡ್ ಜನರಿಗೆ ತಲುಪಿಸುವ ಕೆಲಸ ಮಾಡಲಿ ಎಂದು ಹೇಳಿದ ಅವರು, ಈ ಹಿಂದೆಯೂ ಬಿಜೆಪಿ ಸರಕಾರವಿದ್ದಾಗ 15 ಮಾನದಂಡಗಳಿದ್ದವು. ಬಿಜೆಪಿ ಸರಕಾರದ ಅವಧಿಯಲ್ಲಿ 500 ರೂ. ಕರೆಂಟ್ ಬಿಲ್ ಬಂದ್ರೂ ಬಿಪಿಎಲ್ ರದ್ದು ಆಗುತ್ತಿದ್ದವು. ಆದ್ರೆ, ಕಾಂಗ್ರೆಸ್ ಕೇವಲ ಮೂರು ಮಾನದಂಡಗಳನ್ನಷ್ಟೇ ನಿರ್ಧರಿಸಿತ್ತು. ಖುದ್ದು ನಾನೇ ಆಹಾರ ಸಚಿವನಾಗಿದ್ದಾಗ ಈ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿತ್ತು ಎಂದರು.

ಇನ್ನು, ಬಿಜೆಪಿ ಸರಕಾರ ಇದಕ್ಕಿಂತ ಉತ್ತಮ ಯೋಜನೆ ನೀಡುವ ಕೆಲಸ ಮಾಡಲಿ. ತಪ್ಪನ್ನು ಸರಿಪಡಿಸುವ ಬದಲು ಬಿಜೆಪಿ ಸರಕಾರ ಮತ್ತೆ ಮತ್ತೆ ತಪ್ಪು ಮಾಡುತ್ತಿದೆ. ರಾಜ್ಯ, ಕೇಂದ್ರ ಸರಕಾರ ಸೇರಿ ಬಡವರ ಯೋಜನೆಯನ್ನು ನಾಶ ಮಾಡಲು ಮುಂದಾಗಿದೆ. ಕಾಂಗ್ರೆಸ್ ಸರಕಾರ ಮಾಡಿದ್ದು “ಗರೀಬಿ ಹಠಾವೋ”. ಆದರೆ, ಬಿಜೆಪಿ ಮಾಡುತ್ತಿರುವುದು “ಗರೀಬೋಂಕೊ ಹಠಾವೋ”. ಸರಕಾರದ ಈ ಕೆಟ್ಟ ನಿರ್ಧಾರದ ಬಗ್ಗೆ ನಾನು ಸಚಿವರ ಜೊತೆ ಮಾತನಾಡುತ್ತೇನೆ. ಈ ನಿರ್ಧಾರದಿಂದ ಸರಕಾರ ಹಿಂದೆ ಸರಿಯದಿದ್ದರೆ ಸರಕಾರ ಉಳಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ಕೃಷಿ ಇಲಾಖೆಗೆ ನೂತನ ರಾಯಭಾರಿಯಾಗಿ ನಟ ದರ್ಶನ್‌ ಆಯ್ಕೆ -Vishwanews24

Vishwa News 24

Recent Posts

ಕಾರ್ಕಳ: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ – vishwanews24

ಕಾರ್ಕಳ:   ಎಣ್ಣೆಹೊಳೆ ಸೇತುವೆಯ ಕೆಳಭಾಗದ ನದಿಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ ಕಾರ್ಕಳ: ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆಹೊಳೆ…

2 hours ago

ಕಾರ್ಕಳ:  ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ – vishwanews24

ಕಾರ್ಕಳ:  ನಾಪತ್ತೆಯಾಗಿದ್ದ ಎಣ್ಣೆಹೊಳೆ ಸೇತುವೆಯ ಕೆಳಭಾಗದ ನದಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ ಕಾರ್ಕಳ: ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆಹೊಳೆ…

2 hours ago

ಕಿರುಕುಳ ಆರೋಪ : ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ – vishwanews24

ಕಿರುಕುಳ ಆರೋಪ : ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಬಳ್ಳಾರಿ: ಗಂಡನ ಕಿರುಕುಳ ತಾಳಲಾರದೆ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು…

2 hours ago

ಮಂಗಳೂರಿನಿಂದ ಅಗತ್ತಿ ದ್ವೀಪಕ್ಕೆ ವಿಮಾನಯಾನ ಸೇವೆ : ನೂತನ ಚಳಿಗಾಲದ ವೇಳಾಪಟ್ಟಿ ಪ್ರಕಟ – vishwanews24

ಮಂಗಳೂರಿನಿಂದ ಅಗತ್ತಿ ದ್ವೀಪಕ್ಕೆ ವಿಮಾನಯಾನ ಸೇವೆ ;ನೂತನ 'ಚಳಿಗಾಲದ ವೇಳಾಪಟ್ಟಿ ಪ್ರಕಟ ಮಂಗಳೂರು : ಕರಾವಳಿಯ ಪ್ರಯಾಣಿಕರಿಗೆ ದೇಶೀಯ ಹಾಗೂ…

3 hours ago

ಕಾಂಗ್ರೆಸ್ ಸೇರ್ಪಡೆ ಕುರಿತು ಅಂತಿಮ ನಿರ್ಧಾರ ಕೈಗೊಂಡಿಲ್ಲ : ರಘುಪತಿ ಭಟ್ – vishwanews24

ಕಾಂಗ್ರೆಸ್‌ನಿಂದ ಆಹ್ವಾನ ಬಂದಿರುವುದು ನಿಜ  .. ಪಕ್ಷ ಬದಲಾವಣೆಯಂತಹ ನಿರ್ಧಾರವನ್ನು ಏಕಾಏಕಿ ತೆಗೆದುಕೊಳ್ಳಲು ಸಾಧ್ಯವಿಲ್ಲ .. 2028ರ ವಿಧಾನಸಭಾ ಚುನಾವಣೆಯಲ್ಲಿ…

7 hours ago

ಉಡುಪಿ: ಕಾಮಗಾರಿ ಹಿನ್ನೆಲೆ ; ಸಂಚಾರಕ್ಕೆ ಬದಲಿ ಮಾರ್ಗ – vishwanews24

ಉಡುಪಿ:  ಕಾಮಗಾರಿ ಹಿನ್ನೆಲೆ ಸಂಚಾರಕ್ಕೆ ಬದಲಿ ಮಾರ್ಗ    ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ತೆಂಕಪೇಟೆ ವಾರ್ಡಿನ ಬಡಗುಪೇಟೆ ರಸ್ತೆಯಲ್ಲಿ ಒಳಚರಂಡಿ…

7 hours ago