ರಾಜ್ಯ ಕೃಷಿ ಇಲಾಖೆಗೆ ನೂತನ ರಾಯಭಾರಿಯಾಗಿ ನಟ ದರ್ಶನ್ ಆಯ್ಕೆ -Vishwanews24
ರಾಜ್ಯ ಕೃಷಿ ಇಲಾಖೆಗೆ ನೂತನ ರಾಯಭಾರಿಯಾಗಿ ನಟ ದರ್ಶನ್ ಆಯ್ಕೆ -Vishwanews24
ಈ ಕೆಲಸಕ್ಕೆ ಯಾವುದೇ ಸಂಭಾವನೆ ಪಡೆಯದೆ ಇರಲು ನಟ ದರ್ಶನ್ ನಿರ್ಧಾರ..
ಬೆಂಗಳೂರು: ಕೃಷಿ ಇಲಾಖೆಯ ನೂತನ ರಾಯಭಾರಿಯಾಗಿ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಲಾಗಿದೆ.
actor Darshan appointment as brand ambassador for Karnataka Agriculture department. Official order issued@dasadarshan @DBoss_Hudugaru_ @DBossOfficialFC @DBossTrends pic.twitter.com/Srs7d0C5Iy
— Avinash S (@Avinashsampoli) February 15, 2021
ಈ ಕುರಿತು ಅಧಿಕೃತ ಪ್ರಕಟಣೆಯನ್ನು ಹೊರಡಿಸಲಾಗಿದ್ದು, ‘ಕೃಷಿ ಇಲಾಖೆಯು ರೈತರ ಹಿತಕ್ಕಾಗಿ ಕೈಗೊಂಡಿರುವ ಕಾರ್ಯಕ್ರಮಗಳನ್ನು ಪ್ರಚುರಪಡಿಸಲು ಹಾಗೂ ಕೃಷಿಕರಲ್ಲಿ ಸ್ಪೂರ್ತಿ ತುಂಬಲು ಕನ್ನಡ ಚಲನಚಿತ್ರರಂಗದ ಖ್ಯಾತ ನಟರಾದ ಶ್ರೀ ದರ್ಶನ್ ಅವರನ್ನು ಕೃಷಿ ಇಲಾಖೆಯ ರಾಯಭಾರಿಯಾಗಿ ನೇಮಿಸಬಹುದಾಗಿದೆಯೆಂದು ಹಾಗೂ ಸದರಿ ಅವರು ಯಾವುದೇ ಸಂಭಾವನೆ ಇಲ್ಲದೆ ಈ ಕೆಲಸವನ್ನು ನಿರ್ವಹಿಸುವುದಾಗಿ ಒಪ್ಪಿಕೊಂಡಿರುತ್ತಾರೆ. ಈ ಹಿನ್ನೆಲೆಯಲ್ಲಿ ನಟ ದರ್ಶನ್ ಅವರನ್ನು ಕೃಷಿ ಇಲಾಖೆಯ ರಾಯಭಾರಿಯನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕರ್ನಾಟಕದಲ್ಲಿರುವುದು ಬಿ.ಎಸ್. ಯಡಿಯೂರಪ್ಪನವರ ಕುಟುಂಬದ ಸರ್ಕಾರ : ಹೆಚ್.ಡಿ. ಕುಮಾರಸ್ವಾಮಿ -Vishwanews24
ಈ ಹಿಂದೆ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು ನಟ ದರ್ಶನ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದರು. ಈ ವೇಳೆ ನಟ ದರ್ಶನ್ ಜೊತೆ ಕೃಷಿ ಇಲಾಖೆಯ ರಾಯಭಾರಿ ವಿಚಾರದ ಕುರಿತು ಚರ್ಚಿಸಲು ಅವರನ್ನು ಒಪ್ಪಿಸಲು ಯಶಸ್ವಿಯಾಗಿದ್ದರು. ಅದರಂತೆ ನಟ ದರ್ಶನ್ ಈ ಕೆಲಸಕ್ಕ ಯಾವುದೇ ಸಂಭಾವನೆ ಪಡೆಯದಿರಲು ನಿರ್ಧರಿಸಿದ್ದರು. ಈ ಹಿನ್ನೆಲೆ ಇದೀಗ ದರ್ಶನ್ ಅವರನ್ನು ರಾಜ್ಯ ಕೃಷಿ ಇಲಾಖೆಗೆ ನೂತನ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ.
ಬ್ರಹ್ಮಾವರ : ಮಹಿಳೆಯ ಅನೈತಿಕ ಸಂಬಂಧದ ಬಗ್ಗೆ ಪ್ರಶ್ನಿಸಿದ್ದ ವ್ಯಕ್ತಿಯ ಹತ್ಯೆ ; ಓರ್ವನ ಬಂಧನ -Vishwanews24
