ಕಾಂತಾರ ಎಫೆಕ್ಟ್ | ನೇಮೋತ್ಸವದಲ್ಲಿ ಸುರತ್ಕಲ್‌ ಎನ್‌ಐಟಿಕೆ ಯ ನೂರಾರು ವಿದ್ಯಾರ್ಥಿಗಳು ಭಾಗಿ – Vishwanews24

Featured, ದಕ್ಷಿಣ ಕನ್ನಡ

ಕಾಂತಾರ ಎಫೆಕ್ಟ್ | ನೇಮೋತ್ಸವದಲ್ಲಿ ಸುರತ್ಕಲ್‌ ಎನ್‌ಐಟಿಕೆ ಯ ನೂರಾರು ವಿದ್ಯಾರ್ಥಿಗಳು ಭಾಗಿ

ಸುರತ್ಕಲ್‌: ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವದ ಅಂಗವಾಗಿ ಬುಧವಾರ ನಡೆದ ನೇಮದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗಿಯಾಗಿ ಮಂತ್ರಮುಗ್ಧರಾದರು.

ಇಲ್ಲಿನ ದೇವಸ್ಥಾನದಲ್ಲಿರುವ ದೈವಗಳ ದೇವರು ಭೇಟಿ ಕಾರ್ಯ ಕ್ರಮ ಜಾತ್ರೆ ಸಂದರ್ಭ ನಡೆಯುತ್ತದೆ.

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಯುವಕನ ಶವ ಪತ್ತೆ  – Vishwanews24

ಸಮೀಪದಲ್ಲೇ ಇರುವ ಎನ್‌ಐಟಿಕೆ ತಾಂತ್ರಿಕ ವಿದ್ಯಾಲಯಕ್ಕೆ ರಾಜ್ಯ, ದೇಶ, ಅಂತಾರಾಷ್ಟ್ರೀಯ ಮಟ್ಟದ ವಿದ್ಯಾರ್ಥಿಗಳು ಕಲಿಕೆಗಾಗಿ ಆಯ್ಕೆಯಾಗಿ ಬರುತ್ತಾರೆ. ಸಮೀಪದ ಬೀಚ್‌ ನಲ್ಲಿ ಒಂದಿಷ್ಟು ತಿರುಗಿ ಹೋಗುವವರೇ ಅಧಿಕ. ಆದರೆ ಈ ಬಾರಿ ಆಸ್ಕರ್‌ಗೆ ಆಯ್ಕೆಯಾಗಿ ಗಮನ ಸೆಳೆದ ಕಾಂತಾರ ಸಿನೆಮಾ ವೈರಲ್‌ ಸುದ್ದಿ, ಗುಳಿಗ, ಕೊರಗಜ್ಜ ದೈವಗಳ ಮಹಿಮೆಯ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ವೈರಲ್‌ ಆಗುತ್ತಿರುವಂತೆಯೇ ಎನ್‌ಐಟಿಕೆ ವಿದ್ಯಾರ್ಥಿಗಳು ಸಾಲುಗಟ್ಟಿ ಇಲ್ಲಿನ ಕ್ಷೇತ್ರದ ನೇಮಕ್ಕೆ ಆಗಮಿಸಿ ವೀಕ್ಷಿಸಿ ಒಂದಿಷ್ಟು ಫೋಟೋ, ವೀಡಿಯೋ ಮಾಡಿಕೊಂಡರು.

ಉಡುಪಿ : ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ: ಕುಮ್ಕಿ ಜಮೀನಿನಲ್ಲಿ ಕೃಷಿ ಮಾಡಲು 30 ವರ್ಷ ಗುತ್ತಿಗೆ ನೀಡಲು ನಿರ್ಧಾರ – Vishwanews24

 

Leave a Reply