ಕಾಪುವಿನಲ್ಲಿ ಸಿಸಿಬಿ ಸರ್ಕಲ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಅವರಿಗೆ ಗೌರವದ ಅಭಿನಂದನೆ- vishwanews24
ಕಾಪುವಿನಲ್ಲಿ ಸಿಸಿಬಿ ಸರ್ಕಲ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಅವರಿಗೆ ಗೌರವದ ಅಭಿನಂದನೆ.
ಕಾಪು: ಕಾಪು ಪೊಲೀಸ್ ವೃತ್ತನೀರಿಕ್ಷಕರಾಗಿ ಸೇವೆ ಸಲ್ಲಿಸಿ ಇದೀಗ ಮಂಗಳೂರು ಸಿಸಿಬಿಗೆ ವರ್ಗಾವಣೆಗೊಂಡಿರುವ ಶ್ರೀ ಮಹೇಶ್ ಪ್ರಸಾದ್ ಅವರಿಗೆ ಗೌರವದ ಬಿಳ್ಕೊಡುಗೆ ಸಮಾರಂಭ ಕಾರ್ಯಕ್ರಮ ಆದಿತ್ಯವಾರ ಕಾಪುವಿನಲ್ಲಿ ನಡೆಯಿತು.
ಈ ಸಂಧರ್ಭದಲ್ಲಿ ವೇದಿಕೆಯಲ್ಲಿ ನೂತನ ಕಾಪು ಪೋಲಿಸ್ ವೃತ್ತ ನಿರೀಕ್ಷಕರಾದ ಪ್ರಕಾಶ್ , ಪಡುಬಿದ್ರಿ ಶಿರ್ವ,ಕಾಪು ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಉಪಸ್ಥಿತರಿದ್ದರು.
ಕಾಪು ಲೀಲಾಧರ ಶೆಟ್ಟಿ, ಸಮಾಜಸೇವಕ ಸೂರಿ ಶೆಟ್ಟಿ,ಪುರಸಭಾ ಸದಸ್ಯ ಉಸ್ಮಾನ್,ಕಾಪು ಲಕ್ಷ್ಮೀ ಜನಾರ್ದನ ದೇವಾಲಯ ಆಡಳಿತ ಮೊಕ್ತೆಸರ ಮೋಹನ್ ಬಂಗೇರ,ಜಿತೇಂದ್ರ ಶೆಟ್ಟಿ ಉದ್ಯಾವರ,ಮೊದಲಾದವರು ಉಪಸ್ಥಿತರಿದ್ದರು.

