Featured

ಕಾಪು: ಅಕ್ರಮ ಕಸಾಯಿ ಖಾನೆಗೆ ಪೊಲೀಸರ ದಾಳಿ ; ಇಬ್ಬರು ಪರಾರಿ – Vishwanews24

ಕಾಪು: ಅಕ್ರಮ ಕಸಾಯಿ ಖಾನೆಗೆ ಪೊಲೀಸರ ದಾಳಿ ; ಇಬ್ಬರು ಪರಾರಿ

ಕಾಪು : ಮಲ್ಲಾರು ಗ್ರಾಮದ ಬಡಗರ ಗುತ್ತು ಎಂಬಲ್ಲಿನ ಅಕ್ರಮ ಕಸಾಯಿ ಖಾನೆಗೆ ಇಂದು ಬೆಳಿಗ್ಗೆ ಪೊಲೀಸರು ದಾಳಿ ಮಾಡಿದ್ದಾರೆ.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಮಲ್ಲಾರು ಗ್ರಾಮದ ಬಡಗರ ಗುತ್ತು ಎಂಬಲ್ಲಿಗೆ ಇಂದು ಬೆಳಿಗ್ಗೆ ತಲುಪಿ ಅಲ್ಲಿನ ಫ್ಯಾಕ್ಟರಿಯ ಸಮೀಪ ಮರೆಯಲ್ಲಿ ನಿಂತು ನೋಡಿದಾಗಿ ಫ್ಯಾಕ್ಟರಿಯ ಹಿಂಭಾಗದ ಹಾಡಿಯಲ್ಲಿ ಇಬ್ಬರು ವ್ಯಕ್ತಿಗಳು ಸೇರಿಕೊಂಡು ದನದ ಮಾಂಸವನ್ನು ಕಟಾವು ಮಾಡುತ್ತಿರುವುದು ಕಂಡುಬಂದಿದೆ.

ಕೂಡಲೇ ಪೊಲೀಸರು ಸ್ಥಳಕ್ಕೆ ದಾಳಿ ಮಾಡಿದ್ದು, ಈ ವೇಳೆ ಕಾಪುವಿನ ಭಾರತ್‌ ನಗರದ ನಿವಾಸಿ ಮೊಹಮ್ಮದ್‌ ಆರೀಫ್ ಹಾಗೂ ಇನ್ನೋರ್ವ ಪರಾರಿಯಾಗಿದ್ದಾರೆ. ಸ್ಥಳದಲ್ಲಿ ಇದ್ದ ಸುಮಾರು 200 ಕೆಜಿಯಷ್ಟು ದನದ ಮಾಂಸ, ಕೃತ್ಯಕ್ಕೆ ಬಳಸಿದ ಮಾರಕಾಯುಧ ಹಾಗೂ ಇತರ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Vishwa News 24

Recent Posts

ತುಳು ಲಿಪಿಗೆ ಡಿಜಿಟಲ್ ಸ್ಪರ್ಶ: ಸ್ಮಾರ್ಟ್‌ಫೋನ್‌ಗಳಲ್ಲಿ ‘ಕುರಲ್ ತುಳು ಟಚ್’ ಕೀಬೋರ್ಡ್ ಬಿಡುಗಡೆ – vishwanews24

ಡಿಜಿಟಲ್ ಜಗತ್ತಿಗೆ ತುಳು ಲಿಪಿಯ ಹೊಸ ಹೆಜ್ಜೆ: ‘ಕುರಲ್ ತುಳು ಟಚ್’ ಕೀಬೋರ್ಡ್ ಬಿಡುಗಡೆ ಮಂಗಳೂರು: ಕರಾವಳಿ ಕರ್ನಾಟಕದ ಹೆಮ್ಮೆಯ…

9 minutes ago

ಶಿರ್ವ : ಸೂಡ ಪರಿಸರದಲ್ಲಿ ಚಿರತೆ ಪ್ರತ್ಯಕ್ಷ: ಗ್ರಾಮಸ್ಥರು, ಶಾಲಾ ಮಕ್ಕಳಲ್ಲಿ ಆತಂಕ – vishwanews24

ಶಿರ್ವ : ಸೂಡ ಪರಿಸರದಲ್ಲಿ ಚಿರತೆ ಪ್ರತ್ಯಕ್ಷ: ಗ್ರಾಮಸ್ಥರು, ಶಾಲಾ ಮಕ್ಕಳಲ್ಲಿ ಆತಂಕ ಶಿರ್ವ: ಸೂಡ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ…

20 minutes ago

ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ನೇಮಕ – vishwanews24

ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ನೇಮಕ ನವದೆಹಲಿ: ಭಾರತೀಯ ವಾಯುಪಡೆಯ ಮುಂದಿನ ಮುಖ್ಯಸ್ಥರಾಗಿ ಏರ್…

27 minutes ago

ಕಾರ್ಕಳ : ಮನೆಯ ಗೋಡೌನ್‌ನಿಂದ 95 ಸಾವಿರ ರೂ. ಮೌಲ್ಯದ ಅಡಿಕೆ ಕಳವು – vishwanews24

ಕಾರ್ಕಳ : ಮನೆಯ ಗೋಡೌನ್‌ನಿಂದ 95 ಸಾವಿರ ರೂ. ಮೌಲ್ಯದ ಅಡಿಕೆ ಕಳವು ಕಾರ್ಕಳ: ತಾಲೂಕಿನ ಮಿಯ್ಯಾರು ಗ್ರಾಮದ ಮನೆಯೊಂದರ…

35 minutes ago

ಮೋದಿ ಸರ್ಕಾರದಿಂದ ಸರ್ವಾಂಗೀಣ ಅಭಿವೃದ್ಧಿಗೆ ಹೊಸ ದಿಕ್ಕು: ಬಿ.ವೈ .ವಿಜಯೇಂದ್ರ – vishwanews24

ಮೋದಿ ಸರ್ಕಾರದಿಂದ ಸರ್ವಾಂಗೀಣ ಅಭಿವೃದ್ಧಿಗೆ ಹೊಸ ದಿಕ್ಕು: ಬಿ.ವೈ .ವಿಜಯೇಂದ್ರ ಗದಗ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ…

42 minutes ago

ದಸರಾ ಸಂಭ್ರಮಕ್ಕೆ KSRTC ವಿಶೇಷ ಟೂರ್ ಪ್ಯಾಕೇಜ್: ಅ.11ರಿಂದ 20ರವರೆಗೆ ಮಂಗಳೂರಿನಿಂದ ವಿಶೇಷ ಬಸ್ ಸೇವೆ – vishwanews24

ಅ.11 ರಿಂದ 20ರವರೆಗೆ ಮಂಗಳೂರು-ಉಡುಪಿ ಕೆಎಸ್‌ಆರ್‌ಟಿಸಿಯಿಂದ ದಸರಾ ಸ್ಪೆಷಲ್ ಟೂರ್ ಪ್ಯಾಕೇಜ್ ಮಂಗಳೂರು: ನವರಾತ್ರಿ ಹಾಗೂ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ…

48 minutes ago