ಶಿರ್ವ: ಸೂಡ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸೂಡ ಪೇಟೆ, ಮಕ್ಕೇರಿಬೈಲು, ಬೆಳ್ಳಣ್ಣುಗುಡ್ಡೆ ಮತ್ತು ಸೂಡ ಸರಕಾರಿ ಹಿ.ಪ್ರಾ. ಶಾಲೆಯ ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ದೊಡ್ಡ ಗಾತ್ರದ ಚಿರತೆಯೊಂದು ಓಡಾಡುತ್ತಿದ್ದು ಗ್ರಾಮಸ್ಥರು, ಶಾಲಾ ಮಕ್ಕಳು ಭಯಭೀತರಾಗಿದ್ದಾರೆ.
ಅ. 5 ರ ರಾತ್ರಿ ಸೂಡ ದೇಗುಲದ ಅರ್ಚಕ ಶ್ರೀಶ ಭಟ್ ಸೂಡ ಅವರ ಮನೆಯ ಸಾಕು ನಾಯಿಯನ್ನು ಹಿಡಿಯಲು ಬಂದ ಚಿರತೆ ನಾಯಿಯನ್ನು ಗಂಭೀರ ಗಾಯಗೊಳಿಸಿ ಓಡಿಹೋಗಿದೆ.
ಈ ಪರಿಸರದಲ್ಲಿ ಹಲವು ಸಮಯಗಳಿಂದ ಚಿರತೆ ಅಡ್ಡಾಡುತ್ತಿದ್ದು, ಸೂಡದ ಸ್ಯಾಕ್ರೋಫೋನ್ ವಾದಕ ಸುನೀಲ್ ದೇವಾಡಿಗ, ಅಶೋಕ್ ದೇವಾಡಿಗ ಸೇರಿದಂತೆ ಹೆಚ್ಚಿನ ಮನೆಯ ಸಾಕು ನಾಯಿಗಳನ್ನು ಚಿರತೆ ಬೇಟೆಯಾಡಿದೆ. ಸೂಡ ಪೇಟೆಯಲ್ಲಿ ಅಂಗನವಾಡಿ, ಸರಕಾರಿ ಹಿ.ಪ್ರಾ.ಶಾಲೆ ಮತ್ತು ಪ್ರೌಢ ಶಾಲೆ ಇದ್ದು, ಶಾಲೆಗೆ ಬರುವ ಮಕ್ಕಳಿಗೆ ಭಯದ ವಾತಾವರಣ ನಿರ್ಮಾಣಗೊಂಡಿದೆ.
ಶಿರ್ವ-ಸೂಡ-ಪಳ್ಳಿ ಸಂಪರ್ಕ ರಸ್ತೆ ಬದಿಯಲ್ಲಿ ಪಿಲಾರುಕಾನ ರಕ್ಷಿತಾರಣ್ಯವೂ ಇದ್ದು, ಆಹಾರವನ್ನರಸಿಕೊಂಡು ಬಂದ ಚಿರತೆ, ಕಾಡುಕೋಣ, ಕಾಡು ಹಂದಿ ಮತ್ತಿತರ ಕಾಡು ಪ್ರಾಣಿಗಳು ಗ್ರಾಮೀಣ ಭಾಗಕ್ಕೆ ಲಗ್ಗೆ ಇಡುತ್ತಿವೆ.
ಪ್ರತೀದಿನ ಶಿರ್ವ, ಪಳ್ಳಿ, ಪೆರ್ನಾಲು-ಪಿಲಾರುಕಾನ-ಬೆಳಣ್ ಮೊದಲಾದೆಡೆ ಹಾಗೂ ವಿವಿಧ ಶಾಲಾ ಕಾಲೇಜುಗಳಿಗೆ ಕಾಲ್ನಡಿಗೆಯಲ್ಲಿ ಹೋಗುವ ವಿದ್ಯಾರ್ಥಿಗಳು, ವಿವಿಧ ಸ್ಥಳಗಳಿಗೆ ಕೆಲಸಕ್ಕೆ ಹೋಗುವ ಪರಿಸರದ ನಾಗರಿಕರು, ವಾಹನ ಸವಾರರು ಸಂಚರಿಸುತ್ತಿದ್ದು ಭಯಭೀತರಾಗಿದ್ದಾರೆ.
ಬೆಕ್ಷ್ಮಣ್ ಗ್ರಾ.ಪಂ. ಮಾಜಿ ಸದಸ್ಯ ಶಂಕರ ಕುಂದರ್ ಸೂಡ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯಾಡಳಿತ ಮತ್ತು ಅರಣ್ಯ ಇಲಾಖೆ ಜನರ ಸಮಸ್ಯೆಗೆ ತುರ್ತು ಪರಿಹಾರ ಒದಗಿಸಬೇಕಾಗಿದೆ.
ಸುರತ್ಕಲ್ ಎನ್‌ಐಟಿಕೆಯಲ್ಲಿ ನಿವೃತ್ತ ಮಿಗ್-21 ಯುದ್ಧ ವಿಮಾನ ಅನಾವರಣ ಮಂಗಳೂರು: ಸುರತ್ಕಲ್‌ನ ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ (ಎನ್‌ಐಟಿಕೆ)ಯ ಮುಂಭಾಗದಲ್ಲಿ…
ಡಿಜಿಟಲ್ ಜಗತ್ತಿಗೆ ತುಳು ಲಿಪಿಯ ಹೊಸ ಹೆಜ್ಜೆ: ‘ಕುರಲ್ ತುಳು ಟಚ್’ ಕೀಬೋರ್ಡ್ ಬಿಡುಗಡೆ ಮಂಗಳೂರು: ಕರಾವಳಿ ಕರ್ನಾಟಕದ ಹೆಮ್ಮೆಯ…
ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ನೇಮಕ ನವದೆಹಲಿ: ಭಾರತೀಯ ವಾಯುಪಡೆಯ ಮುಂದಿನ ಮುಖ್ಯಸ್ಥರಾಗಿ ಏರ್…
ಕಾರ್ಕಳ : ಮನೆಯ ಗೋಡೌನ್‌ನಿಂದ 95 ಸಾವಿರ ರೂ. ಮೌಲ್ಯದ ಅಡಿಕೆ ಕಳವು ಕಾರ್ಕಳ: ತಾಲೂಕಿನ ಮಿಯ್ಯಾರು ಗ್ರಾಮದ ಮನೆಯೊಂದರ…
ಮೋದಿ ಸರ್ಕಾರದಿಂದ ಸರ್ವಾಂಗೀಣ ಅಭಿವೃದ್ಧಿಗೆ ಹೊಸ ದಿಕ್ಕು: ಬಿ.ವೈ .ವಿಜಯೇಂದ್ರ ಗದಗ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ…
ಅ.11 ರಿಂದ 20ರವರೆಗೆ ಮಂಗಳೂರು-ಉಡುಪಿ ಕೆಎಸ್‌ಆರ್‌ಟಿಸಿಯಿಂದ ದಸರಾ ಸ್ಪೆಷಲ್ ಟೂರ್ ಪ್ಯಾಕೇಜ್ ಮಂಗಳೂರು: ನವರಾತ್ರಿ ಹಾಗೂ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ…