Featured

ತುಳು ಲಿಪಿಗೆ ಡಿಜಿಟಲ್ ಸ್ಪರ್ಶ: ಸ್ಮಾರ್ಟ್‌ಫೋನ್‌ಗಳಲ್ಲಿ ‘ಕುರಲ್ ತುಳು ಟಚ್’ ಕೀಬೋರ್ಡ್ ಬಿಡುಗಡೆ – vishwanews24

ಡಿಜಿಟಲ್ ಜಗತ್ತಿಗೆ ತುಳು ಲಿಪಿಯ ಹೊಸ ಹೆಜ್ಜೆ: ‘ಕುರಲ್ ತುಳು ಟಚ್’ ಕೀಬೋರ್ಡ್ ಬಿಡುಗಡೆ

ಮಂಗಳೂರು: ಕರಾವಳಿ ಕರ್ನಾಟಕದ ಹೆಮ್ಮೆಯ ತುಳು ಭಾಷೆಯನ್ನು ಡಿಜಿಟಲ್ ಜಗತ್ತಿನಲ್ಲಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ತುಳು ಭಾಷೆಯನ್ನು ರಾಜ್ಯ ಎರಡನೇ ಅಧಿಕೃತ ಭಾಷೆ ಎಂದು ಘೋಷಣೆ ಮಾಡಿದ ನಂತರ ಇದೀಗ ಅದರ ಲಿಪಿಯನ್ನು ಕೇವಲ ಶೈಕ್ಷಣಿಕ ಅಥವಾ ಗ್ರಂಥಾಲಯದ ದಾಖಲೆಗಳಿಗೆ ಸೀಮಿತಗೊಳಿಸದೆ, ದೈನಂದಿನ ಡಿಜಿಟಲ್ ಸಂವಹನಕ್ಕೆ ತರುವ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲು ನೆಟ್ಟಿದೆ. ಸ್ಮಾರ್ಟ್‌ಫೋನ್‌ಗಳಲ್ಲಿ ಅತ್ಯಂತ ಸರಳವಾಗಿ ತುಳು ಲಿಪಿಯನ್ನು ಟೈಪ್ ಮಾಡಲು ನೆರವಾಗುವ ‘ಕುರಲ್ ತುಳು ಟಚ್’ ಕೀಬೋರ್ಡ್ ಅನ್ನು ಬಿಡುಗಡೆ ಮಾಡಲಾಗಿದೆ.

‘ಜೈ ತುಳುನಾಡ್’ ಸಂಸ್ಥೆ ಹಾಗೂ ಯುವ ತಂತ್ರಜ್ಞರ ತಂಡವು ಅಭಿವೃದ್ಧಿಪಡಿಸಿರುವ ಈ ಕೀಬೋರ್ಡ್, ಜನಪ್ರಿಯ ‘ಬರವು ಸರ್ವ’ ಆಪ್‌ನ ಭಾಗವಾಗಿ ಕಾರ್ಯನಿರ್ವಹಿಸಲಿದೆ. ತುಳು ಅಕ್ಷರಗಳು, ಸಂಖ್ಯೆಗಳು, ಗುಣಿತಾಕ್ಷರ ಹಾಗೂ ಒತ್ತಕ್ಷರಗಳನ್ನು ಅತ್ಯಂತ ನಿಖರವಾಗಿ ಟೈಪ್ ಮಾಡಲು ಇದು ಅನುವು ಮಾಡಿಕೊಡುತ್ತದೆ. ಫ್ಲಟರ್ ಮತ್ತು ಫೈರ್‌ಬೇಸ್ ತಂತ್ರಜ್ಞಾನವನ್ನು ಬಳಸಿ ಕೇವಲ ಎರಡೇ ವಾರಗಳಲ್ಲಿ ಈ ಕೀಬೋರ್ಡ್ ಅನ್ನು ವಿನ್ಯಾಸಗೊಳಿಸಲಾಗಿದೆ. ಮೊಬೈಲ್‌ನ ಸಣ್ಣ ಪರದೆಯ ಮೇಲೆ ಅಕ್ಷರಗಳನ್ನು ಸರಿಯಾಗಿ ಗುರುತಿಸಿ ಟೈಪ್ ಮಾಡಲು ಅನುಕೂಲವಾಗುವಂತೆ ತುಳು ಫಾಂಟ್‌ಗಳನ್ನು ಕೀಬೋರ್ಡ್ ಲೇಔಟ್‌ಗೆ ನಿಖರವಾಗಿ ಜೋಡಿಸುವುದು ದೊಡ್ಡ ತಾಂತ್ರಿಕ ಸವಾಲಾಗಿತ್ತು ಎಂದು ತಂತ್ರಜ್ಞ ಹರ್ಷಿತ್ ದೇವಡಿಗ ತಿಳಿಸಿದ್ದಾರೆ.

ತುಳು ಕಲಿಕೆಗೆ ಬಲ ತಂದ ಆಪ್:

ಕೇವಲ ಕೀಬೋರ್ಡ್ ಮಾತ್ರವಲ್ಲದೆ, ‘ಬರವು ಸರ್ವ’ ಆಪ್ ತುಳು ಭಾಷೆ ಹಾಗೂ ಸಂಸ್ಕೃತಿಯನ್ನು ಕಲಿಯಲು ಬಯಸುವವರಿಗೆ ಸೂಕ್ತ ವೇದಿಕೆಯಾಗಿದೆ. ಈ ಆಪ್‌ನಲ್ಲಿ ತುಳು ನಿಘಂಟು , ದಿನನಿತ್ಯ ಬಳಸುವ ವಾಕ್ಯಗಳು, ಆಡಿಯೋ ಆಧಾರಿತ ಕಲಿಕಾ ಸಾಮಗ್ರಿಗಳು ಹಾಗೂ ಕರಾವಳಿಯ ಪರಂಪರೆಯನ್ನು ಸಾರುವ ಅಪರೂಪದ ಛಾಯಾಚಿತ್ರಗಳಿವೆ. ಬಳಕೆದಾರರು ನಿಘಂಟಿಗೆ ಹೊಸ ತುಳು ಪದಗಳನ್ನು ಸೂಚಿಸಲು ಅವಕಾಶವಿದ್ದು, ಪರಿಶೀಲನೆಯ ನಂತರ ಅವುಗಳನ್ನು ಆಪ್‌ಗೆ ಸೇರಿಸಲಾಗುತ್ತದೆ. ಸಂಶೋಧಕಿ ಬನಶ್ರೀ ಅವಿನಾಶ್ ಅವರು ತುಳು ಲಿಪಿ ಕಲಿಕೆಗೆ ಅಗತ್ಯವಾದ ಪಠ್ಯ ಹಾಗೂ ವಿಡಿಯೋ ವಿಷಯಗಳನ್ನು ಒದಗಿಸುವ ಮೂಲಕ ಆಪ್‌ಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ.

ಅಧಿಕೃತ ಯೂನಿಕೋಡ್ ಮಾನ್ಯತೆ:

ಕೇಂದ್ರ ಭಾರತೀಯ ಭಾಷೆಗಳ ಸಂಸ್ಥೆ ಅನುಮೋದಿಸಿದ ತುಳು ಲಿಪಿಯನ್ನು ಡಿಜಿಟಲ್ ಜಗತ್ತಿಗೆ ಪರಿಚಯಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಜೈ ತುಳುನಾಡ್ ಸಂಸ್ಥೆಯ ಶರತ್ ಕೊಡವೂರು ತಿಳಿಸಿದ್ದಾರೆ. ಇತ್ತೀಚೆಗೆ ಯೂನಿಕೋಡ್ ಕನ್ಸೋರ್ಟಿಯಂ 80 ತುಳು-ತಿಗಳಾರಿ ಅಕ್ಷರಗಳಿಗೆ ಅಧಿಕೃತ ಯೂನಿಕೋಡ್ ಮಾನ್ಯತೆ ನೀಡಿದ್ದು, ಡಿಜಿಟಲ್ ಮಾಧ್ಯಮಗಳಲ್ಲಿ ತುಳು ಬಳಕೆಗೆ ತಾಂತ್ರಿಕ ಅಡಿಪಾಯ ಹಾಕಿಕೊಟ್ಟಿದೆ. ತುಳು ಅಕಾಡೆಮಿ ಹಾಗೂ ವಿದ್ವಾಂಸರ ಸಾಲು ಸಾಲು ವರ್ಷಗಳ ಶ್ರಮದ ಫಲವಾಗಿ, ಯುವಜನತೆ ಈಗ ಇಂಗ್ಲಿಷ್ ಅಥವಾ ಕನ್ನಡ ಲಿಪಿಯಲ್ಲಿ ತುಳು ಬರೆಯುವ ಬದಲು, ತಮ್ಮದೇ ಸ್ವಂತ ತುಳು ಲಿಪಿಯಲ್ಲೇ ವಾಟ್ಸಾಪ್, ಮೆಸೇಜ್‌ಗಳಲ್ಲಿ ಟೈಪಿಂಗ್ ಮಾಡಬಹುದಾಗಿದೆ. ಪ್ರಸ್ತುತ ‘ಕುರಲ್ ತುಳು ಟಚ್’ ಕೀಬೋರ್ಡ್ ಆಂಡ್ರಾಯ್ಡ್ ಸಾಧನಗಳಲ್ಲಿ ಮಾತ್ರ ಲಭ್ಯವಿದ್ದು, ಶೀಘ್ರದಲ್ಲೇ ಐಒಎಸ್ ಬಳಕೆದಾರರಿಗೂ ಇದನ್ನು ವಿಸ್ತರಿಸಲು ತಂತ್ರಜ್ಞರ ತಂಡ ಯೋಜಿಸಿದೆ.

Vishwa News 24

Recent Posts

ಕಾಪುವಿನಲ್ಲಿ ನ.27ರಂದು ಬೃಹತ್ ಉಚಿತ ಉದ್ಯೋಗ ಮೇಳ -vishwanews24

ಕಾಪುವಿನಲ್ಲಿ ನ.27ರಂದು ಬೃಹತ್ ಉಚಿತ ಉದ್ಯೋಗ ಮೇಳ ವಿದೇಶಿ ಕಂಪೆನಿ ಸೇರಿದಂತೆ ಹತ್ತಾರು ಸಂಸ್ಥೆಗಳ ಭಾಗಹಿಸುವಿಕೆ ಕಾಪು: ಯುವಜನತೆಗೆ ಉದ್ಯೋಗಾವಕಾಶ…

12 hours ago

ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಪ್ರಮೋದ್ ಮಧ್ವರಾಜ್ ನೇಮಕ -vishwanews24

ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಪ್ರಮೋದ್ ಮಧ್ವರಾಜ್ ನೇಮಕ ನವದೆಹಲಿ: ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಪದಾಧಿಕಾರಿಗಳನ್ನು…

2 days ago

ನ. 24, 25 ರಂದು ಇತಿಹಾಸ ಪ್ರಸಿದ್ಧ ಕಾಪು ಮಾರಿಗುಡಿಗಳಲ್ಲಿ ಜಾರ್ದೆ ಮಾರಿಪೂಜೆ ಸಂಭ್ರಮ – vishwanews24

ನ. 24, 25 ರಂದು ಇತಿಹಾಸ ಪ್ರಸಿದ್ಧ ಕಾಪು ಮಾರಿಗುಡಿಗಳಲ್ಲಿ ಜಾರ್ದೆ ಮಾರಿಪೂಜೆ ಸಂಭ್ರಮ ಇತಿಹಾಸ ಪ್ರಸಿದ್ಧ ಕಾಪು ಹಳೆ…

4 days ago

ಸಂಬಂಧಿಕರನ್ನು ಬೀಳ್ಕೊಡಲು ಬಂದ 12 ಮಂದಿ ವಂದೇ ಭಾರತ್‌ ರೈಲಲ್ಲಿ ಲಾಕ್‌ ; 36 ಸಾವಿರ ದಂಡ – vishwanews24

ಸಂಬಂಧಿಕರನ್ನು ಬೀಳ್ಕೊಡಲು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರವೇಶಿಸಿದ 12 ಮಂದಿ ಸ್ವಯಂಚಾಲಿತ ಬಾಗಿಲುಗಳು ಮುಚ್ಚಿದ್ದರಿಂದ ರೈಲಿನೊಳಗೆ ಲಾಕ್ 140 ಕಿ.ಮೀ…

5 days ago

ಗ್ರಾಹಕರಿಗೆ ಗುಡ್ ನ್ಯೂಸ್: ಸೋನಾ ಮಸೂರಿ ಅಕ್ಕಿ ಬೆಲೆಯಲ್ಲಿ ಭಾರೀ ಇಳಿಕೆ, ಕೆಜಿಗೆ ₹ 20ರವರೆಗೆ ಕಡಿತ – vishwanews24

ಗ್ರಾಹಕರಿಗೆ ಗುಡ್ ನ್ಯೂಸ್: ಸೋನಾ ಮಸೂರಿ ಅಕ್ಕಿ ಬೆಲೆಯಲ್ಲಿ ಭಾರೀ ಇಳಿಕೆ, ಕೆಜಿಗೆ ₹20ರವರೆಗೆ ಕಡಿತ ಬೆಂಗಳೂರು: ಮಾರುಕಟ್ಟೆಯಲ್ಲಿ ಹೊಸ…

5 days ago

ನವೆಂಬರ್ 30ರವರೆಗೆ ಸೌದಿಗೆ ಇಂಡಿಗೋ ವಿಮಾನ ಹಾರಾಟ ರದ್ದು -vishwanews24

ನವೆಂಬರ್ 30ರವರೆಗೆ ಸೌದಿಗೆ ಇಂಡಿಗೋ ವಿಮಾನ ಹಾರಾಟ ರದ್ದು ನವದೆಹಲಿ: ಸೌದಿ ಅರೇಬಿಯಾದಲ್ಲಿನ ಪ್ರಸ್ತುತ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇಂಡಿಗೋ…

5 days ago